Asianet Suvarna News Asianet Suvarna News

ಹೇಳಿದ್ದು ಒಂದೇ ಸುಳ್ಳು ವಿಶ್ವಕಪ್ ಗೆದ್ದ ಭಾರತೀಯ ಕ್ರಿಕೆಟಿಗನ ಬದುಕು ನುಚ್ಚುನೂರು; ಈಗ ಈತ ಯೂಟ್ಯೂಬರ್!

ಭಾರತದ ಪ್ರತಿಭಾನ್ವಿತ ಕ್ರಿಕೆಟಿಗ ಮಾಡಿದ ಒಂದೇ ಒಂದು ಎಡವಟ್ಟು ಇಡೀ ಕ್ರಿಕೆಟ್ ಬದುಕನ್ನೇ ನುಚ್ಚುನೂರು ಮಾಡಿತು. ಯಾರು ಆ ಆಟಗಾರ? ಏನ್ ಸಮಾಚಾರ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ

U 19 World Cup hero Manjot Kalra cricket career finish after Age Fraud now he is Youtuber kvn
Author
First Published Oct 8, 2024, 5:11 PM IST | Last Updated Oct 8, 2024, 5:11 PM IST

ಬೆಂಗಳೂರು: ಭಾರತ ಕ್ರಿಕೆಟ್ ತಂಡದಲ್ಲಿ ಇತ್ತೀಚಿಗಿನ ದಿನಗಳಲ್ಲಿ ಯುವ ಕ್ರಿಕೆಟಿಗರಿಗೆ ಹೆಚ್ಚು ಹೆಚ್ಚು ಅವಕಾಶ ಸಿಗುತ್ತಿದೆ. ಬಾಂಗ್ಲಾದೇಶ ಎದುರಿನ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಿ ಯುವ ಆಟಗಾರರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಕಲ್ಪಿಸಲಾಗುತ್ತಿದೆ. ಕಳೆದ ವರ್ಷದ ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ತೋರಿದ್ದ ಐಪಿಎಲ್ ಸ್ಟಾರ್ಸ್‌ಗೆ ಭಾರತ ಚುಟುಕು ಕ್ರಿಕೆಟ್ ತಂಡದಲ್ಲಿ ಅವಕಾಶ ನೀಡಲಾಗಿದೆ. ಆದರೆ ನಾವಿಂದು ಹೇಳಲು ಹೊರಟಿರುವ ಆಟಗಾರ ಭಾರತಕ್ಕೆ ವಿಶ್ವಕಪ್ ಗೆದ್ದುಕೊಟ್ಟಾತ. ಆದರೆ ಆತ ಮಾಡಿದ ಒಂದೇ ಒಂದು ಎಡವಟ್ಟಿನಿಂದಾಗಿ ಆತನ ಕ್ರಿಕೆಟ್ ವೃತ್ತಿಬದುಕೇ ನುಚ್ಚುನೂರಾಗಿ ಹೋಯಿತು. ಈಗ ಆತ ಜೀವನ ನಿರ್ವಹಣೆಗಾಗಿ ಯೂಟ್ಯೂಬರ್ ಆಗಿರುವುದು ಬಹುತೇಕ ಮಂದಿಗೆ ಗೊತ್ತಿಲ್ಲ.

ಹೇಳಿದ್ದು ಒಂದೇ ಒಂದು ಸುಳ್ಳು, ವೃತ್ತಿಬದುಕೇ ನುಚ್ಚುನೂರು:

2018ರಲ್ಲಿ ನಡೆದ ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಶತಕ ಸಿಡಿಸುವ ಮೂಲಕ ಮಂಜೋತ್ ಕಾಲ್ರಾ ಭಾರತ ಕ್ರಿಕೆಟ್ ತಂಡವು ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆದರೆ ಆತ ಹೇಳಿದ ಒಂದೇ ಒಂದು ಸುಳ್ಳು ಆತನ ಕ್ರಿಕೆಟ್ ಬದುಕನ್ನೇ ನುಚ್ಚುನೂರಾಗುವಂತೆ ಮಾಡಿತು. ಅಂಡರ್ 19 ವಿಶ್ವಕಪ್ ಗೆದ್ದು ಭಾರತಕ್ಕೆ ಬಂದ ಮಂಜೋತ್ ಕಾಲ್ರಾ ಮೇಲೆ ವಯಸ್ಸಿನ ವಂಚನೆಯ ಆರೋಪ ಕೇಳಿ ಬಂದಿತ್ತು. ಈ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಡಿಡಿಸಿಎ(ಡೆಲ್ಲಿ ಡಿಸ್ಟ್ರಿಕ್ಸ್ಟ್ ಕ್ರಿಕೆಟ್ ಅಸೋಸಿಯೇಷನ್) ಮಂಜೋತ್ ಕಾಲ್ರಾ ಮೇಲೆ ನಿಷೇಧ ಹೇರಿತು. ಇದಾಗಿ ಕೆಲ ಸಮಯಗಳ ಬಳಿಕ ಮಂಜೋತ್ ಕಾಲ್ರಾ ತಮ್ಮದೇ ಯೂಟ್ಯೂಬ್ ಚಾನೆಲ್‌ನಲ್ಲಿ ತಮ್ಮ ಮೇಲೆ ವಿಧಿಸಲಾಗಿದ್ದ ನಿಷೇಧ ಶಿಕ್ಷೆಯನ್ನು ತೆರವುಗೊಳಿಸಿದ್ದಾರೆ ಎಂದು ಹೇಳಿದ್ದರು. 

ಬ್ಯಾಟಿಂಗ್ ಸ್ನೇಹಿ ಪಿಚ್‌ನಲ್ಲೂ ಬಾಬರ್ ಅಜಂ ಫೇಲ್; ನಿವೃತ್ತಿಗಿದು ಒಳ್ಳೆ ಸಮಯ ಎಂದ ಪಾಕ್ ನೆಟ್ಟಿಗರು!

ಅಂಡರ್ 19 ವಿಶ್ವಕಪ್‌ ಟೂರ್ನಿಯಲ್ಲಿ ಸ್ಮರಣೀಯ ಇನ್ನಿಂಗ್ಸ್ ಆಡಿದ್ದ ಮಂಜೋತ್ ಕಾಲ್ರಾ;

2018ರ ಅಂಡರ್ 19 ವಿಶ್ವಕಪ್ ಟೂರ್ನಿಯ ಫೈನಲ್‌ನಲ್ಲಿ ಪ್ರಶಸ್ತಿಗಾಗಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಿದ್ದವು. ಭಾರತಕ್ಕೆ ಫೈನಲ್ ಗೆಲ್ಲಲು ಆಸ್ಟ್ರೇಲಿಯಾ ತಂಡವು 217 ರನ್‌ಗಳ ಸವಾಲಿನ ಗುರಿ ನೀಡಿತ್ತು. ಭಾರತವು ಆರಂಭದಲ್ಲೇ ಪೃಥ್ವಿ ಶಾ ಹಾಗೂ ಶುಭ್‌ಮನ್ ಗಿಲ್ ವಿಕೆಟ್ ಕಳೆದುಕೊಂಡು ಕಂಗಾಲಾಗಿತ್ತು. ಆದರೆ ಮತ್ತೊಂದು ತುದಿಯಲ್ಲಿ ದಿಟ್ಟ ಬ್ಯಾಟಿಂಗ್ ನಡೆಸಿದಿ ಮಂಜೋತ್ ಕಾಲ್ರಾ, 102 ಎಸೆತಗಳನ್ನು ಎದುರಿಸಿ 8 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ ಆಕರ್ಷಕ 101 ರನ್ ಬಾರಿಸಿ ಟೀಂ ಇಂಡಿಯಾ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇಡೀ ಟೂರ್ನಿಯಲ್ಲಿ ಮಂಜೋತ್ ಕಾಲ್ರಾ 6 ಪಂದ್ಯಗಳ 5 ಇನ್ನಿಂಗ್ಸ್‌ಗಳಿಂದ 84ರ ಬ್ಯಾಟಿಂಗ್ ಸರಾಸರಿಯಲ್ಲಿ 252 ರನ್ ಬಾರಿಸಿ ಮಿಂಚಿದ್ದರು.

ಹಾಂಕಾಂಗ್‌ ಸಿಕ್ಸ್‌ನಲ್ಲಿ ಮತ್ತೆ ಭಾರತ ಕಣಕ್ಕೆ: ಪ್ರತಿ ತಂಡದಲ್ಲಿ ಆರು ಆಟಗಾರರು, ತಲಾ 5 ಓವರ್‌ ಆಟ!

ಈಗ ಯೂಟ್ಯೂಬರ್ ಆಗಿರುವ ಮಂಜೋತ್ ಕಾಲ್ರಾ:

ಕ್ರಿಕೆಟ್‌ನಿಂದ ದೂರಾದ ಬಳಿಕ ಮಂಜೋತ್ ಕಾಲ್ರಾ, 2023ರಲ್ಲಿ ಯೂಟ್ಯೂಬರ್ ಆಗಿ ತಮ್ಮ ಹೊಸ ಇನ್ನಿಂಗ್ಸ್‌ ಆರಂಭಿಸಿದ್ದಾರೆ. ತಮ್ಮ ಯೂಟ್ಯೂಬ್ ಚಾನೆಲ್‌ಗೆ ಸೆಕೆಂಡ್ ಇನ್ನಿಂಗ್ಸ್‌ ವಿಥ್ ಮಂಜೋತ್ ಕಾಲ್ರಾ ಎಂದು ಹೆಸರಿಟ್ಟಿದ್ದಾರೆ. ಇಲ್ಲಿಯವರೆಗೆ ಹಲವು ಕ್ರಿಕೆಟಿಗರು ಮಂಜೋತ್ ಕಾಲ್ರಾಗೆ ಸಂದರ್ಶನ ನೀಡಿದ್ದಾರೆ. ಅಭಿಷೇಕ್ ಶರ್ಮಾ, ಯುವ ವೇಗಿ ಮಯಾಂಕ್ ಯಾದವ್ ಸೇರಿದಂತೆ ಹಲವು ಕ್ರಿಕೆಟಿಗರು ಸೆಕೆಂಡ್ ಇನ್ನಿಂಗ್ಸ್‌ ವಿಥ್ ಮಂಜೋತ್ ಕಾಲ್ರಾ ಯೂಟ್ಯೂಬ್ ಚಾನೆಲ್‌ನಲ್ಲಿ ತಮ್ಮ ಕ್ರಿಕೆಟ್ ಜರ್ನಿಯನ್ನು ಹಂಚಿಕೊಂಡಿದ್ದಾರೆ.

Latest Videos
Follow Us:
Download App:
  • android
  • ios