ಪೋಚೆಫ್‌ಸ್ಟ್ರೋಮ್‌(ಫೆ.09): ಭಾರತ-ಬಾಂಗ್ಲಾದೇಶ ನಡುವಿನ ಅಂಡರ್ 19 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದೆ.

ಇಲ್ಲಿನ ಸೆನ್ವೆಸ್ ಪಾರ್ಕ್‌ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಭಾರತದ ಕಿರಿಯರ ತಂಡವು ದಾಖಲೆಯ 5ನೇ ಪ್ರಶಸ್ತಿಯ ಮೇಲೆ ಚಿತ್ತ ನೆಟ್ಟಿದೆ. ಭಾರತ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಸೆಮಿಫೈನಲ್‌ನಲ್ಲಿ ಪಾಕಿಸ್ತಾನ ವಿರುದ್ಧ ಆಡಿದ ತಂಡವೇ ಫೈನಲ್‌ನಲ್ಲಿ ಕಣಕ್ಕಿಳಿಯುತ್ತಿದೆ. ಇನ್ನು ಬಾಂಗ್ಲಾದೇಶ ತಂಡದ ಪರ ಒಂದು ಬದಲಾವಣೆ ಮಾಡಲಾಗಿದ್ದು, ಮುರಾದ್ ಬದಲಿಗೆ ಅವಿಶೇಕ್ ತಂಡ ಕೂಡಿಕೊಂಡಿದ್ದಾರೆ.

ಅಂಡರ್ 19 ವಿಶ್ವಕಪ್: 5ನೇ ವಿಶ್ವಕಪ್ ಗೆಲ್ಲಲು ಯಂಗೀಸ್ತಾನ್ ರೆಡಿ

ಭಾರತ ಪರ ಯಶಸ್ವಿ ಜೈಸ್ವಾಲ್, ಕಾರ್ತಿಕ್ ತ್ಯಾಗಿ ಸೇರಿದಂತೆ ಹಲವರು ಮಿಂಚಿನ ಪ್ರದರ್ಶನ ಮೂಲಕ ಗಮನ ಸೆಳೆದಿದ್ದಾರೆ. ಭಾರತ ತಂಡ ಒಂದು ಸೋಲು ಕಾಣದೆ ಫೈನಲ್ ಪ್ರವೇಶಿಸಿದೆ.

ಭಾರತದ ಕಿರಿಯರ ತಂಡಕ್ಕೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಕೆ.ಎಲ್. ರಾಹುಲ್, ಉಮೇಶ್ ಯಾದವ್ ಸೇರಿದಂತೆ ಹಲವು ಕ್ರಿಕೆಟಿಗರು ಶುಭ ಕೋರಿದ್ದಾರೆ.  

ತಂಡಗಳು ಹೀಗಿವೆ:

ಭಾರತ:

ಬಾಂಗ್ಲಾದೇಶ: