* ತಾಲಿಬಾನಿಗಳನ್ನು ಬಹಿರಂಗವಾಗಿ ಬೆಂಬಲಿಸಿದ ಅಫ್ರಿದಿ* ಪಾಕ್ ಮಾಜಿ ನಾಯಕ ಅಫ್ರಿದಿ ಮೇಲೆ ನೆಟ್ಟಿಗರು ಸಿಡಿಮಿಡಿ* ತಾಲಿಬಾನಿಗಳು ಬದಲಾಗಿದ್ದಾರೆ ಎಂದಿದ್ದ ಅಫ್ರಿದಿ

ಕರಾಚಿ(ಸೆ.02): ಆಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ಉಗ್ರಗಾಮಿ ಗುಂಪಾದ ತಾಲಿಬಾನಿಗಳ ಕುರಿತಂತೆ ಮೃದು ದೋರಣೆ ತಳೆದ ಪಾಕಿಸ್ತಾನ ಕ್ರಿಕೆಟ್‌ ತಂಡದ ಮಾಜಿ ನಾಯಕ ಶಾಹಿದ್ ಅಫ್ರಿದಿ ಮೇಲೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ.

ಈಗ ತಾಲಿಬಾನಿಗಳು ಬದಲಾವಣೆಯೊಂದಿಗೆ ಬಂದಿದ್ದಾರೆ. ಸ್ತ್ರೀಯರು ಉದ್ಯೋಗಕ್ಕೆ ಹೋಗಲು ಅವರು ಅವಕಾಶ ನೀಡಲಿದ್ದಾರೆ. ತಾಲಿಬಾನ್‌ಗೆ ಕ್ರಿಕೆಟ್‌ ತುಂಬಾ ಇಷ್ಟ. ಹಾಗಾಗಿ ಅಫ್ಘಾನಿಸ್ತಾನ ಪುರುಷ ಕ್ರಿಕೆಟ್‌ ತಂಡಕ್ಕೆ ಹೆಚ್ಚಿನ ಅನುಕೂಲ ದೊರೆಯಲಿದೆ. ಪಾಕಿಸ್ತಾನ ಹಾಗೂ ಆಫ್ಘಾನಿಸ್ತಾನ ನಡುವಿನ ದ್ವಿಪಕ್ಷೀಯ ಕ್ರಿಕೆಟ್ ಸರಣಿಯು ನಡೆಯಲಿದೆ ಎಂದು ಮಾಧ್ಯಮಗಳಲ್ಲಿ ಅಫ್ರಿದಿ ತಮ್ಮ ಅಭಿಪ್ರಾಯವನ್ನು ಹೊರಹಾಕಿದ್ದರು. 

ಮುಖವಾಡ ಬಯಲು: ಉಗ್ರ ತಾಲಿಬಾನಿಗಳ ಪರ ಬ್ಯಾಟ್‌ ಬೀಸಿದ ಶಾಹಿದ್ ಅಫ್ರಿದಿ..!

ಅಫ್ರಿದಿಯ ಈ ಹೇಳಿಕೆ ಹೊರಬೀಳುತ್ತಿದ್ದಂತೆಯೇ ನೆಟ್ಟಿಗರು ಕಟು ಶಬ್ದಗಳಲ್ಲಿ ಪಾಕಿಸ್ತಾನದ ಮಾಜಿ ಆಲ್ರೌಂಡರ್‌ನನ್ನು ಟೀಕಿಸಿದ್ದಾರೆ. ಇವರೇ ನೋಡಿ ತಾಲಿಬಾನಿಗೆ ಬಹಿರಂಗವಾಗಿ ಬೆಂಬಲಿಸಿದಾತ. ಮಾನವೀಯತೆ ಹಾಗೂ ಸ್ತ್ರಿ ಸ್ವಾತಂತ್ರ್ಯಕ್ಕೆ ವಿರುದ್ದವಾಗಿರುವ ರಕ್ತಪಿಪಾಸು ಉಗ್ರಸಂಘಟನೆಯನ್ನು ಬೆಂಬಲಿಸುವ ಈತನೂ ಒಬ್ಬ ಜಿಹಾದಿಯೇ ಎಂದು ಟೀಕಿಸಿದ್ದಾರೆ.

Scroll to load tweet…

ತಾಲಿಬಾನಿಗಳನ್ನು ಬೆಂಬಲಿಸುವ ಈತ ಮುಂದಿನ ಪಾಕಿಸ್ತಾನದ ಪ್ರಧಾನಿಯೆಂದು ಮತ್ತೆ ಕೆಲವರು ಲೇವಡಿ ಮಾಡಿದ್ದಾರೆ. 

Scroll to load tweet…
Scroll to load tweet…
Scroll to load tweet…