ಅಹಮದಾಬಾದ್(ಫೆ.26)‌: ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಅದಾನಿ, ರಿಲಯನ್ಸ್‌ ಹೆಸರನ್ನು ಬೌಲಿಂಗ್‌ ಎಂಡ್‌ಗಳಿಗೆ ಇಟ್ಟಿರುವ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಭಾರೀ ಚರ್ಚೆ ನಡೆಯುತ್ತಿರುವ ಸಮಯದಲ್ಲೇ, ಇದರ ಹಿಂದಿರುವ ಗುಟ್ಟು ಬಯಲಾಗಿದೆ. 

ಅದಾನಿ ಹಾಗೂ ರಿಲಯನ್ಸ್‌ ಎರಡೂ ಸಂಸ್ಥೆಗಳು ಕ್ರೀಡಾಂಗಣದಲ್ಲಿ ತಲಾ ಒಂದು ಕಾರ್ಪೋರೇಟ್‌ ಬಾಕ್ಸ್‌ಗಳನ್ನು 25 ವರ್ಷಕ್ಕೆ 250 ಕೋಟಿಗೆ ಖರೀದಿಸಿದ್ದು, ಇದರ ಒಪ್ಪಂದದ ಭಾಗವಾಗಿ ಬೌಲಿಂಗ್‌ ಎಂಡ್‌ಗಳಿಗೆ ಸಂಸ್ಥೆಗಳ ಹೆಸರಿಡಲಾಗಿದೆ ಎಂದು ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ.

ಬೌಲಿಂಗ್‌ ಸಿಗುತ್ತಿಲ್ಲವೆಂದು ಬುಮ್ರಾ, ಇಶಾಂತ್‌ ತಮಾಷೆ ಮಾಡಿದರು!

ವಿಶ್ವದ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂ ಎನಿಸಿಕೊಂಡಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಬರೋಬ್ಬರಿ 1.32 ಲಕ್ಷ ಮಂದಿ ಏಕಕಾಲದಲ್ಲಿ ಕ್ರಿಕೆಟ್ ವೀಕ್ಷಿಸಬಹುದಾಗಿದೆ. ಅದಾನಿ ಹಾಗೂ ರಿಲಯನ್ಸ್‌ ಎಂಡ್‌ ಹೆಸರಿಟ್ಟಿರುವುದಕ್ಕೆ ರಾಹುಲ್‌ ಗಾಂಧಿ ಸೇರಿದಂತೆ ಹಲವು ಮಂದಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಗ್ಯವಾಡಿದ್ದರು.