ಟೆಸ್ಟ್ ಕ್ರಿಕೆಟ್‌ನಲ್ಲಿ ಸೆಹ್ವಾಗ್ ಹೆಸರಿನಲ್ಲಿರುವ ಈ ವರ್ಲ್ಡ್ ರೆಕಾರ್ಡ್ ಎಂದಿಗೂ ಯಾರೂ ಮುರಿಯೋದು ಡೌಟ್..! ನೀವೇನಂತೀರಾ?
ಟಿ20 ಕ್ರಿಕೆಟ್ ಜನಪ್ರಿಯವಾಗುವ ಮೊದಲೇ ವಿರೇಂದ್ರ ಸೆಹ್ವಾಗ್, ಟೆಸ್ಟ್ ಕ್ರಿಕೆಟ್ ಅನ್ನು ಟಿ20 ಕ್ರಿಕೆಟ್ ಮಾದರಿಯಲ್ಲಿ ಆಡುವ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದರು. ಇದರ ಜತೆಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ಸೆಹ್ವಾಗ್ ಹಲವು ಅಪರೂಪದ ದಾಖಲೆಗಳನ್ನು ನಿರ್ಮಿಸಿದ್ದರು.
ಬೆಂಗಳೂರು: ಸ್ಪೋಟಕ ಬ್ಯಾಟಿಂಗ್‌ಗೆ ಮತ್ತೊಂದು ಹೆಸರೇ ವಿರೇಂದ್ರ ಸೆಹ್ವಾಗ್ ಎನ್ನುವುದು ಬಹುತೇಕ ಎಲ್ಲಾ ಕ್ರಿಕೆಟ್ ಅಭಿಮಾನಿಗಳಿಗೆ ಗೊತ್ತಿರುವ ವಿಚಾರ. ಚೆಂಡಿರುವುದೇ ದಂಡಿಸುವುದಕ್ಕೆ ಎನ್ನುವಷ್ಟರಮಟ್ಟಿಗೆ ಸೆಹ್ವಾಗ್ ತನ್ನ ಬ್ಯಾಟಿಂಗ್ ಆಕ್ರಮಣಕಾರಿ ಶೈಲಿಯನ್ನು ಅಳವಡಿಸಿಕೊಂಡು ಜನಪ್ರಿಯವಾಗಿದ್ದರು. ಎದುರಾಳಿ ಯಾವುದೇ ತಂಡವಾಗಿದ್ದರೂ, ಎಂತಹ ಮಾರಕ ಬೌಲರ್ ಆಗಿದ್ದರೂ, ಎಂತಹದ್ದೇ ಪಿಚ್ ಆಗಿದ್ದರೂ ಸಹಾ ಸೆಹ್ವಾಗ್ ತಮ್ಮ ನಿರ್ಭಿತ ಬ್ಯಾಟಿಂಗ್ ಮೂಲಕವೇ ಎದುರಾಳಿ ಬೌಲಿಂಗ್ ಪಡೆಯ ಎದೆಯಲ್ಲಿ ನಡುಕು ಹುಟ್ಟಿಸುತ್ತಿದ್ದರು. ಸೆಹ್ವಾಗ್ ಆಕ್ರಮಣಕಾರಿ ಬ್ಯಾಟಿಂಗ್ ಹೇಗಿರುತಿತ್ತು ಅಂದ್ರೆ ಫೀಲ್ಡರ್‌ಗಳು ಸುಮ್ಮನೆ ಪ್ರೇಕ್ಷಕರಾಗಿರುತ್ತಿದ್ದರು.
ಟಿ20 ಕ್ರಿಕೆಟ್ ಜನಪ್ರಿಯವಾಗುವ ಮೊದಲೇ ವಿರೇಂದ್ರ ಸೆಹ್ವಾಗ್, ಟೆಸ್ಟ್ ಕ್ರಿಕೆಟ್ ಅನ್ನು ಟಿ20 ಕ್ರಿಕೆಟ್ ಮಾದರಿಯಲ್ಲಿ ಆಡುವ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದರು. ಇದರ ಜತೆಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ಸೆಹ್ವಾಗ್ ಹಲವು ಅಪರೂಪದ ದಾಖಲೆಗಳನ್ನು ನಿರ್ಮಿಸಿದ್ದರು. ಭಾರತ ಪರ 104 ಟೆಸ್ಟ್ ಪಂದ್ಯಗಳನ್ನಾಡಿದ ಸೆಹ್ವಾಗ್ 49.34ರ ಬ್ಯಾಟಿಂಗ್ ಸರಾಸರಿಯಲ್ಲಿ 8586 ರನ್ ಬಾರಿಸಿ ಮಿಂಚಿದ್ದಾರೆ. 2000ನೇ ಇಸವಿಯಿಂದಲೂ ಒಂದು ದಶಕಗಳ ಕಾಲ ಅಬ್ಬರಿಸಿದ್ದ ಸೆಹ್ವಾಗ್ 23 ಶತಕ ಸಿಡಿಸಿ ಮಿಂಚಿದ್ದರು.
ಸಾನಿಯಾಗೆ ಕೈಕೊಟ್ಟ ಶೋಯೆಬ್ ಮಲಿಕ್ ಮೇಲೆ ಸ್ಪಾಟ್ ಫಿಕ್ಸಿಂಗ್ ಆರೋಪ..! ಹನಿಮೂನ್ ಪ್ಲಾನಿಂಗ್‌ಗಾಗಿ ಎಂದ ಫ್ಯಾನ್ಸ್..!
ವಿರೇಂದ್ರ ಸೆಹ್ವಾಗ್ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿವೇಗವಾಗಿ ದ್ವಿಶತಕ ಸಿಡಿಸಿದ ಭಾರತದ ಬ್ಯಾಟರ್ ಎನ್ನುವ ದಾಖಲೆ ಬರೆದಿದ್ದಾರೆ. ಇದಷ್ಟೇ ಅಲ್ಲದೇ ಟೆಸ್ಟ್ ಕ್ರಿಕೆಟ್‌ನಲ್ಲಿ ತ್ರಿಶತಕ ಬಾರಿಸಿದ ಭಾರತದ ಮೊದಲ ಹಾಗೂ ಎರಡು ಬಾರಿ ತ್ರಿಶತಕ ಸಿಡಿಸಿದ ಜಗತ್ತಿನ 4 ಬ್ಯಾಟರ್‌ಗಳಲ್ಲಿ ಸೆಹ್ವಾಗ್ ಒಬ್ಬರು ಎನಿಸಿಕೊಂಡಿದ್ದಾರೆ. ಇನ್ನು 2009ರಲ್ಲಿ ಶ್ರೀಲಂಕಾ ಎದುರು ಕೇವಲ 7 ರನ್ ಅಂತರದಲ್ಲಿ ಮೂರನೇ ತ್ರಿಶತಕ ಸಿಡಿಸುವ ಅವಕಾಶವನ್ನು ಕೈಚೆಲ್ಲಿದರು.
ವಿರೇಂದ್ರ ಸೆಹ್ವಾಗ್ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿವೇಗವಾಗಿ ತ್ರಿಶತಕ ಬಾರಿಸಿದ ಬ್ಯಾಟರ್ ಎನಿಸಿದ್ದಾರೆ. ಸೆಹ್ವಾಗ್ ಕೇವಲ 278 ಎಸೆತಗಳನ್ನು ಎದುರಿಸಿ ಈ ಸಾಧನೆ ಮಾಡಿದ್ದಾರೆ. ಈ ಮೂಲಕ ಮ್ಯಾಥ್ಯೂ ಹೇಡನ್(364 ಎಸೆತ) ಅವರ ಹೆಸರಿನಲ್ಲಿದ್ದ ದಾಖಲೆ ತಮ್ಮ ಹೆಸರಿಗೆ ಬರೆಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಇದಾಗಿ ಒಂದು ದಶಕವೇ ಕಳೆದಿದ್ದರೂ ಯಾವೊಬ್ಬ ಬ್ಯಾಟರ್ ಕೂಡಾ 300ಕ್ಕಿಂತ ಕಡಿಮೆ ಎಸೆತದಲ್ಲಿ ತ್ರಿಶತಕ ಬಾರಿಸಲು ಸಫಲವಾಗಿಲ್ಲ.
ಈ ಕ್ರಿಕೆಟಿಗನ ಬಳಿಯಿದೆ ₹1.5 ಲಕ್ಷ ಕೋಟಿ ಸಂಪತ್ತು..! ಈತನ ಪಿತ್ರಾರ್ಜಿತ ಆಸ್ತಿಯೇ 70 ಸಾವಿರ ಕೋಟಿ..!
ವಿರೇಂದ್ರ ಸೆಹ್ವಾಗ್ ಅತಿವೇಗದ ಟೆಸ್ಟ್ ತ್ರಿಶತಕ ಸಿಡಿಸಿ ಸುಮಾರು 16 ವರ್ಷಗಳೇ ಗತಿಸಿವೆ. ಇಂದಿಗೂ ಆ ದಾಖಲೆ ಅಚ್ಚಳಿಯದೇ ಉಳಿದಿದೆ. ಈ ಟೆಸ್ಟ್ ದಾಖಲೆ ಬ್ರೇಕ್ ಆಗೋದು ಸದ್ಯಕ್ಕಂತೂ ಅನುಮಾನ. ನೀವೇನಂತೀರಾ?
ಒಂದೂವರೆ ದಶಕದಿಂದ ವಿರೇಂದ್ರ ಸೆಹ್ವಾಗ್ ಹೆಸರಿನಲ್ಲಿರುವ ಈ ಅಪರೂಪದ ಟೆಸ್ಟ್ ದಾಖಲೆಯನ್ನು ಯಾವ ಬ್ಯಾಟರ್ ಬ್ರೇಕ್ ಮಾಡಬಹುದು ಎನ್ನುವುದನ್ನು ಕಮೆಂಟ್ ಮಾಡಿ.