Asianet Suvarna News Asianet Suvarna News

ಸಾನಿಯಾಗೆ ಕೈಕೊಟ್ಟ ಶೋಯೆಬ್ ಮಲಿಕ್ ಮೇಲೆ ಸ್ಪಾಟ್ ಫಿಕ್ಸಿಂಗ್ ಆರೋಪ..! ಹನಿಮೂನ್‌ ಪ್ಲಾನಿಂಗ್‌ಗಾಗಿ ಎಂದ ಫ್ಯಾನ್ಸ್..!

ಮದುವೆ ಬೆನ್ನಲ್ಲೇ ಮೈದಾನಕ್ಕಿಳಿದ ಶೋಯೆಬ್ ಮಲಿಕ್ ಅವರಿಗೆ ಅದೃಷ್ಟ ಕೈಕೊಟ್ಟಿದೆ. ಮೈದಾನಕ್ಕಿಳಿದ ಮೊದಲ ಪಂದ್ಯದಲ್ಲೇ ಶೋಯೆಬ್ ಮಲಿಕ್ ಆಡಿದ ತಂಡವು 8 ವಿಕೆಟ್‌ಗಳ ಹೀನಾಯ ಸೋಲು ಅನುಭವಿಸಿತು. ವೈಯುಕ್ತಿಕವಾಗಿಯೂ ಮಲಿಕ್ ಉತ್ತಮ ಪ್ರದರ್ಶನ ತೋರಲು ವಿಫಲರಾದರು.

Sania Mirza ex husband Shoaib Malik accused of spot fixing fans say honeymoon planning kvn
Author
First Published Jan 30, 2024, 2:05 PM IST

ಬೆಂಗಳೂರು: ಭಾರತ ಟೆನಿಸ್ ತಾರೆ ಸಾನಿಯಾ ಮಿರ್ಜಾಗೆ ಡಿವೋರ್ಸ್ ನೀಡಿ ಪಾಕಿಸ್ತಾನದ ಅನುಭವಿ ಕ್ರಿಕೆಟಿಗ ಶೋಯೆಬ್ ಮಲಿಕ್ ಇದೀಗ ಪಾಕಿಸ್ತಾನದ ನಟಿ ಸನಾ ಜಾವೆದ್ ಅವರೊಂದಿಗೆ ಮೂರನೇ ಮದುವೆ ಆಗಿರುವುದು ಎಲ್ಲರಿಗೂ ಗೊತ್ತೇ ಇದೆ. ಇದು ಭಾರತ ಹಾಗೂ ಪಾಕಿಸ್ತಾನದ ಸೋಷಿಯಲ್ ಮೀಡಿಯಾದಲ್ಲಿ ಸಂಚಲನವನ್ನೇ ಮೂಡಿಸಿತ್ತು.

ಮದುವೆಯಾದ ಕೆಲವೇ ಗಂಟೆಗಳ ಬಳಿಕ ಶೋಯೆಬ್ ಮಲಿಕ್, ಬಾಂಗ್ಲಾದೇಶ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಪಾಲ್ಗೊಂಡಿದ್ದರು. ಶೋಯೆಬ್ ಮಲಿಕ್, ಬಾಂಗ್ಲಾದೇಶ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಫಾರ್ಚ್ಯೂನ್ ಬರ್ಸೀಲ್ ತಂಡವನ್ನು ಪ್ರತಿನಿಧಿಸುತ್ತಿದ್ದು, ಖುಲ್ನಾ ಟೈಗರ್ಸ್‌ ಎದುರು ಕಣಕ್ಕಿಳಿದು ಗಮನ ಸೆಳೆದಿದ್ದರು.

ಮದುವೆ ಬೆನ್ನಲ್ಲೇ ಮೈದಾನಕ್ಕಿಳಿದ ಶೋಯೆಬ್ ಮಲಿಕ್ ಅವರಿಗೆ ಅದೃಷ್ಟ ಕೈಕೊಟ್ಟಿದೆ. ಮೈದಾನಕ್ಕಿಳಿದ ಮೊದಲ ಪಂದ್ಯದಲ್ಲೇ ಶೋಯೆಬ್ ಮಲಿಕ್ ಆಡಿದ ತಂಡವು 8 ವಿಕೆಟ್‌ಗಳ ಹೀನಾಯ ಸೋಲು ಅನುಭವಿಸಿತು. ವೈಯುಕ್ತಿಕವಾಗಿಯೂ ಮಲಿಕ್ ಉತ್ತಮ ಪ್ರದರ್ಶನ ತೋರಲು ವಿಫಲರಾದರು.

ಸಾನಿಯಾ-ಶೋಯೆಬ್ ದಾಂಪತ್ಯಕ್ಕೆ ಹುಳಿ ಹಿಂಡಿ, ಇದೀಗ ಹೊಸ ಪೋಸ್ಟ್ ಹಾಕಿದ ಸನಾ..! ಮಲಿಕ್ ಹೊಸ ಮಡದಿ ರೋಸ್ಟ್ ಮಾಡಿದ ನೆಟ್ಟಿಗರು

ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿಳಿದ ಬಲಗೈ ಬ್ಯಾಟರ್ ಶೋಯೆಬ್ ಮಲಿಕ್ ಸ್ಪೋಟಕ ಬ್ಯಾಟಿಂಗ್ ಮೂಲಕ ತಂಡಕ್ಕೆ ಆಸರೆಯಾಗಬೇಕಿತ್ತು. ಆದರೆ ಶೋಯೆಬ್ ಮಲಿಕ್ 6 ಎಸೆತಗಳನ್ನು ಎದುರಿಸಿ ಕೇವಲ 5 ರನ್ ಗಳಿಸಲಷ್ಟೇ ಶಕ್ತರಾದರು. ಬ್ಯಾಟಿಂಗ್‌ನಲ್ಲಿ ಮಲಿಕ್ ಟೆಸ್ಟ್ ಆಡುತ್ತಿದ್ದಾರೇನೋ ಎನ್ನುವಂತೆ ಬಾಸವಾಗುತ್ತಿತ್ತು. 

ಇನ್ನು ಮಹತ್ವದ ಘಟ್ಟದಲ್ಲಿ ಬೌಲಿಂಗ್ ಮಾಡಿದ ಶೋಯೆಬ್ ಮಲಿಕ್ ಎರಡು ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 18 ರನ್ ಬಿಟ್ಟುಕೊಟ್ಟರು. ಯಾವುದೇ ಬೌಲರ್‌ಗೆ ಒಂದಲ್ಲಾ ಒಂದು ದಿನ ಕೆಟ್ಟ ದಿನ ಇರುತ್ತೆ.

'ಇನ್ನಾದರೂ...?' ಶೋಯೆಬ್ ಮಲಿಕ್ ಮದುವೆಯಾಗಿದ್ದನ್ನ ಲೇವಡಿ ಮಾಡಿದ ಶಾಹಿದ್ ಅಫ್ರಿದಿ..! ಏನಂದ್ರು ನೀವೇ ನೋಡಿ

ಇನ್ನು ಕ್ರಿಕೆಟ್‌ನಲ್ಲಿ ಬೌಲರ್ ನೋಬಾಲ್ ಹಾಕುವುದನ್ನು ಕ್ರೈಮ್ ಎಂದೇ ಕರೆಯಲಾಗುತ್ತದೆ. ಅದರಲ್ಲೂ ಸ್ಪಿನ್ ಬೌಲರ್ ನೋಬಾಲ್ ಹಾಕಿದರಂತೂ ಅದು ಮಹಾಪರಾಧವೆಂದೇ ಕರೆಯಲಾಗುತ್ತದೆ. ಮದುವೆಯಾದ ಬೆನ್ನಲ್ಲೇ ಶೋಯೆಬ್ ಮಲಿಕ್ ಒಂದಲ್ಲ ಎರಡಲ್ಲಾ ಬರೋಬ್ಬರಿ ಮೂರು ನೋ ಬಾಲ್ ಹಾಕಿ ಸುದ್ದಿಯಾಗಿದ್ದಾರೆ.

ಸಾಕಷ್ಟು ಅನುಭವಿ ಆಲ್ರೌಂಡರ್ ಆಗಿ ಗುರುತಿಸಿಕೊಂಡಿರುವ ಶೋಯೆಬ್ ಮಲಿಕ್ ಈ ರೀತಿ ಮೂರು ನೋಬಾಲ್ ಹಾಕಿದ್ದು ಅಭಿಮಾನಿಗಳಿಗೆ ಹಾಗೂ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ಸನಾ ಜಾವೆದ್ ಜತೆ ಮೂರನೇ ಮದುವೆಯಾಗಿರುವ ಶೋಯೆಬ್ ಮಲಿಕ್ ಹನಿಮೂನ್‌ಗೆ ಹಣದ ವ್ಯವಸ್ಥೆ ಮಾಡಲು ಈ ರೀತಿ ನೋಬಾಲ್ ಹಾಕಿ ಸ್ಪಾಟ್ ಫಿಕ್ಸಿಂಗ್ ಮಾಡಿದ್ದಾರೆ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.

ಶೋಯೆಬ್ ಮಲಿಕ್ ಸ್ಪಾಟ್ ಫಿಕ್ಸಿಂಗ್ ಮಾಡಿಕೊಂಡಿದ್ದರಿಂದ ಉದ್ದೇಶಪೂರ್ವಕವಾಗಿಯೇ ಹೀಗೆ ಒಂದೇ ಪಂದ್ಯದಲ್ಲಿ ನೋಬಾಲ್ ಎಸೆದಿದ್ದಾರೆ ಎಂದು ಆರೋಪಿಸಿದ್ದಾರೆ. ಇನ್ನೋರ್ವ ನೆಟ್ಟಿಗ ಮದುವೆಗೆ ಮಾಡಿದ ಖರ್ಚನ್ನು ತುಂಬಿಕೊಳ್ಳಲು ಹೀಗೆ ನೋಬಾಲ್ ಹಾಕುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
 

Follow Us:
Download App:
  • android
  • ios