ಬಿಸಿಸಿಐನಿಂದ ಅಧ್ಯಕ್ಷ ಸೌರವ್ ಗಂಗೂಲಿಗೆ ಗೇಟ್‌ಪಾಸ್ಎರಡನೇ ಅವಧಿಗೆ ಬಿಸಿಸಿಐ ಅಧ್ಯಕ್ಷರಾಗದೇ ಇರುವುದರ ಕುರಿತಂತೆ ರಾಜಕೀಯ ತಿರುವುಗಂಗೂಲಿ ಅಧ್ಯಕ್ಷರಾಗಿ ತೋರಿದ ಪ್ರದರ್ಶನದ ಬಗ್ಗೆ ಬಿಸಿಸಿಐನೊಳಗೆ ಅಸಮಾಧಾನ

ಮುಂಬೈ(ಅ.13): ಭಾರತೀಯ ಕ್ರಿಕೆಟ್‌ ಆಡಳಿತಕ್ಕೆ ಹೊಸ ಬಾಸ್‌ ಆಯ್ಕೆಯಾಗುವುದು ಖಚಿತವಾದ ಬೆನ್ನಲ್ಲೇ ಸೌರವ್‌ ಗಂಗೂಲಿಯನ್ನು ಬಿಸಿಸಿಐ ಕಡೆಗಣಿಸಿದ್ದು ಏಕೆ ಎನ್ನುವ ಪ್ರಶ್ನೆ ಮೂಡಿದೆ. ಮೂಲಗಳ ಪ್ರಕಾರ ಗಂಗೂಲಿ ಹಾಗೂ ಬಿಸಿಸಿಐನಲ್ಲಿನ ಅವರ ಸಹೋದ್ಯೋಗಿಗಳ ನಡುವೆ ಮನಸ್ತಾಪವಿದೆ ಎನ್ನುವುದು ತಿಳಿದುಬಂದಿದೆ. ಮಂಗಳವಾರ ನಾಮಪತ್ರ ಸಲ್ಲಿಕೆಗೂ ಮುನ್ನ ನಡೆದ ಸಭೆ ವೇಳೆ ಗಂಗೂಲಿಗೆ ಭಾರೀ ಮುಜುಗರ ಉಂಟಾಯಿತು ಎಂದು ಮಾಧ್ಯಮಗಳು ವರದಿ ಮಾಡಿವೆ.

ಸೌರವ್ ಗಂಗೂಲಿ ಎರಡನೇ ಅವಧಿಗೆ ಬಿಸಿಸಿಐ ಅಧ್ಯಕ್ಷರಾಗದೇ ಇರುವುದರ ಕುರಿತಂತೆ ರಾಜಕೀಯ ತಿರುವುಗಳು ಪಡೆದುಕೊಂಡಿದ್ದು, ಪಶ್ಚಿಮ ಬಂಗಾಳದ ಆಡಳಿತಾರೂಢ ಪಕ್ಷ ತೃಣಮೂಲ ಕಾಂಗ್ರೆಸ್, ಬಿಜೆಪಿ ಮೇಲೆ ಗಂಭೀರ ಆರೋಪ ಮಾಡಿದೆ.

ಕಳೆದ ವರ್ಷ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಪಕ್ಷವು, ಪಶ್ಚಿಮ ಬಂಗಾಳದಲ್ಲಿ ಪ್ರಖ್ಯಾತವಾಗಿರುವ ಸೌರವ್ ಗಂಗೂಲಿ, ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂದು ಜನರಲ್ಲಿ ಸುಳ್ಳು ಸುದ್ದಿಯನ್ನು ಹರಡಲು ಪ್ರಯತ್ನಿಸಿತ್ತು ಎಂದು ತೃಣಮೂಲ ಕಾಂಗ್ರೆಸ್ ಪಕ್ಷದ ವಕ್ತಾರ ಕುನಾಲ್ ಘೋಷ್ ಆರೋಪಿಸಿದ್ದಾರೆ.

ಸೌರವ್ ಗಂಗೂಲಿ ಕಡೆಗಣನೆಗೆ ಕಾರಣ?

1. ಗಂಗೂಲಿ 3 ವರ್ಷಗಳಲ್ಲಿ ಅಧ್ಯಕ್ಷರಾಗಿ ತೋರಿದ ಪ್ರದರ್ಶನದ ಬಗ್ಗೆ ಬಿಸಿಸಿಐನೊಳಗೆ ಅಸಮಾಧಾನವಿದೆ ಎನ್ನಲಾಗಿದೆ.

2. ಯಾವುದೇ ಸದಸ್ಯರು ಸತತ 2 ಅವಧಿಗೆ ಅಧ್ಯಕ್ಷರಾಗಲು ಸಾಧ್ಯವಿಲ್ಲ. ಐಪಿಎಲ್‌ ಅಧ್ಯಕ್ಷ ಹುದ್ದೆ ನಿರಾಕರಿಸಿದ್ದು ಅಸಮಾಧಾನಕ್ಕೆ ಕಾರಣ.

3. ಬಿಸಿಸಿಐಗೆ ಪ್ರಾಯೋಜಕ್ವತ ನೀಡುವ ಸಂಸ್ಥೆಗಳನ್ನು ಬಿಟ್ಟು ಆ ಸಂಸ್ಥೆಗಳ ಸ್ಪರ್ಧಿಗಳ ಜೊತೆ ಜಾಹೀರಾತು ಒಪ್ಪಂದದಲ್ಲಿ ಭಾಗಿ.

ಮುಂದೇನು ಮಾಡಬಹುದು?

1. ಬಂಗಾಳಕ್ಕೆ ವಾಪಸ್ಸಾಗಿ ರಾಜಕೀಯ ಪ್ರವೇಶ ಸಾಧ್ಯತೆ. ಬಿಜೆಪಿ ಸೇರಲಿದ್ದಾರೆ ಎನ್ನುವ ಗುಸುಗುಸು.

2. ಡೆಲ್ಲಿ ಕ್ಯಾಪಿಟಲ್ಸ್‌ ಐಪಿಎಲ್‌ ತಂಡದ ನಿರ್ದೇಶಕ ಹುದ್ದೆಗೆ ಮರಳುವ ಸಾಧ್ಯತೆ.

3. ಬಿಸಿಸಿಐ ಜೊತೆಗಿನ ಮನಸ್ತಾಪ ತಿಳಿಗೊಳಿಸಿಕೊಂಡು ಐಸಿಸಿ ಅಧ್ಯಕ್ಷ ಹುದ್ದೆಗೆ ಸ್ಪರ್ಧೆ.

ತ್ರಿಕೋನ ಟಿ20: ಫೈನಲ್‌ ಪ್ರವೇಶಿಸಿದ ನ್ಯೂಜಿಲೆಂಡ್‌

ಕ್ರೈಸ್ಟ್‌ಚರ್ಚ್‌: ಬಾಂಗ್ಲಾದೇಶ ವಿರುದ್ಧ 48 ರನ್‌ ಗೆಲುವು ಸಾಧಿಸಿದ ಆತಿಥೇಯ ನ್ಯೂಜಿಲೆಂಡ್‌ ತ್ರಿಕೋನ ಟಿ20 ಸರಣಿಯಲ್ಲಿ ಫೈನಲ್‌ ಪ್ರವೇಶಿಸಿದ್ದು, ಪಾಕಿಸ್ತಾನ ವಿರುದ್ಧ ಪ್ರಶಸ್ತಿಗಾಗಿ ಸೆಣಸಲಿದೆ. ಬುಧವಾರ ನಡೆದ ಪಂದ್ಯದಲ್ಲಿ ಕಿವೀಸ್‌ 5 ವಿಕೆಟ್‌ಗೆ 208 ರನ್‌ ಕಲೆ ಹಾಕಿತು. ಕಾನ್‌ವೇ 64(40 ಎಸೆತ), ಫಿಲಿಫ್ಸ್‌ 60(24 ಎಸೆತ) ಅಬ್ಬರಿಸಿದರು. ಬಾಂಗ್ಲಾ 7 ವಿಕೆಟ್‌ಗೆ 160 ರನ್‌ ಗಳಿಸಿ ಸೋಲೊಪ್ಪಿಕೊಂಡಿತು. ಶಕೀಬ್‌ (70) ಏಕಾಂಗಿ ಹೋರಾಟ ವ್ಯರ್ಥವಾಯಿತು.

BJP ಸೇರಲಿಲ್ಲ ದಾದಾ, ಅದಕ್ಕೆ BCCI ನಿಂದ ಗಂಗೂಲಿಗೆ ಗೇಟ್‌ಪಾಸ್: ಟಿಎಂಸಿ

ಟಿ20: ಇಂಗ್ಲೆಂಡ್‌ಗೆ ಸರಣಿ

ಕ್ಯಾನ್ಬೆರಾ: ಆಸ್ಪ್ರೇಲಿಯಾ ವಿರುದ್ಧ 3 ಪಂದ್ಯಗಳ ಟಿ20 ಸರಣಿಯನ್ನು ಇಂಗ್ಲೆಂಡ್‌ 2-0ಯಲ್ಲಿ ವಶಪಡಿಸಿಕೊಂಡಿದೆ. 2ನೇ ಟಿ20ಯಲ್ಲಿ ಇಂಗ್ಲೆಂಡ್‌ 7 ವಿಕೆಟ್‌ಗೆ 178 ರನ್‌ ಗಳಿಸಿತ್ತು. ಆಸೀಸ್‌ ವಿಕೆಟ್‌ಗೆ 170 ರನ್‌ ಗಳಿಸಿ ಸೋಲಿಗೆ ಶರಣಾಯಿತು.