Asianet Suvarna News Asianet Suvarna News

Uncapped Players : ಈ ಐವರು 2022ರಲ್ಲಿ ಭಾರತ ತಂಡದ ಜೆರ್ಸಿ ಧರಿಸಲು ಅರ್ಹರು!

ದೇಶೀಯ ಕ್ರಿಕೆಟ್ ಟೂರ್ನಿಗಳಲ್ಲಿ ಮಿಂಚಿರುವ ಪ್ಲೇಯರ್ ಗಳು
2022ರಲ್ಲಿ ಟೀಮ್ ಇಂಡಿಯಾದಲ್ಲಿ ಇವರಿಗೆ ಸಿಗಬಹುದು ಚಾನ್ಸ್
ಯಾರಿಗೆ ಸಿಗುತ್ತೆ ಮೊದಲ ಅವಕಾಶ ಅನ್ನೋದೇ ಕುತೂಹಲ

these Five domestic Players can get Chance in Team india in 2022 san
Author
Bengaluru, First Published Dec 23, 2021, 12:20 AM IST
  • Facebook
  • Twitter
  • Whatsapp

ಬೆಂಗಳೂರು (ಡಿ. 22): ಈ ಬಾರಿಯ ದೇಶೀಯ ಕ್ರಿಕೆಟ್ ಟೂರ್ನಿ ಸಾಕಷ್ಟು ಯುವ ಪ್ರತಿಭೆಗಳ ಪ್ರದರ್ಶನಕ್ಕೆ ಸಾಕ್ಷಿಯಾಗಿದೆ. ಕೇವಲ ಐಪಿಎಲ್ ಮಾತ್ರವಲ್ಲ,  ವಿಜಯ್ ಹಜಾರೆ ಟೂರ್ನಿ (Vijay Hazare Trophy), ಸಯ್ಯದ್ ಮುಷ್ತಾಕ್ ಅಲಿ ಟಿ20 (Syed Mushtaq Ali Trophy)ಟೂರ್ನಿಗಳಲ್ಲಿ ದೊಡ್ಡ ಪ್ರದರ್ಶನದ ಮೂಲಕ ಗಮನಸೆಳೆದ ಪ್ರತಿಭೆಗಳು ಕಾಣಸಿಕ್ಕಿದ್ದಾರೆ. ಅಂತಾರಾಷ್ಟ್ರೀಯ ಕಣಕ್ಕೆ ತಾವು ಪಾದಾರ್ಪಣೆ ಮಾಡಲು ಸಿದ್ಧ ಎಂದು ಸಾಬೀತು ಮಾಡಿರುವ ಸಾಕಷ್ಟು ನಿರ್ವಹಣೆಗಳನ್ನು ಈ ಆಟಗಾರರಿಂದ ಗಮನಿಸಬಹುದಾಗಿದೆ. ಈ ಎಲ್ಲಾ ಲೆಕ್ಕಾಚಾರಗಳನ್ನು ಗಮನದಲ್ಲಿಟ್ಟುಕೊಂಡು ಹೇಳುವುದಾದರೆ, 2022ರಲ್ಲಿ ಟೀಮ್ ಇಮಡಿಯಾ ಜೆರ್ಸಿ ಧರಿಸಲು ಈ ಐವರು ಪ್ಲೇಯರ್ ಗಳು ಅರ್ಹರಾಗಿದ್ದಾರೆ ಎಂದು ಹೇಳಬಹುದು. ಈ ಪ್ಲೇಯರ್ ಗಳು ಯಾರು.. ಇಲ್ಲಿದೆ ಡೀಟೇಲ್ಸ್.

ಶಾರುಖ್ ಖಾನ್: ಚೆನ್ನೈ ಸೂಪರ್ ಕಿಂಗ್ಸ್ ಪರವಾಗಿ 14ನೇ ಆವೃತ್ತಿಯ ಐಪಿಎಲ್ ನಲ್ಲಿ ಗಮನಸೆಳೆದ ಶಾರುಖ್ ಖಾನ್ (Shahrukh Khan), ತಮಿಳುನಾಡು ತಂಡದ ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಚಾಂಪಿಯನ್ ಆಗಲು ಕಾರಣರಾದವರು. ಕರ್ನಾಟಕ ವಿರುದ್ಧದ ಫೈನಲ್ ಪಂದ್ಯದಲ್ಲಿ ಕೊನೇ ಎಸೆತವನ್ನು ಸಿಕ್ಸರ್ ಗಟ್ಟಿ ತಂಡಕ್ಕೆ ಗೆಲುವು ತಂದ ಶಾರುಖ್ ಖಾನ್, ವಿಜಯ್ ಹಜಾರೆ ಟೂರ್ನಿಯಲ್ಲೂ ತಮ್ಮ ಅದ್ಭುತ ಫಾರ್ಮ್ ಅನ್ನು ಮುಂದುವರಿಸಿದ್ದಾರೆ. ಭಾರತ ಟಿ20 ತಂಡದಲ್ಲಿ ಫಿನಿಷರ್ ಸ್ಥಾನಕ್ಕೆ ಶಾರುಖ್ ಖಾನ್ ಸೂಕ್ತವಾಗಿ ಹೊಂದಿಕೊಳ್ಳುವ ಸಾಧ್ಯತೆಗಳು ಬಹಳವಾಗಿ ಕಾಣುತ್ತಿದೆ.

ರವಿ ಬಿಷ್ಣೋಯಿ: 19 ವಯೋಮಿತಿ ವಿಶ್ವಕಪ್ ತಂಡದ ಸದಸ್ಯ. ಐಪಿಎಲ್ ನಲ್ಲಿ ಪಂಜಾಬ್ ತಂಡದ ಪರವಾಗಿ ಬೌಲಿಂಗ್ ಮಾಡಲು ಕಾಲಿಟ್ಟಾಗಲೆಲ್ಲಾ, ವಿಕೆಟ್ ಪಡೆದುಕೊಂಡಿರುವ ಸಾಧಕ ರವಿ ಬಿಷ್ಣೋಯಿ (Ravi Bishnoi). ಟಿ20 ಮಾದರಿಯಲ್ಲಿ ಕೆಲ ಭಿನ್ನ ಮಾದರಿಯ ಪ್ಲೇಯರ್ ಗಳನ್ನು ಟೀಂ ಇಂಡಿಯಾ ಹುಡುಕುತ್ತಿದ್ದು, ರವಿ ಬಿಷ್ಣೋಯಿ ಕೂಡ ರಾಡಾರ್ ನಲ್ಲಿದ್ದಾರೆ. ಬೌಲಿಂಗ್ ನೊಂದಿಗೆ ಚುರುಕಾದ ಫೀಲ್ಡಿಂಗ್ ಇವರ ಪ್ಲಸ್ ಪಾಯಿಂಟ್.

ಕಾರ್ತಿಕ್ ತ್ಯಾಗಿ: ಪಂಜಾಬ್ (Punjab Kings) ತಂಡದ ವಿರುದ್ಧ ಐಪಿಎಲ್ (IPL) ಪಂದ್ಯದಲ್ಲಿ ಕೊನೇ ಓವರ್ ನಲ್ಲಿ 4 ರನ್ ಗಳನ್ನು ರಕ್ಷಣೆ ಮಾಡಿಕೊಳ್ಳಲು ಯಶಸ್ವಿಯಾದ ಬಳಿಕ ಕಾರ್ತಿಕ್ ತ್ಯಾಗಿ (Kartik Tyagi) ಹೆಸರಿನ ಬೌಲರ್ ಎಲ್ಲರಿಗೂ ಚಿರಪರಿಚಿತವಾಗಿದ್ದಾನೆ.  21 ವರ್ಷದ ಕಾರ್ತಿಕ್ ತ್ಯಾಗಿ, 19 ವಯೋಮಿತಿ ವಿಶ್ವಕಪ್ ತಂಡದ ಆಟಗಾರ.

Syed Mushtaq Ali Trophy Final: ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸಿ ತಮಿಳುನಾಡಿಗೆ ಟ್ರೋಫಿ ಗೆಲ್ಲಿಸಿದ ಶಾರುಖ್ ಖಾನ್..!
ಡೆತ್ ಓವರ್ ಗಳಲ್ಲಿ ನಿಖರ ಯಾರ್ಕರ್ ಗಳ ಮೂಲಕ ಗಮನಸೆಳೆಯುವ ಕಾರ್ತಿಕ್ ಅವರ ಆಟವನ್ನು 2022ರಲ್ಲಿ ಆಯ್ಕೆ ಸಮಿತಿ ಸಾಕಷ್ಟು ನಿರೀಕ್ಷೆಗಣ್ಣಿನಲ್ಲಿ ನೋಡುತ್ತಿರುತ್ತದೆ. ಆಸ್ಟ್ರೇಲಿಯಾ ಪ್ರವಾಸದ ವೇಳೆ ಮೀಸಲು ಬೌಲರ್ ಆಗಿ ತೆರಳಿದ್ದ ಕಾರ್ತಿಕ್ ತ್ಯಾಗಿಗೆ ಈ ವರ್ಷ ಟೀಂ ಇಂಡಿಯಾ ಟೆಸ್ಟ್ ಜೆರ್ಸಿ ಧರಿಸುವ ಅವಕಾಶ ಸಿಗುವ ಅವಕಾಶಗಳಿರಬಹುದು.

ಅಬ್ದುಲ್ ಸಮದ್: 20 ವರ್ಷದ ಅಬ್ದುಲ್ ಸಮದ್ (Abdul Samad), ಜಮ್ಮು ಮತ್ತು ಕಾಶ್ಮೀರದ ಆಟಗಾರ. ಬ್ಯಾಟಿಂಗ್ ಹಾಗೂ ಬೌಲಿಂಗ್ ಮೂಲಕ ಗಮನಸೆಳೆಯುವ ಈ ಆಟಗಾರನ ಪ್ರತಿಭೆಯನ್ನು ಕಂಡು, ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಇವರನ್ನು ರಿಟೇನ್ ಮಾಡಿಕೊಳ್ಳುವ ನಿರ್ಧಾರ ಮಾಡಿದೆ. ಇತ್ತೀಚೆಗೆ ಜಮ್ಮು ಕಾಶ್ಮೀರ( Jammu and Kashmir ) ರಣಜಿ ತಂಡದ ಉಪನಾಯಕ ಕೂಡ ಆಗಿರುವ ಅಬ್ದುಲ್ ಸಮದ್, ಸ್ಪಿನ್ ಬೌಲಿಂಗ್ ಆಲ್ರೌಂಡರ್ ಆಗಿ ರವೀಂದ್ರ ಜಡೇಜಾರ ಸ್ಥಾನವನ್ನು ಸಮರ್ಥವಾಗಿ ತುಂಬಬಲ್ಲವರಾಗಿದ್ದಾರೆ. 

ಇಶಾನ್ ಪೊರೆಲ್: ತನ್ನ ಆದರ್ಶ ಎನಿಸಿಕೊಂಡ ಡೇಲ್ ಸ್ಟೈನ್ ( Dale Steyn) ಹಾಗೂ ಬ್ರೆಟ್ ಲೀ (Brett Lee)ಅವರಂತೆ ಸಾಗುತ್ತಿರುವ ಪಶ್ಚಿಮ ಬಂಗಾಳದ ಇಶಾನ್ ಪೊರೆಲ್ ಗೆ (Ishan Porel) ಈ ಬಾರಿ ಟೀಂ ಇಂಡಿಯಾ ಜೆರ್ಸಿ ಧರಿಸುವ ಅವಕಾಶ ಇರಬಹುದು. ಭಾರತ ಎ (India A) ತಂಡದ ಪರವಾಗಿ ಆಡುವ ಇಶಾನ್ ಪೊರೆಲ್, ದೇಶೀಯ ಕ್ರಿಕೆಟ್ ನಲ್ಲೂ ಅತ್ಯುತ್ತಮ ನಿರ್ವಹಣೆಯ ಮೂಲಕ ಗಮನಸೆಳೆದಿದ್ದಾರೆ. ಟೆಸ್ಟ್ ತಂಡದ ವೇಗದ ಬೌಲಿಂಗ್ ವಿಭಾಗಕ್ಕೆ ಯುವ ಬೌಲರ್ ಗಳು ಅಗತ್ಯವಿರುವ ಹೊತ್ತಿನಲ್ಲಿ ಇಶಾನ್ ಪೊರೆಲ್ ಮೇಲೆ ಎಲ್ಲರೂ ನಿರೀಕ್ಷೆ ಇರಿಸಿದ್ದಾರೆ. 20 ಪ್ರಥಮ ದರ್ಜೆ ಪಂದ್ಯಗಳಿಂದ 53 ವಿಕೆಟ್ ಸಾಧನೆ ಮಾಡಿದ ಬೌಲರ್ ಆಗಿದ್ದಾರೆ.

Follow Us:
Download App:
  • android
  • ios