ನವದೆಹಲಿ(ಜೂ.03): ಟೀಂ ಇಂಡಿಯಾದ ಮಾರಕ ವೇಗಿ ಜಸ್‌ಪ್ರೀತ್ ಬುಮ್ರಾ ಸೀಮಿತ ಓವರ್‌ಗಳ ಕ್ರಿಕೆಟ್‌ಗೆ ಹೋಲಿಸಿದರೆ, ಟೆಸ್ಟ್ ಕ್ರಿಕೆಟ್ ಇಷ್ಟವೆಂದು ಹೇಳಿದ್ದಾರೆ. 

ಟೆಸ್ಟ್ ಕ್ರಿಕೆಟ್‌ನಲ್ಲಿ ಬೌಲಿಂಗ್‌ನಲ್ಲಿ ಬದಲಾವಣೆ ಮಾಡಿಕೊಳ್ಳಲು ಸಾಕಷ್ಟು ಓವರ್‌ಗಳು ನಮ್ಮ ಬಳಿಯಲ್ಲಿ ಇರುತ್ತವೆ. ಆದರೆ ಏಕದಿನ ಹಾಗೂ ಟಿ20 ಕ್ರಿಕೆಟ್‌ನಲ್ಲಿ ಹೆಚ್ಚು ಪ್ರಯೋಗ ಮಾಡಲು ಅವಕಾಶ ಸಿಗುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ 2 ಹೊಸ ಚೆಂಡುಗಳನ್ನು ಬಳಸಲಾಗುತ್ತದೆ. ಆದರೆ ಟೆಸ್ಟ್ ಕ್ರಿಕೆಟ್‌ನಲ್ಲಿ ಹೆಚ್ಚು ಓವರ್‌ ಹಾಕಲು ಅವಕಾಶ ಇರುವುದರಿಂದ ಒಂದು ಸಿಕ್ಸರ್ ಅಥವಾ ಬೌಂಡರಿ ಹೋದರೂ ಹೆಚ್ಚು ಒತ್ತಡವಿರುವುದಿಲ್ಲ ಎಂದು ಬುಮ್ರಾ ಹೇಳಿದ್ದಾರೆ.

ಇಂಗ್ಲೆಂಡ್ ನಿರ್ಲಕ್ಷ್ಯ; ಅಮೆರಿಕ ತಂಡಕ್ಕೆ ಆಡಲು ನಿರ್ಧರಿಸಿದ ವಿಶ್ವಕಪ್ ಕ್ರಿಕೆಟಿಗ!

ಚೆಂಡಿಗೆ ಉಗುಳು ಬದಲು ಏನು ಬಳಸಲಿ?

ಕೊರೋನಾ ಸೋಂಕು ಹರಡುವ ಹಿನ್ನೆಲೆಯಲ್ಲಿ ಐಸಿಸಿ ಹೊಸ ಮಾರ್ಗಸೂಚಿ ಪ್ರಕಾರ ಬೌಲರ್‌ಗಳು ಚೆಂಡಿಗೆ ಉಗುಳನ್ನು ಹಚ್ಚುವುದನ್ನು ನಿಷೇಧಿಸಲಾಗಿದೆ. ಪಂದ್ಯದ ವೇಳೆ ಬೌಲರ್‌ಗಳು ಚೆಂಡಿಗೆ ಉಗುಳು ಹಚ್ಚಿ ಹೊಳಪು ತರಿಸುತ್ತಿದ್ದರು. 

ಚೆಂಡು ಒಬ್ಬರಿಂದ ಒಬ್ಬರಿಗೆ ವರ್ಗಾವಣೆ ಆಗುವುದರಿಂದ ಕೊರೋನಾ ಸೋಂಕು ಹರಡಬಹುದು ಎನ್ನುವ ಉದ್ದೇಶದಿಂದ ಐಸಿಸಿ ಉಗುಳು ಹಚ್ಚುವುದನ್ನು ನಿಷೇಧಿಸಿದೆ. ಇದೀಗ ಟೀಂ ಇಂಡಿಯಾದ ತಾರಾ ವೇಗಿ ಜಸ್‌ಪ್ರೀತ್‌ ಬುಮ್ರಾ, ವಿಕೆಟ್‌ ಪಡೆದಾಗ ಸಂಭ್ರಮಿಸುವುದಿಲ್ಲ. ಹೈ-ಫೈ ಮಾಡುವುದಿಲ್ಲ. ಆದರೆ ಚೆಂಡಿಗೆ ಉಗುಳು ಹಚ್ಚುವ ಬದಲು ಪರಾರ‍ಯಯ ಮಾರ್ಗೋಪಾಯವನ್ನು ಸೂಚಿಸಿ ಎಂದು ಬುಮ್ರಾ ಕೇಳಿದ್ದಾರೆ.