ದಕ್ಷಿಣ ಆಫ್ರಿಕಾ ತಂಡವು ಇಂಗ್ಲೆಂಡ್ ತಂಡವನ್ನು ಮಣಿಸುವ ಮೂಲಕ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಗೆಲುವಿನ ಖಾತೆ ತೆರೆದಿದೆ. ಸತತ 5 ಟೆಸ್ಟ್ ಪಂದ್ಯದಲ್ಲಿ ಸೋತು ಸುಣ್ಣವಾಗಿದ್ದ ಹರಿಣಗಳ ಪಡೆ ವರ್ಷಾಂತ್ಯದಲ್ಲಿ ಗೆಲುವಿನ ಲಯಕ್ಕೆ ಮರಳಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ..

ಸೆಂಚೂರಿಯನ್‌[ಡಿ.30]: ಕಗಿಸೊ ರಬಾಡ (4-103) ಮತ್ತು ನೊಟ್ಜೆ (3-56) ಮಾರಕ ದಾಳಿಗೆ ನಲುಗಿದ ಇಂಗ್ಲೆಂಡ್‌, ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಮೊದಲ ಟೆಸ್ಟ್‌ನಲ್ಲಿ 107 ರನ್‌ಗಳ ಸೊಲು ಕಂಡಿದೆ. ಇದರೊಂದಿಗೆ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ ಗೆಲುವಿನ ಖಾತೆ ತೆರೆಯುವುದರ ಜತೆಗೆ, 4 ಪಂದ್ಯಗಳ ಸರಣಿಯಲ್ಲಿ ಆಫ್ರಿಕಾ 1-0 ಮುನ್ನಡೆ ಪಡೆದಿದೆ. 

ಕಿವೀಸ್‌ ವಿರುದ್ಧ ಸರಣಿ ಗೆದ್ದ ಆಸ್ಪ್ರೇಲಿಯಾ

Scroll to load tweet…

ದಕ್ಷಿಣ ಆಫ್ರಿಕಾ ತಂಡವು ಇಂಗ್ಲೆಂಡ್’ಗೆ ಗೆಲ್ಲಲು 376 ರನ್’ಗಳ ಗುರಿ ನೀಡಿತ್ತು. 4ನೇ ದಿನವಾದ ಭಾನುವಾರ 1 ವಿಕೆಟ್‌ಗೆ 121 ರನ್‌ಗಳಿಂದ 2ನೇ ಇನ್ನಿಂಗ್ಸ್‌ ಮುಂದುವರೆಸಿದ ಇಂಗ್ಲೆಂಡ್‌ ನಾಟಕೀಯ ಕುಸಿತ ಕಂಡಿತು. ರೋರಿ ಬರ್ನ್ಸ್ (84) ಹಾಗೂ ಜೋ ರೂಟ್‌ (48) ಹೋರಾಟದ ಹೊರತಾಗಿಯೂ 268 ರನ್‌ಗಳಿಗೆ ಆಲೌಟ್‌ ಆಯಿತು. ಆಂಗ್ಲರ ನಂಬುಗೆಯ ಬ್ಯಾಟ್ಸ್’ಮನ್’ಗಳಾದ ಬೆನ್ ಸ್ಟೋಕ್ಸ್[14] ಹಾಗೂ ಜೋಸ್ ಬಟ್ಲರ್[22] ಹೆಚ್ಚು ಹೊತ್ತು ಕ್ರೀಸ್’ನಲ್ಲಿರಲು ಹರಿಣಗಳ ಬೌಲರ್’ಗಳು ಅವಕಾಶ ನೀಡಲಿಲ್ಲ. 

Scroll to load tweet…

ಈ ಗೆಲುವಿನೊಂದಿಗೆ ಬರೋಬ್ಬರಿ 11 ತಿಂಗಳುಗಳ ಬಳಿಕ ಹರಿಣಗಳ ಪಡೆ ಟೆಸ್ಟ್ ಗೆಲುವು ದಾಖಲಿಸಿದೆ. ಜತೆಗೆ 30 ಅಂಕ ಪಡೆದ ದ.ಆಫ್ರಿಕಾ ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ಖಾತೆ ತೆರೆದಿದೆ. ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ಕ್ವಿಂಟನ್ ಡಿಕಾಕ್ ಪಂದ್ಯಶ್ರೇಷ್ಠ ಗೌರವಕ್ಕೆ ಭಾಜನರಾದರು.

Scroll to load tweet…

ಸ್ಕೋರ್‌:

ದ.ಆಫ್ರಿಕಾ 284 ಮತ್ತು 272

ಇಂಗ್ಲೆಂಡ್‌ 181 ಮತ್ತು 268/10

ಪಂದ್ಯ ಶ್ರೇಷ್ಠ: ಕ್ವಿಂಟನ್ ಡಿಕಾಕ್

ಫಲಿತಾಂಶ: ದಕ್ಷಿಣ ಆಫ್ರಿಕಾಗೆ 107 ರನ್‌ಗಳ ಜಯ, ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ