Asianet Suvarna News Asianet Suvarna News

ಟೆಲಿವಿಷನ್ ಪ್ರೀಮಿಯರ್ ಲೀಗ್: TPL ಪಂದ್ಯಾವಳಿಯ ಜೆರ್ಸಿ ಹಾಗೂ ಟ್ರೋಫಿ ಅನಾವರಣ

ಟೆಲಿವಿಷನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭಕ್ಕೆ ಕ್ಷಣಗಣನೆ
ಟಿಪಿಎಲ್ ಪಂದ್ಯಾವಳಿಯ ಜೆರ್ಸಿ ಹಾಗೂ ಟ್ರೋಫಿ ಬಿಡುಗಡೆ
ಮೂರು ದಿನಗಳ ಕಾಲ ನಡೆಯಲಿದೆ ಕಿರುತೆರೆ ಕಲಾವಿದರ ಕ್ರಿಕೆಟ್

Television Premier League Jersey and Trophy unveiled in Bengaluru kvn
Author
Bengaluru, First Published Aug 17, 2022, 5:16 PM IST

ಬೆಂಗಳೂರು(ಆ.17): ಎನ್ 1 ಕ್ರಿಕೆಟ್ ಅಕಾಡೆಮಿ ವತಿಯಿಂದ ಟೆಲಿವಿಷನ್ ಪ್ರೀಮಿಯರ್ ಲೀಗ್-ಟಿಪಿಎಲ್ ಶುರುವಾಗುತ್ತಿದ್ದು, ಇದೇ ತಿಂಗಳ 18, 19 ಹಾಗೂ 20 ಈ ಮೂರು ದಿನಗಳ ಕಾಲ ಪಂದ್ಯಾವಳಿಗಳು ಬೆಂಗಳೂರಿನಲ್ಲಿ ನಡೆಯುತ್ತಿದೆ. ಈ ಹಿನ್ನೆಲೆ  ಖಾಸಗಿ ಹೋಟೆಲ್ ವೊಂದರಲ್ಲಿ ಎಲ್ಲಾ ತಂಡಗಳ ಜೆರ್ಸಿ ಹಾಗೂ ಟೂರ್ನಿಯ ಟ್ರೋಫಿ ಬಿಡುಗಡೆ ಮಾಡಲಾಯಿತು. ಕಿರುತೆರೆ ಕಲಾವಿದರು ಹಾಗೂ ತಂತ್ರಜ್ಞರು ಈ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗಿಯಾಗಲಿದ್ದಾರೆ. 

ಆಯೋಜಕರಾದ ಬಿ.ಆರ್.ಸುನಿಲ್ ಕುಮಾರ್ ಮಾತನಾಡಿ, ಮೊದಲ ಬಾರಿಗೆ ಟೆಲಿವಿಷನ್ ಪ್ರೀಮಿಯರ್ ಲೀಗ್ ನಡೆಯುತ್ತಿದ್ದು, ಐಪಿಎಲ್ ರೇಂಜ್‌ಗೆ ಮಾಡಬೇಕೆಂಬ ಕನಸು ಇತ್ತು. ಇದು ಮೊದಲ ಹೆಜ್ಜೆಯಷ್ಟೇ. ಮುಂದಿನ ದಿನಗಳಲ್ಲಿ ಇನ್ನೂ ದೊಡ್ಡದಾಗಿ ಟೂರ್ನಿಯನ್ನು ಆಯೋಜಿಸುವ ಕನಸಿದೆ ಎಂದರು.

ನಗರದ ಪೆಸೆಟ್ ಕಾಲೇಜು ಗ್ರೌಂಡ್ ನಲ್ಲಿ ನಡೆಯಲಿರುವ ಪಂದ್ಯಾವಳಿಯಲ್ಲಿ, ದಿ ಬುಲ್ ಸ್ಕ್ವಾಡ್, ಭಜರಂಗಿ ಲಯನ್ಸ್, ಎಂಜೆಲ್ XI, ವಿನ್ ಟೈಮ್ ರಾಕರ್ಸ್, ಅಶ್ವ ಸೂರ್ಯ ರೈಡರ್ಸ್, ಸ್ಯಾಂಡಲ್ ವುಡ್ ಕಿಂಗ್ಸ್ ಎಂಬ ಆರು ತಂಡಗಳು ಭಾಗಿಯಾಗಲಿದ್ದು, ಒಟ್ಟು 102 ಸೆಲೆಬ್ರಿಟಿಗಳು ಈ ಟೂರ್ನಿಯಲ್ಲಿ ಸಾಥ್ ಕೊಡಲಿದ್ದಾರೆ. ಈ ಆರು ತಂಡಗಳಿಗೂ ಅಂಬಾಸಿಡರ್ ಹಾಗೂ ಓನರ್ ಗಳಿರಲಿದ್ದಾರೆ. ಇದೇ ಗುರುವಾರದಿಂದ ಟಿಪಿಎಲ್ ಪಂದ್ಯಾವಳಿ ಆರಂಭವಾಗಲಿದೆ.

ಎಲ್ಲ ಇಲಾಖೆಯಲ್ಲೂ ಕ್ರೀಡಾ ಮೀಸಲು: ಸಿಎಂ ಬೊಮ್ಮಾಯಿ

ದಿ ಬುಲ್ ಸ್ಕ್ವಾಡ್ ಟೀಂಗೆ ಶರತ್ ಪದ್ಮನಾಭ್ ನಾಯಕನಾಗಿದ್ದು, ಈ ತಂಡದ ಒಡೆತನವನ್ನು ಮೋನಿಶ್ ಹೊತ್ತುಕೊಂಡಿದ್ರೆ, ಭಜರಂಗಿ ಲಯನ್ಸ್ ಗೆ ರಂಜಿತ್ ಕುಮಾರ್ ನಾಯಕ- ಮಹೇಶ್ ಗೌಡ ಓನರ್, ಎಂಜಲ್ XI ತಂಡಕ್ಕೆ ಹರ್ಷ ಸಿಎಂ ಗೌಡ ನಾಯಕ-ಜಗದೀಶ್ ಬಾಬು ಆರ್ ಓನರ್, ವಿನ್ ಟೈಮ್ ರಾಕರ್ಸ್ ತಂಡಕ್ಕೆ ಅರ್ಜುನ್ ಯೋಗಿ ನಾಯಕ-ಅನಿಲ್ ಬಿಆರ್ ಮತ್ತು ದೇವನಾಥ್ ಓನರ್, ಅಶ್ವಸೂರ್ಯ ರೈಡರ್ಸ್ ತಂಡಕ್ಕೆ ಮಂಜು ಪಾವಗಡ ನಾಯಕ-ರಂಜಿತ್ ಕುಮಾರ್ ಓನರ್, ಸ್ಯಾಂಡಲ್ ವುಡ್ ಕಿಂಗ್ಸ್ ತಂಡಕ್ಕೆ ವಿವಾನ್ ನಾಯಕ-ದೀಪಶ್ರೀ ಮಿಸ್ಟ್ರೀ ಒಡೆತನದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.

Follow Us:
Download App:
  • android
  • ios