Asianet Suvarna News Asianet Suvarna News

ಟೀಂ ಇಂಡಿಯಾ ಟೆಸ್ಟ್‌ ವಿಶ್ವಕಪ್‌ ಫೈನಲ್‌ ಆಸೆ ಜೀವಂತ..!

ಸತತ ಎರಡನೇ ಬಾರಿಗೆ ಟೀಂ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ಗೇರುವ ಆಸೆ ಜೀವಂತ
ಇಂಗ್ಲೆಂಡ್ ಎದುರು ದಕ್ಷಿಣ ಆಫ್ರಿಕಾ ಎದುರು ಸೋಲುಂಡ ಬೆನ್ನಲ್ಲೇ ಭಾರತೀಯ ಪಾಳಯದಲ್ಲಿ ಗರಿಗೆದರಿದ ಫೈನಲ್ ಆಸೆ
ಬಾಂಗ್ಲಾದೇಶ, ಆಸ್ಟ್ರೇಲಿಯಾ ಎದುರು ಸರಣಿ ಗೆದ್ದರೆ ಭಾರತಕ್ಕಿದೆ ಫೈನಲ್‌ಗೇರುವ ಅವಕಾಶ

Team India World Test Championship Final hope alive after South Africa lost test match against England kvn
Author
First Published Sep 14, 2022, 8:09 AM IST

ನವದೆಹಲಿ(ಸೆ.14): 2021-23ರ ಐಸಿಸಿ ಟೆಸ್ಟ್‌ ವಿಶ್ವ ಚಾಂಪಿಯನ್‌ಶಿಪ್‌ ಫೈನಲ್‌ಗೇರುವ ಭಾರತದ ಆಸೆ ಜೀವಂತವಾಗಿದೆ. ಇಂಗ್ಲೆಂಡ್‌ ವಿರುದ್ಧ 3ನೇ ಟೆಸ್ಟ್‌ನಲ್ಲಿ ದಕ್ಷಿಣ ಆಫ್ರಿಕಾ ಸೋತಿದ್ದು ಭಾರತಕ್ಕೆ ಲಾಭವಾಗಿ ಪರಿಣಮಿಸಿದೆ. ಭಾರತ ಆಡಿರುವ 12 ಪಂದ್ಯಗಳಲ್ಲಿ 6ರಲ್ಲಿ ಗೆದ್ದು, 4ರಲ್ಲಿ ಸೋತಿದೆ. 2 ಪಂದ್ಯ ಡ್ರಾ ಆಗಿದೆ. ತಂಡ ಶೇ.52.08 ಗೆಲುವಿನ ಪ್ರತಿಶತ ಹೊಂದಿದ್ದು 4ನೇ ಸ್ಥಾನದಲ್ಲಿದೆ. ಆಸ್ಪ್ರೇಲಿಯಾ ಶೇ.70 ಪ್ರತಿಶತದೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ದಕ್ಷಿಣ ಆಫ್ರಿಕಾ ಶೇ.60 ಪ್ರತಿಶತದೊಂದಿಗೆ 2ನೇ ಸ್ಥಾನದಲ್ಲಿದೆ. ಶ್ರೀಲಂಕಾ ಶೇ.53.33 ಪ್ರತಿಶತ ಹೊಂದಿದ್ದು, 3ನೇ ಸ್ಥಾನ ಪಡೆದಿದೆ.

ಭಾರತದ ಫೈನಲ್‌ ಹಾದಿ ಹೇಗೆ?: ಪ್ರತಿ ತಂಡವು ತಲಾ 6 ಸರಣಿಗಳನ್ನು ಆಡಲಿದ್ದು, ಟೀಂ ಇಂಡಿಯಾ ಈಗಾಗಲೇ 4 ಸರಣಿಗಳನ್ನು ಪೂರ್ಣಗೊಳಿಸಿದೆ. ವರ್ಷಾಂತ್ಯದಲ್ಲಿ ಬಾಂಗ್ಲಾದೇಶ ಪ್ರವಾಸ ಕೈಗೊಳ್ಳಲಿರುವ ಭಾರತ 2 ಟೆಸ್ಟ್‌ ಆಡಲಿದೆ. 2023ರ ಫೆಬ್ರವರಿ-ಮಾಚ್‌ರ್‍ನಲ್ಲಿ ಆಸ್ಪ್ರೇಲಿಯಾ ತಂಡ ಭಾರತಕ್ಕೆ ಆಗಮಿಸಲಿದ್ದು 4 ಟೆಸ್ಟ್‌ಗಳ ಸರಣಿಯಲ್ಲಿ ಪಾಲ್ಗೊಳ್ಳಲಿದೆ. ಈ ಎರಡೂ ಸರಣಿಗಳನ್ನು ಗೆದ್ದರೆ ಭಾರತ ಫೈನಲ್‌ಗೇರುವ ಸಾಧ್ಯತೆ ಇರಲಿದೆ.

ಪೈಪೋಟಿ ಹೇಗಿದೆ?: ಆಸ್ಪ್ರೇಲಿಯಾಗೆ ತವರಿನಲ್ಲಿ ವೆಸ್ಟ್‌ಇಂಡೀಸ್‌ ವಿರುದ್ಧ 2, ದ.ಆಫ್ರಿಕಾ ವಿರುದ್ಧ 3 ಟೆಸ್ಟ್‌ ಪಂದ್ಯಗಳಿವೆ. ಬಳಿಕ ಭಾರತದಲ್ಲಿ ಸರಣಿ ಆಡಲಿದೆ. ದಕ್ಷಿಣ ಆಫ್ರಿಕಾ ಹಾಗೂ ಆಸ್ಪ್ರೇಲಿಯಾ ನಡುವಿನ ಸರಣಿ ಫೈನಲ್‌ಗೇರುವ ತಂಡವನ್ನು ನಿರ್ಧರಿಸಬಹುದು. ಇನ್ನು ದ.ಆಫ್ರಿಕಾಕ್ಕೆ ಆಸ್ಪ್ರೇಲಿಯಾ ಪ್ರವಾಸದ ಜೊತೆಗೆ ತವರಿನಲ್ಲಿ ವಿಂಡೀಸ್‌ ವಿರುದ್ಧ 2 ಪಂದ್ಯಗಳಿವೆ. ಶ್ರೀಲಂಕಾಗೆ ಕೇವಲ ಒಂದು ಸರಣಿ ಬಾಕಿ ಇದ್ದು, ನ್ಯೂಜಿಲೆಂಡ್‌ನಲ್ಲಿ 2 ಟೆಸ್ಟ್‌ ಪಂದ್ಯಗಳನ್ನು ಆಡಲಿದೆ. ಈ ಸರಣಿಯಲ್ಲಿ ಸೋತರೆ ಫೈನಲ್‌ ರೇಸ್‌ನಿಂದ ಹೊರಬೀಳಲಿದೆ.

ಈತನೇ ಆಸ್ಟ್ರೇಲಿಯಾದ ಮುಂದಿನ ಕ್ಯಾಪ್ಟನ್ ಆಗಲಿ: ಆ್ಯರೋನ್ ಫಿಂಚ್

ಭಾರತ-ಪಾಕ್‌ ಫೈನಲ್‌?: ಪಾಕಿಸ್ತಾನ ಶೇ.51.85ರ ಪ್ರತಿಶತದೊಂದಿಗೆ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. 2007ರ ಬಳಿಕ ಭಾರತ ಹಾಗೂ ಪಾಕಿಸ್ತಾನ ತಂಡಗಳು ಟೆಸ್ಟ್‌ ಪಂದ್ಯದಲ್ಲಿ ಮುಖಾಮುಖಿಯಾಗಿಲ್ಲ. ಈ ಆವೃತ್ತಿಯ ಟೆಸ್ಟ್‌ ವಿಶ್ವ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಬದ್ಧವೈರಿಗಳು ಎದುರಾಗುವ ಸಾಧ್ಯತೆಯನ್ನು ಸದ್ಯಕ್ಕೆ ತಳ್ಳಿಹಾಕುವಂತಿಲ್ಲ. ಭಾರತ ಬಾಕಿ ಇರುವ ಎರಡೂ ಸರಣಿಗಳನ್ನು ಗೆದ್ದು, ಪಾಕಿಸ್ತಾನ ತವರಿನಲ್ಲಿ ಇಂಗ್ಲೆಂಡ್‌ ವಿರುದ್ಧ 3, ನ್ಯೂಜಿಲೆಂಡ್‌ ವಿರುದ್ಧ 2 ಟೆಸ್ಟ್‌ಗಳ ಸರಣಿಗಳನ್ನು ಜಯಿಸಿದರೆ ಫೈನಲ್‌ ಪ್ರವೇಶಿಸಬಹುದು.

2019-2021ರ ಅವಧಿಯಲ್ಲಿ ನಡೆದ ಚೊಚ್ಚಲ ಆವೃತ್ತಿಯ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ಕ್ರಿಕೆಟ್ ತಂಡಗಳು ಫೈನಲ್‌ ಪ್ರವೇಶಿಸಿದ್ದವು. ಇಂಗ್ಲೆಂಡ್‌ನ ಸೌಥಾಂಪ್ಟನ್‌ನಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ಕೇನ್ ವಿಲಿಯಮ್ಸನ್‌ ನೇತೃತ್ವದ ನ್ಯೂಜಿಲೆಂಡ್ ತಂಡವು, ಭಾರತ ಎದುರು ಭರ್ಜರಿ ಗೆಲುವು ಸಾಧಿಸುವ ಮೂಲಕ ಟೆಸ್ಟ್ ಚಾಂಪಿಯನ್‌ಶಿಪ್‌ ಪಟ್ಟ ಅಲಂಕರಿಸಿತ್ತು. 

ಟಿ20 ಸರಣಿ: ಇಂದು ಭಾರತಕ್ಕೆ ಆಸೀಸ್‌ ತಂಡ

ನವದೆಹಲಿ: ಸೆಪ್ಟೆಂಬರ್ 20ರಿಂದ ಆರಂಭಗೊಳ್ಳಲಿರುವ 3 ಪಂದ್ಯಗಳ ಟಿ20 ಸರಣಿ ಆಡಲು ಬುಧವಾರ ಹಾಲಿ ವಿಶ್ವ ಚಾಂಪಿಯನ್‌ ಅಸ್ಪ್ರೇಲಿಯಾ ತಂಡ ಭಾರತಕ್ಕೆ ಆಗಮಿಸಲಿದೆ. ಮೊಹಾಲಿ ತಲುಪಲಿರುವ ಆರೋನ್ ಫಿಂಚ್‌ ಪಡೆ ಸೆಪ್ಟೆಂಬರ್ 16ರಿಂದ ಅಭ್ಯಾಸ ಆರಂಭಿಸಲಿದೆ. ಟಿ20 ವಿಶ್ವಕಪ್‌ಗೂ ಮುನ್ನ ಎರಡೂ ತಂಡಗಳಿಗೆ ಇದು ಮಹತ್ವದ ಸರಣಿ ಆಗಿದೆ. 

ವಿಶ್ವಕಪ್‌ಗೆ ಬೇಕಿರುವ ಸೂಕ್ತ ಆಡುವ ಹನ್ನೊಂದರ ಬಳಗವನ್ನು ಗುರುತಿಸಲು ಈ ಸರಣಿಯನ್ನು ತಂಡಗಳು ಬಳಸಿಕೊಳ್ಳಲಿವೆ. ಸೆಪ್ಟೆಂಬರ್ 20ರಂದು ಮೊಹಾಲಿಯಲ್ಲಿ ಮೊದಲ ಟಿ20 ಪಂದ್ಯ ನಡೆಯಲಿದ್ದು, ಸೆಪ್ಟೆಂಬರ್ 23ಕ್ಕೆ ನಾಗ್ಪುರ, ಸೆಪ್ಟೆಂಬರ್ 25ಕ್ಕೆ ಹೈದರಾಬಾದ್‌ನಲ್ಲಿ ಪಂದ್ಯ ನಡೆಯಲಿವೆ.

Follow Us:
Download App:
  • android
  • ios