ಇಂದಿನಿಂದ ಭಾರತಕ್ಕೆ ಪಿಂಕ್ ಬಾಲ್ ಅಭ್ಯಾಸ
ಆಸ್ಟ್ರೇಲಿಯಾ ವಿರುದ್ದ ಹಗಲು-ರಾತ್ರಿ ಟೆಸ್ಟ್ ಪಂದ್ಯಕ್ಕೆ ಸಜ್ಜಾಗುತ್ತಿರುವ ಟೀಂ ಇಂಡಿಯಾವಿಂದು ಆಸ್ಟ್ರೇಲಿಯಾ 'ಎ' ವಿರುದ್ದ 3 ದಿನಗಳ ಪಿಂಕ್ ಬಾಲ್ ಟೆಸ್ಟ್ ಪಂದ್ಯವನ್ನಾಡಲಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ಸಿಡ್ನಿ(ಡಿ.11): ಆಸ್ಪ್ರೇಲಿಯಾ ವಿರುದ್ಧ ಡಿ.17ರಿಂದ ಅಡಿಲೇಡ್‌ನಲ್ಲಿ ಆರಂಭಗೊಳ್ಳಲಿರುವ ಮೊದಲ ಟೆಸ್ಟ್‌ಗೆ ಭಾರತ ತಂಡ ಶುಕ್ರವಾರದಿಂದ ಅಭ್ಯಾಸ ನಡೆಸಲಿದೆ. ಅಡಿಲೇಡ್ ಪಂದ್ಯ ಹಗಲು-ರಾತ್ರಿ ಮಾದರಿಯಲ್ಲಿ ನಡೆಯಲಿರುವ ಕಾರಣ, ಆಸ್ಪ್ರೇಲಿಯಾ ‘ಎ’ ವಿರುದ್ಧದ ಅಭ್ಯಾಸ ಪಂದ್ಯವನ್ನೂ ಹಗಲು-ರಾತ್ರಿ ಮಾದರಿಯಲ್ಲೇ ಆಡಲಿದೆ.
3 ದಿನಗಳ ಪಿಂಕ್ ಬಾಲ್ ಅಭ್ಯಾಸ ಪಂದ್ಯಕ್ಕೆ ನಾಯಕ ವಿರಾಟ್ ಕೊಹ್ಲಿ ಗೈರಾಗುವ ಸಾಧ್ಯತೆ ಇದೆ. ಹೀಗಾಗಿ ಅಜಿಂಕ್ಯ ರಹಾನೆಯೇ ತಂಡ ಮುನ್ನಡೆಸಬಹುದು. ಮೊದಲ ಅಭ್ಯಾಸ ಪಂದ್ಯದಲ್ಲಿ ರಹಾನೆ ಶತಕ ಸಿಡಿಸಿದರೆ, ಪೂಜಾರ ಹಾಗೂ ವೃದ್ಧಿಮಾನ್ ಸಾಹ ಅರ್ಧಶತಕ ಗಳಿಸಿದ್ದರು. ಈ ಪಂದ್ಯದಲ್ಲಿ ಮಯಾಂಕ್ ಅಗರ್‌ವಾಲ್, ಕೆ.ಎಲ್.ರಾಹುಲ್ ಸಹ ಆಡಲಿದ್ದು, ಕರ್ನಾಟಕದ ಈ ಆರಂಭಿಕ ಜೋಡಿ ಮೇಲೆ ಹೆಚ್ಚಿನ ನಿರೀಕ್ಷೆ ಇದೆ.
ಆಸೀಸ್ ಟೆಸ್ಟ್ ಸರಣಿಗೆ ಟೀಂ ಇಂಡಿಯಾ 3ನೇ ವೇಗಿ ಯಾರು? ರವಿ ಶಾಸ್ತ್ರಿ ಪಾರ್ಟಿಯಲ್ಲಿ ಬಯಲು!
ಮೊದಲ ಟೆಸ್ಟ್‌ಗೆ ಹೆಚ್ಚುವರಿ ಬ್ಯಾಟ್ಸ್‌ಮನ್ ಆಗಿ ಹನುಮ ವಿಹಾರಿಯನ್ನು ಆಡಿಸಲಾಗುತ್ತಾ ಇಲ್ಲವೇ 2ನೇ ಸ್ಪಿನ್ನರ್ ಆಗಿ ಕುಲ್ದೀಪ್ ಯಾದವ್‌ಗೆ ಸ್ಥಾನ ನೀಡಲಾಗುತ್ತಾ ಎನ್ನುವ ಪ್ರಶ್ನೆಗೆ ಅಭ್ಯಾಸ ಪಂದ್ಯದಲ್ಲಿ ಉತ್ತರ ಸಿಗಲಿದೆ. ವಿಕೆಟ್ ಕೀಪರ್ ಸ್ಥಾನವನ್ನು ರಿಷಭ್ ಪಂತ್ ಇಲ್ಲವೇ ವೃದ್ಧಿಮಾನ್ ಸಾಹ ಇಬ್ಬರಲ್ಲಿ ಯಾರು ಗಳಿಸಲಿದ್ದಾರೆ ಎನ್ನುವುದು ಸಹ ಈ ಪಂದ್ಯದಲ್ಲಿ ತಿಳಿಯಲಿದೆ.
ಪಂದ್ಯ ಆರಂಭ: ಬೆಳಗ್ಗೆ 9ಕ್ಕೆ