Asianet Suvarna News Asianet Suvarna News

ಆಸೀಸ್ ಟೆಸ್ಟ್ ಸರಣಿಗೆ ಟೀಂ ಇಂಡಿಯಾ 3ನೇ ವೇಗಿ ಯಾರು? ರವಿ ಶಾಸ್ತ್ರಿ ಪಾರ್ಟಿಯಲ್ಲಿ ಬಯಲು!

ಭಾರತ ಹಾಗೂ  ಆಸ್ಟ್ರೇಲಿಯಾ ನಡುವಿನ ಬಹುನಿರೀಕ್ಷಿತ ಟೆಸ್ಟ್ ಸರಣಿಗೆ ತಯಾರಿ ಆರಂಭಗೊಂಡಿದೆ. ಇದರ ನಡುವೆ ಟೀಂ ಇಂಡಿಯಾ ಮೂರನೇ ವೇಗಿ ಯಾರು ಅನ್ನೋದು ತೀವ್ರ ಕುತೂಹಲ ಕೆರಳಿಸಿದೆ. ಆದರೆ ರವಿ ಶಾಸ್ತ್ರಿ ಜೊತೆಗಿನ ಪಾರ್ಟಿಯಲ್ಲಿ ಅಧೀಕೃತ ಘೋಷಣೆಗೂ ಮುನ್ನವೇ 3ನೇ ವೇಗಿ ಯಾರು ಅನ್ನೋ ಮಾಹಿತಿ ಹೊರಬಿದ್ದಿದೆ.

Ian chappell reveals team india third seamer against Australia test ckm
Author
Bengaluru, First Published Dec 10, 2020, 7:22 PM IST

ಸಿಡ್ನಿ(ಡಿ.10): ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಏಕದಿನ ಹಾಗೂ ಟಿ20 ಸರಣಿ ಅಂತ್ಯಗೊಂಡಿದೆ. ಏಕದಿನ ಸರಣಿಯಲ್ಲಿ ಟೀಂ ಇಂಡಿಯಾ ಮುಗ್ಗರಿಸಿದರೆ, ಟಿ20 ಸರಣಿ ಗೆದ್ದುಕೊಂಡಿದೆ. ಇದೀಗ ಉಭಯ ತಂಡ ಟೆಸ್ಟ್ ಸರಣಿಗೆ ಅಭ್ಯಾಸ ಆರಂಭಿಸಿದೆ. ಇದರ ನಡುವೆ ಟೀಂ ಇಂಡಿಯಾದ ಮೂರನೇ ವೇಗಿ ಯಾರು ಅನ್ನೋ ಚರ್ಚೆ ಶುರುವಾಗಿದೆ. 

ಇಂಡೋ-ಆಸೀಸ್‌ ಡೇ ಅಂಡ್ ನೈಟ್‌ ಟೆಸ್ಟ್‌ ಪಂದ್ಯದಿಂದ ಸ್ಟಾರ್ ಬ್ಯಾಟ್ಸ್‌ಮನ್‌ ಔಟ್..

ಈ ಚರ್ಚೆಗೆ ಕಾರಣ ಇಶಾಂತ್ ಶರ್ಮಾ ಗಾಯ. ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆಯಾದ ಇಶಾಂತ್ ಶರ್ಮಾ, ಐಪಿಎಲ್ ಟೂರ್ನಿಗೂ ಮೊದಲೇ ಇಂಜುರಿಗೆ ತುತ್ತಾಗಿದ್ದರು. ಹೀಗಾಗಿ ಇಶಾಂತ್ ಆಸೀಸ್ ಪ್ರವಾಸದಿಂದ ಹೊರಬಿದ್ದರು. ಇದೀಗ ಇಶಾಂತ್ ಸ್ಥಾನ ತುಂಬಬಲ್ಲ ವೇಗಿ ಯಾರು ಅನ್ನೋದು  ಕುತೂಹವಾಗಿತ್ತು. ಆಸ್ಟ್ರೇಲಿಯಾ ಮಾಜಿ ನಾಯಕ ಇಯಾನ್ ಚಾಪೆಲ್ ಇತ್ತೀಚೆಗೆ ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರಿ ಜೊತೆಗಿನ ಪಾರ್ಟಿಯಲ್ಲಿ 3ನೇ ವೇಗಿ ಯಾರು ಅನ್ನೋದು ಬಯಲಾಗಿದೆ.

ಇಯಾನ್ ಚಾಪೆಲ್ ಈ ಮಾಹಿತಿ ಬಹಿರಂಗ ಪಡಿಸಿದ್ದಾರೆ. 3ನೇ ವೇಗಿ ಸ್ಥಾನಕ್ಕೆ ಉಮೇಶ್ ಯಾದವ್, ನವದೀಪ್ ಸೈನಿ ಹಾಗೂ ಮೊಹಮ್ಮದ್ ಸಿರಾಜ್ ನಡುವೆ ನಡುವೆ ಪೈಪೋಟಿ ಎರ್ಪಟ್ಟಿದೆ. ಇದರಲ್ಲಿ ಉಮೇಶ್ ಯಾದವ್ 3ನೇ ವೇಗಿಯಾಗಿ ಆಯ್ಕೆಯಾಗಲಿದ್ದಾರೆ ಎಂದು ಇಯಾನ್ ಚಾಪೆಲ್ ಹೇಳಿದ್ದಾರೆ.

ಈ ಮಾಹಿತಿ ತನಗೆ ರವಿ ಶಾಸ್ತ್ರಿ ಜೊತೆಗಿನ ಪಾರ್ಟಿಯಲ್ಲಿ ಲಭ್ಯವಾಗಿದೆ ಎಂದು ಚಾಪೆಲ್ ಹೇಳಿದ್ದಾರೆ. ಇನ್ನು ಟೀಂ ಇಂಡಿಯಾಗೆ ನಾಯಕತ್ವದ ಸಮಸ್ಯೆ ಎದುರಾಗಲ್ಲ ಎಂದಿದ್ದಾರೆ. ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ   ಅಜಿಂಕ್ಯ ರಹಾನೆ ತಂಡ ಮುನ್ನಡೆಸಲು ಸಮರ್ಥ ಎಂದು ಚಾಪೆಲ್ ಹೇಳಿದ್ದಾರೆ.

Follow Us:
Download App:
  • android
  • ios