Asianet Suvarna News Asianet Suvarna News

ಟೀಂ ಇಂಡಿಯಾ ಟಿ20 ಉಪನಾಯಕತ್ವಕ್ಕೆ ಮೂವರು ಕ್ರಿಕೆಟಿಗರ ಪೈಪೋಟಿ..!

* ಟೀಂ ಇಂಡಿಯಾ ಟಿ20 ನಾಯಕತ್ವಕ್ಕೆ ನಿವೃತ್ತಿ ಘೋಷಿಸಿದ ವಿರಾಟ್ ಕೊಹ್ಲಿ

* ರೋಹಿತ್ ಶರ್ಮಾ ಟೀಂ ಇಂಡಿಯಾ ಟಿ20 ನಾಯಕರಾಗುವುದು ಬಹುತೇಕ ಖಚಿತ

* ಇದೀಗ ಟೀಂ ಇಂಡಿಯಾ ಟಿ20 ತಂಡದ ಉಪನಾಯಕರಾಗಲು ಮೂವರ ನಡುವೆ ಫೈಟ್

Team India T20 Cricket vice captaincy KL Rahul Rishabh Pant and Jasprit Bumrah in the fray kvn
Author
New Delhi, First Published Sep 18, 2021, 11:34 AM IST
  • Facebook
  • Twitter
  • Whatsapp

ನವದೆಹಲಿ(ಸೆ.18): ಮುಂಬರುವ ಟಿ20 ವಿಶ್ವಕಪ್‌ ಬಳಿಕ ಭಾರತ ಟಿ20 ತಂಡದ ನಾಯಕತ್ವದಿಂದ ಕೆಳಗಿಳಿಯುವುದಾಗಿ ವಿರಾಟ್‌ ಕೊಹ್ಲಿ ಘೋಷಿಸಿದ ಬಳಿಕ ರೋಹಿತ್‌ ಶರ್ಮಾ ಹೊಸ ನಾಯಕನಾಗಿ ನೇಮಕಗೊಳ್ಳುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. 

ಆದರೆ ಉಪನಾಯಕನ ಸ್ಥಾನಕ್ಕೆ ಪ್ರಮುಖವಾಗಿ ಮೂವರು ಆಟಗಾರರ ಹೆಸರು ಕೇಳಿಬರುತ್ತಿದೆ. ಕೆ.ಎಲ್‌.ರಾಹುಲ್‌ ಹಾಗೂ ರಿಷಭ್‌ ಪಂತ್‌ ಮುಂಚೂಣಿಯಲ್ಲಿದ್ದಾರೆ ಎನ್ನಲಾಗಿದೆ. ಇಬ್ಬರಿಗೂ ಐಪಿಎಲ್‌ ತಂಡ ಮುನ್ನಡೆಸಿದ ಅನುಭವವಿದೆ. ಪಿಟಿಐ ವರದಿಯ ಪ್ರಕರ ಟೀಂ ಇಂಡಿಯಾ ಟಿ20 ಉಪನಾಯಕ ಪಟ್ಟಕ್ಕೆ ರಿಷಭ್ ಪಂತ್ ಪ್ರಬಲ ಸ್ಪರ್ಧಿ ಎನಿಸಿದ್ದಾರೆ. ಇನ್ನು 2017ರಲ್ಲಿ ವಿರಾಟ್ ಕೊಹ್ಲಿ ಎಲ್ಲಾ ಮಾದರಿಯ ನಾಯಕರಾಗಿ ಆಯ್ಕೆಯಾದ ಬಳಿಕ ಸೀಮಿತ ಓವರ್‌ಗಳ ತಂಡದ ಉಪನಾಯಕನಾಗಿ ರೋಹಿತ್ ಶರ್ಮಾ ನೇಮಕವಾಗಿದ್ದರು.

ಯಾರಾಗಲಿದ್ದಾರೆ ಟೀಂ ಇಂಡಿಯಾ ಮುಂದಿನ ಟಿ20 ಕ್ಯಾಪ್ಟನ್‌..?

ಇದೆಲ್ಲದರ ನಡುವೆ ವೇಗಿ ಜಸ್‌ಪ್ರೀತ್‌ ಬುಮ್ರಾ ಹೆಸರು ಸಹ ಪ್ರಸ್ತಾಪವಾಗಿದೆ ಎಂದು ಮೂಲಗಳು ತಿಳಿಸಿವೆ. ಬುಮ್ರಾ ಅಚ್ಚರಿಯ ಆಯ್ಕೆಯಾಗಬಹುದು ಎಂದು ಹೇಳಲಾಗುತ್ತಿದೆ. ಗುಜರಾತ್‌ ಮೂಲದ ವೇಗಿ ಯಾವುದೇ ಮಾದರಿಯಲ್ಲಿ ತಂಡ ಮುನ್ನಡೆಸಿದ ಅನುಭವ ಹೊಂದಿಲ್ಲ.

ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಮುಗಿದ ಬಳಿಕ ಟೀಂ ಇಂಡಿಯಾ ತವರಿನಲ್ಲಿ ನ್ಯೂಜಿಲೆಂಡ್ ವಿರುದ್ದ ಸರಣಿಯನ್ನಾಡಲಿದ್ದು, ಈ ವೇಳೆ ಟಿ20 ತಂಡದ ನಾಯಕ ಹಾಗೂ ಉಪನಾಯಕರನ್ನು ಆಯ್ಕೆ ಸಮಿತಿ ನೇಮಕ ಮಾಡಲಿದೆ ಎಂದು ವರದಿಯಾಗಿದೆ.
 

Follow Us:
Download App:
  • android
  • ios