ಹರ್ಯಾಣ(ಆ.08): ಕೊರೋನಾ ವೈರಸ್ ಕಾರಣ ಕ್ರಿಕೆಟಿಗರು ಮನೆಯಲ್ಲಿ ಬಂದಿಯಾಗಿದ್ದಾರೆ. ಇದರ ನಡುವೆ ಕೆಲ ಕ್ರಿಕೆಟಿಗರು ಆನ್‌ಲೈನ್ ಮೂಲಕ ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸಿದ್ದರು. ಸುದೀರ್ಘ ದಿನಗಳ ಬಳಿಕ ಇದೀಗ ಕ್ರಿಕೆಟಿಗರು ಮೈದಾನದತ್ತ ಮುಖ ಮಾಡಿದ್ದಾರೆ. ಐಪಿಎಲ್ ಟೂರ್ನಿಗೆ ತಯಾರಿ ಆರಂಭಿಸಿದ್ದಾರೆ. ಇದರ ನಡುವೆ ಟೀಂ ಇಂಡಿಯಾ ಸ್ಪಿನ್ನರ್ ಯಜುವೇಂದ್ರ ಚಹಾಲ್, ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಚೆಸ್ & ಕ್ರಿಕೆಟ್‌ನಲ್ಲಿ ದೇಶವನ್ನು ಪ್ರತಿನಿಧಿಸಿದ ಏಕೈಕ ಪ್ರತಿಭೆ ಯುಜುವೇಂದ್ರ ಚಹಲ್

ಕೊರಿಯೋಗ್ರಾಫರ್, ಯುಟ್ಯೂಬರ್ ಹಾಗೂ ಡಾಕ್ಟರ್ ಆಗಿರುವ ಧನಶ್ರಿ ವರ್ಮಾ ಅವರಿಗೆ ಚಹಾಲ್ ಮನಸ್ಸು ನೀಡಿದ್ದಾರೆ. ನಾವು ಒಪ್ಪಿದೆವು, ಮನೆಯವರೂ ಒಪ್ಪಿದರು. ಇಂದು ಎಂಗೇಜ್ಮೆಂಟ್ ಸೆರಮನಿ ಎಂದು ಸಾಮಾಜಿಕ ಜಾಲತಾಣದಲ್ಲಿ ಚಹಾಲ್ ಪೋಸ್ಟ್ ಮಾಡಿದ್ದಾರೆ. ವರ್ಮಾ ಜೊತೆಗಿನ ಎಂಗೇಜ್ಮೆಂಟ್ ಫೋಟೋವನ್ನು ಹಂಚಿಕೊಂಡಿದ್ದಾರೆ.

 

 
 
 
 
 
 
 
 
 
 
 
 
 

We said “Yes” along with our families❤️ #rokaceremony

A post shared by Yuzvendra Chahal (@yuzi_chahal23) on Aug 8, 2020 at 3:45am PDT

ಭಾರತದ ಪರ 52 ಏಕದಿನ ಹಾಗೂ 42 ಟಿ20 ಪಂದ್ಯ ಆಡಿರುವ ಚಹಾಲ್ ಪ್ರಮುಖ ಸ್ಪಿನ್ನರ್ ಆಗಿ ಬಡ್ತಿ ಪಡೆದಿದ್ದಾರೆ. ನಿಗದಿತ ಓವರ್ ಕ್ರಿಕೆಟ್‌ನ ಖಾಯಂ ಸ್ಪಿನ್ನರ್ ಚಹಾಲ್ ಏಕದಿನದಲ್ಲಿ 91 ವಿಕೆಟ್ ಹಾಗೂ ಟಿ20ಯಲ್ಲಿ 55 ವಿಕೆಟ್ ಕಬಳಿಸಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ 84 ಪಂದ್ಯದಿಂದ 100 ವಿಕೆಟ್ ಕಬಳಿಸಿದ್ದಾರೆ.