ಮುಂಬೈ(ನ.21): ಕ್ರಿಕೆಟ್‌ನಲ್ಲಿ ಪ್ರತಿ ದಿನ ಹಲವು ದಾಖಲೆಗಳು ನಿರ್ಮಾಣವಾಗುತ್ತೆ.  ಕೆಲವು ಅನಗತ್ಯ ದಾಖಲೆಗಳು ವಿಶ್ವಮಟ್ಟದಲ್ಲಿ ಸದ್ದು ಮಾಡುತ್ತವೆ. ಇದೀಗ ತಂಡದ 10 ಆಟಗಾರರು ಶೂನ್ಯಕ್ಕೆ ಔಟಾಗಿದ್ದರೆ, ಅಜೇಯರಾಗಿ ಉಳಿದ ಆಟಗಾರ ಕೂಡ ಶೂನ್ಯದಿಂದ ಮೇಲಕ್ಕೇರಿಲ್ಲ. ಈ ಮೂಲಕ ತಂಡ ಕೇವಲ 7 ರನ್‌ಗೆ ಆಲೌಟ್ ಆಗಿದೆ. ಈ ಮೂಲಕ ಎದುರಾಳಿ ತಂಡ 754 ರನ್ ಬೃಹತ್ ಗೆಲುವು ಸಾಧಿಸಿರುವ ಅಪರೂಪದ ಘಟನೆ ನಡೆದಿದೆ.

ಇದನ್ನೂ ಓದಿ: IPLಗೆ ಮತ್ತೊಂದು ತಂಡ ಸೇರ್ಪಡೆ; 9 ಫ್ರಾಂಚೈಸಿಗಳೊಂದಿಗೆ ಚುಟುಕು ವಾರ್?

ಅಂಡರ್ 16 ಹ್ಯಾರಿಸ್ ಶೀಲ್ಡ್ ಗೇಮ್ ಶಾಲಾ ಟೂರ್ನಿಯಲ್ಲಿ ಈ ಅಪರೂಪದ ಅನಗತ್ಯ ದಾಖಲೆ ನಿರ್ಮಾಣವಾಗಿದೆ. ಅಂಧೇರಿಯ ಚಿಲ್ಡ್ರನ್ಸ್ ವೆಲ್‌ಫೇರ್ ಸೆಂಟರ್ ಸ್ಕೂಲ್ 7 ರನ್‌ಗೆ ಡಕೌಟ್ ಆದ ಅಪಖ್ಯಾತಿಗೆ ಗುರಿಯಾಗಿದೆ. ಮೊದಲು ಬ್ಯಾಟಿಂಗ್ ಮಾಡಿದ ಸ್ವಾಮಿ ವಿವೇಕಾನಂದ ಅಂತಾರಾಷ್ಟ್ರೀಯ ಶಾಲಾ ತಂಡ 45 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 761 ರನ್ ಸಿಡಿಸಿದೆ.

ಇದನ್ನೂ ಓದಿ: ಟ್ವೀಟ್ ಮಾಡಿ ಧೋನಿ ಅಭಿಮಾನಿಗಳ ತಲೆಗೆ ಹುಳ ಬಿಟ್ಟ ವಿರಾಟ್ ಕೊಹ್ಲಿ!

ಬ್ಯಾಟ್ಸ್‌ಮನ್ ಮಯೇಕರ್ 134 ಎಸೆತದಲ್ಲಿ 7 ಸಿಕ್ಸರ್ ಹಾಗೂ 56 ಬೌಂಡರಿ ಮೂಲಕ 338 ರನ್ ಸಿಡಿಸಿ ಮಿಂಚಿದ್ದಾನೆ.  ಮಯೇಕರ್ ತ್ರಿಶತಕದಿಂದ ವಿವೇಕಾನಂದ ಶಾಲಾ ತಂಡ ಬರೋಬ್ಬರಿ 761 ರನ್ ಸಿಡಿಸಿ ದಾಖಲೆ ಬರೆಯಿತು. ಇಷ್ಟೇ ಅಲ್ಲ ವೆಲ್‌ಫೇರ್ ತಂಡಕ್ಕೆ 762 ರನ್ ಟಾರ್ಗೆಟ್ ನೀಡಿತು.

ಬೃಹತ್ ನೋಡಿ ಸುಸ್ತಾದ ವೆಲ್‌ಫೇರ್ ತಂಡ ಕೇವಲ 6 ಓವರ್‌ಗಳಲ್ಲಿ 10 ವಿಕೆಟ್ ಕಳೆದುಕೊಂಡಿತು. ಯಾವ ಬ್ಯಾಟ್ಸ್‌‌ಮನ್ ಕೂಡ ರನ್ ಖಾತೆ ತೆರೆಯಲಿಲ್ಲ. 6 ಓವರ್‌ನಲ್ಲಿ ಸಿಕ್ಕಿದ 7 ಇತರ ರನ್ ಮಾತ್ರ ತಂಡದ ಆಸ್ತಿಯಾಯಿತು. ವೆಲ್‌ಫೇರ್ ತಂಡವನ್ನು 7 ರನ್‌ಗೆ ಆಲೌಟ್ ಮಾಡಿದ ವಿವೇಕಾನಂದ ತಂಡ, 754 ರನ್ ಗೆಲುವು ಕಂಡಿತು.