ಬಹುನಿರೀಕ್ಷಿತ ಆಸ್ಟ್ರೇಲಿಯಾ ಹಾಗೂ ಭಾರತ ನಡುವಿನ ಮೊದಲ ಟೆಸ್ಟ್‌ನ ಮೊದಲ ದಿನ ಉಭಯ ತಂಡಗಳು ಪ್ರಬಲ ಹೋರಾಟ ನಡೆಸಿದೆ. ದಿಟ್ಟ ಹೋರಾಟ ನೀಡಿದರೂ ಭಾರತ ವಿಕೆಟ್ ಉಳಿಸಿಕೊಳ್ಳವಲ್ಲಿ ಯಶಸ್ವಿಯಾಗಿಲ್ಲ. ಇತ್ತ ಆಸೀಸ್ ಅಂದಕೊಂಡಂತೆ ಆಗದಿದ್ದರೂ, ಪ್ರಾಬಲ್ಯ ಮೆರೆಯುವಲ್ಲಿ ಯಶಸ್ವಿಯಾಗಿದೆ.
ಆಡಿಲೇಡ್(ಡಿ.17): ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನ ಅಂತ್ಯವಾಗಿದೆ. ಆಡಿಲೇಡ್ ಟೆಸ್ಟ್ ಮೊದಲ ದಿನ ಭಾರತ ವಿಕೆಟ್ ಕಳೆದುಕೊಂಡರು ದಿನದಾಟದ ಅಂತ್ಯಕ್ಕೆ 233 ರನ್ ಕಲೆ ಹಾಕಿದೆ. 6 ವಿಕೆಟ್ ಕಳೆದುಕೊಂಡಿರುವ ಟೀಂ ಇಂಡಿಯಾಗೆ ವೃದ್ಧಿಮಾನ್ ಸಾಹ ಹಾಗೂ ಆರ್ ಅಶ್ವಿನ್ ಆಸರೆಯಾಗಿದ್ದಾರೆ.
ನಾನು ನವ ಭಾರತದ ಪ್ರತಿನಿಧಿ: ವಿರಾಟ್ ಕೊಹ್ಲಿ
ನಾಯಕ ವಿರಾಟ್ ಕೊಹ್ಲಿ ಟಾಸ್ ಗೆದ್ದ ಟೆಸ್ಟ್ ಪಂದ್ಯ ಸೋತಿಲ್ಲ. ಹೀಗಾಗಿ ಆಡಿಲೇಡ್ ಟೆಸ್ಟ್‌ನಲ್ಲಿ ಟಾಸ್ ಗೆದ್ದಿರುವ ಕೊಹ್ಲಿ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಆದರೆ ಮೊದಲ ಓವರ್‌ನ 2ನೇ ಎಸೆತದಲ್ಲೇ ಪೃಥ್ವಿ ಶಾ ವಿಕೆಟ್ ಪತನ ಭಾರತಕ್ಕೆ ತೀವ್ರ ಹಿನ್ನಡೆ ತಂದಿತ್ತು. ಇದರ ಬೆನ್ನಲ್ಲೇ ಮಯಾಂಕ್ ಅಗರ್ವಾಲ್ 17 ರನ್ ಸಿಡಿಸಿ ನಿರ್ಗಮಿಸಿದ್ದರು.
ಪಿಂಕ್ ಬಾಲ್ ಟೆಸ್ಟ್: ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ
ಚೇತೇಶ್ವರ ಪೂಜಾರ ಹಾಗೂ ನಾಯಕ ವಿರಾಟ್ ಕೊಹ್ಲಿ ಜೊತೆಯಾಟದಿಂದ ಟೀಂ ಇಂಡಿಯಾ ಚೇತರಿಸಿಕೊಂಡಿತು. ಪೂಜಾರ 43 ರನ್ ಸಿಡಿಸಿ ಔಟಾದರು. ಉಪನಾಯಕ ಅಜಿಂಕ್ಯ ರಹಾನೆ ಜೊತೆ ಬ್ಯಾಟಿಂಗ್ ಮುಂದುವರಿಸಿದ ಕೊಹ್ಲಿ, ಆಸೀಸ್ ತಂಡಕ್ಕೆ ತಿರುಗೇಟು ನೀಡಿದರು. ಆದರೆ ಅನಗತ್ಯ ಓಟಕ್ಕೆ ಮುಂದಾದ ಕೊಹ್ಲಿ ರನೌಟ್‌ಗೆ ಬಲಿಯಾದರು.
ಕೊಹ್ಲಿ 74 ರನ್ ಸಿಡಿಸಿ ಔಟಾದರು. ಈ ಮೂಲಕ ಮೊದಲ ದಿನವೇ ಆಸೀಸ್ ಪ್ರಾಬಲ್ಯ ಮೆರೆಯಲು ಸಾಧ್ಯವಾಯಿತು. ಇತ್ತ ಅಜಿಂಕ್ಯ ರಹಾನೆ 42 ರನ್ ಸಿಡಿಸಿ ಔಟಾದರೆ, ಹನುಮಾ ವಿಹಾರಿ 16 ರನ್ ಸಿಡಿಸಿ ನಿರ್ಗಮಿಸಿದರು. ಆರ್ ಅಶ್ವಿನ್ ಅಜೇಯ 15 ಹಾಗೂ ವೃದ್ಧಿಮಾನ್ ಸಾಹ ಅಜೇಯ 9 ರನ್ ಸಿಡಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ.
2ನೇ ದಿನದಾಟದ ಇದೀಗ ತೀವ್ರ ಕುತೂಹಲ ಕೆರಳಿಸಿದೆ. ಟೀಂ ಇಂಡಿಯಾ ಸಾಧ್ಯವಾಷ್ಟು ರನ್ ಪೇರಿಸುವ ಯತ್ನದಲ್ಲಿದ್ದರೆ, ಆಸೀಸ್ ಆಲೌಟ್ ಮಾಡುವ ಲೆಕ್ಕಾಚಾರದಲ್ಲಿದೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Dec 17, 2020, 5:36 PM IST