ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ಅಡಿಲೇಡ್(ಡಿ.17): ಭಾರತ-ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಸರಣಿಯ ಐತಿಹಾಸಿಕ ಪಿಂಕ್‌ ಬಾಲ್ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ.

ಭಾರತ ತಂಡದ ಆಡುವ ಹನ್ನೊಂದರ ಬಳಗವನ್ನು ನಾಯಕ ವಿರಾಟ್ ಕೊಹ್ಲಿ ಬುಧುವಾರ(ನಿನ್ನೆ-ಡಿ.16)ವೇ ಪ್ರಕಟಿಸಿದ್ದರು. ಇನ್ನು ಟಿಮ್ ಪೈನ್ ನೇತೃತ್ವದ ಆಸ್ಟ್ರೇಲಿಯಾ ಕೂಡಾ ಬಲಿಷ್ಠ ತಂಡವಾಗಿಯೇ ಕಣಕ್ಕಿಳಿದಿದೆ.

Scroll to load tweet…

ಆಸ್ಟ್ರೇಲಿಯಾ ತಂಡದಲ್ಲಿ ಆರಂಭಿಕರಾಗಿ ಮ್ಯಾಥ್ಯೂ ವೇಡ್ ಹಾಗೂ ಜೋ ಬರ್ನ್ಸ್‌ ಕಣಕ್ಕಿಳಿಯಲಿದ್ದಾರೆ. ಇನ್ನು ಕೀಪರ್ ಪಾತ್ರದ ಜತೆಗೆ ನಾಯಕನಾಗಿ ಟಿಮ್ ಪೈನ್ ತಂಡಕ್ಕೆ ಆಸರೆಯಾಗಬೇಕಿದೆ. ಆಸ್ಟ್ರೇಲಿಯಾ ಪರ ಕ್ಯಾಮರೋನ್ ಗ್ರೀನ್‌ ಟೆಸ್ಟ್‌ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದಾರೆ.

ಇಂಡೋ-ಆಸೀಸ್ ಪಿಂಕ್ ಬಾಲ್ ಟೆಸ್ಟ್‌ ಪಂದ್ಯಕ್ಕೆ ಕ್ಷಣಗಣನೆ ಆರಂಭ

ಅಂಕಿ-ಅಂಶ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಟೆಸ್ಟ್‌ ಕ್ರಿಕೆಟ್‌ನಲ್ಲಿ ನಾಯಕನಾಗಿ ಇದುವರೆಗೂ 26 ಪಂದ್ಯಗಳಲ್ಲಿ ಟಾಸ್ ಗೆದ್ದಿದ್ದು, ಈ ಪೈಕಿ 21 ಪಂದ್ಯಗಳಲ್ಲಿ ತಂಡ ಗೆಲುವು ದಾಖಲಿಸಿದೆ. ಇನ್ನು 4 ಪಂದ್ಯಗಳು ಡ್ರಾನಲ್ಲಿ ಅಂತ್ಯವಾಗಿವೆ. ಆದರೆ ವಿರಾಟ್ ಕೊಹ್ಲಿ ಟೆಸ್ಟ್‌ ಕ್ರಿಕೆಟ್‌ನಲ್ಲಿ ಟಾಸ್ ಗೆದ್ದ ಪಂದ್ಯದಲ್ಲಿ ಇದುವರೆಗೂ ತಂಡ ಸೋಲಿನ ಕಹಿಯುಂಡಿಲ್ಲ. ನಾಯಕ ಕೊಹ್ಲಿ ಟಾಸ್ ಗೆದ್ದಿರುವುದು ತಂಡದ ಪಾಲಿಗೆ ಆರಂಭಿಕ ಶುಭ ಸೂಚನೆ ಸಿಕ್ಕಂತಾಗಿದೆ.

ತಂಡಗಳು ಹೀಗಿವೆ:

ಭಾರತ:

Scroll to load tweet…

ಆಸ್ಟ್ರೇಲಿಯಾ:

Scroll to load tweet…