ಅಡಿಲೇಡ್‌(ಡಿ.17): ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ತಮ್ಮನ್ನ ತಾವು ‘ನವ ಭಾರತದ ಪ್ರತಿನಿಧಿ’ ಎಂದು ಕರೆದುಕೊಂಡಿದ್ದು, ಯಾವುದೇ ಸವಾಲಿಗಾದರೂ ಸಿದ್ಧ ಎಂದಿದ್ದಾರೆ. 

ಇತ್ತೀಚೆಗಷ್ಟೇ ಆಸ್ಪ್ರೇಲಿಯಾದ ಮಾಜಿ ನಾಯಕ ಗ್ರೆಗ್‌ ಚಾಪೆಲ್‌, ಕೊಹ್ಲಿಯನ್ನು ‘ಸಾರ್ವಕಾಲಿಕ ಶ್ರೇಷ್ಠ ಆಸ್ಪ್ರೇಲಿಯೇತರ ಕ್ರಿಕೆಟಿಗ’ ಎಂದು ಕರೆದಿದ್ದರು. ಭಾರತದ ಮಾಜಿ ಕೋಚ್‌ ಸಹ ಆಗಿದ್ದ ಚಾಪೆಲ್‌ರ ಈ ಹೇಳಿಕೆ ಬಗ್ಗೆ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಕೊಹ್ಲಿ, ‘ನಾನು ಸದಾ ನನ್ನ ಸ್ವಂತಿಕೆಯನ್ನು ಉಳಿಸಿಕೊಳ್ಳಲು ಯತ್ನಿಸುತ್ತೇನೆ. ನನ್ನ ವ್ಯಕ್ತಿತ್ವ ಹಾಗೂ ನಡತೆ ನವ ಭಾರತವನ್ನು ಪ್ರತಿನಿಧಿಸುವಂಥದ್ದಾಗಿರುತ್ತದೆ. ನಾನು ಆ ದೃಷ್ಟಿಯಲ್ಲೇ ಯೋಚಿಸುತ್ತೇನೆ’ ಎಂದರು.

ಭಾರತ-ಆಸ್ಟ್ರೇಲಿಯಾ 1ನೇ ಟೆಸ್ಟ್: ಬಲಿಷ್ಠ ಪ್ಲೇಯಿಂಗ್ 11 ಪ್ರಕಟಿಸಿದ ನಾಯಕ ಕೊಹ್ಲಿ!

ಸದ್ಯ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದು, ಮೊದಲ ಟೆಸ್ಟ್‌ ಪಂದ್ಯ ಮುಕ್ತಾಯದ ಬಳಿಕ ತವರಿಗೆ ವಾಪಾಸಾಗಲಿದ್ದಾರೆ. ಕೊಹ್ಲಿ ಅನುಪಸ್ಥಿತಿಯಲ್ಲಿ ಟೀಂ ಇಂಡಿಯಾ ಯಾವ ರೀತಿಯ ಪ್ರದರ್ಶನ ತೋರಲಿದೆ ಎನ್ನುವ ಕುತೂಹಲ ಸಾಕಷ್ಟು ಜೋರಾಗಿದೆ.

ಆಸ್ಪ್ರೇಲಿಯಾ ತಲುಪಿದ ರೋಹಿತ್‌ ಶರ್ಮಾ

ಸಿಡ್ನಿ: ಆಸ್ಪ್ರೇಲಿಯಾ ವಿರುದ್ಧದ ಟೆಸ್ಟ್‌ ಸರಣಿಗಾಗಿ ಭಾರತ ತಂಡದ ಬ್ಯಾಟ್ಸ್‌ಮನ್‌ ರೋಹಿತ್‌ ಶರ್ಮಾ ಆಸ್ಪ್ರೇಲಿಯಾ ತಲುಪಿದ್ದಾರೆ. ಸ್ಥಳೀಯ ಸರ್ಕಾರ ನಿಗದಿಪಡಿಸಿರುವ 14 ದಿನಗಳ ಕ್ವಾರಂಟೈನ್‌ಗೆ ರೋಹಿತ್‌ ಒಳಗಾಗಿದ್ದಾರೆ. ಆ ಬಳಿಕ ಮತ್ತೆ ಫಿಟ್ನೆಸ್‌ ಟೆಸ್ಟ್‌ಗೆ ಒಳಗಾಗಲಿದ್ದಾರೆ. ಜ.7ರಿಂದ ಸಿಡ್ನಿಯಲ್ಲಿ ನಡೆಯಲಿರುವ 3ನೇ ಟೆಸ್ಟ್‌ನಲ್ಲಿ ರೋಹಿತ್‌ ಆಡುವ ನಿರೀಕ್ಷೆ ಇದೆ.