* ಭಾರತ-ಇಂಗ್ಲೆಂಡ್ ನಡುವಿನ ಟಿ20 ಸರಣಿಗೆ ಕ್ಷಣಗಣನೆ* ಪೂರ್ಣಪ್ರಮಾಣದ ಟೀಂ ಇಂಡಿಯಾ ನಾಯಕರಾದ ಬಳಿಕ ರೋಹಿತ್‌ ಶರ್ಮಾಗೆ ಅಗ್ನಿಪರೀಕ್ಷೆ'* ಸ್ವದೇಶದಲ್ಲಿ ಗೆಲುವಿನ ನಾಗಾಲೋಟ ಮುಂದುವರೆಸಿದ್ದ ಹಿಟ್‌ಮ್ಯಾನ್ ಪಡೆಗೆ ರಿಯಲ್ ಟೆಸ್ಟ್ ಆರಂಭ

ಸೌಥಾಂಪ್ಟನ್​(ಜು): ಡಿಸೆಂಬರ್​​​​ 8, 2021 ರಂದು ರೋಹಿತ್ ಶರ್ಮಾ ಟೀಂ​ ಇಂಡಿಯಾದ (Team India) ಕ್ಯಾಪ್ಟನ್ ಆಗಿ ನೇಮಕಗೊಂಡಿದ್ರು. ಸದ್ಯ ಹಿಟ್​ಮ್ಯಾನ್​​ ತಂಡದ ಚುಕ್ಕಾಣಿ ಹಿಡಿದು 7 ತಿಂಗಳು ಕಳೆದಿದೆ. ಆದರೂ ಈವರೆಗೆ ರೋಹಿತ್ ಶರ್ಮಾ ವಿದೇಶಿ ನೆಲದಲ್ಲಿ ಒಮ್ಮೆಯೂ ತಂಡವನ್ನು ಮುನ್ನಡೆಸಿಲ್ಲ. ಬರೀ ತವರಿನಲ್ಲಷ್ಟೇ ತಂಡ ಮುನ್ನಡೆಸಿದ್ದಾರೆ. ಇಂತಹ ರೋಹಿತ್​​​ ಶರ್ಮಾಗೆ ಇದೀಗ ಮೊದಲ ವಿದೇಶಿ ಅಗ್ನಿಪರೀಕ್ಷೆ ಎದುರಾಗಿದೆ.

7 ತಿಂಗಳ ಬಳಿಕ ವಿದೇಶಿ ನೆಲದಲ್ಲಿ ಚುಕ್ಕಾಣಿ : 

ಇಂದಿನಿಂದ ಇಂಗ್ಲೆಂಡ್​ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿ ಆರಂಭಗೊಳ್ಳಲಿದೆ. ಇದು ರೋಹಿತ್ ಶರ್ಮಾಗೆ (Rohit Sharma) ಹೊಸ ಟಾಸ್ಕ್. ಯಾಕಂದ್ರೆ ಟೀಂ​​ ಇಂಡಿಯಾ ಪೂರ್ಣಪ್ರಮಾಣದ ಕ್ಯಾಪ್ಟನ್ ಆದ 7 ತಿಂಗಳ ಬಳಿಕ ರೋಹಿತ್ ಶರ್ಮಾ ಫಾರಿನ್​ ನೆಲದಲ್ಲಿ ಮೊದಲ ಬಾರಿ ಭಾರತ ಕ್ರಿಕೆಟ್‌ ತಂಡ ಮುನ್ನಡೆಸ್ತಿದ್ದಾರೆ. ಅದು ಬಲಿಷ್ಠ ಇಂಗ್ಲೆಂಡ್​​​​​​ ತಂಡದ ವಿರುದ್ಧ. ಹೀಗಾಗಿ ರೋಹಿತ್​ ಶರ್ಮಾಗೆ ಮೊದಲ ವಿದೇಶಿ ಸರಣಿನೇ ದೊಡ್ಡ ಸವಾಲೆನಿಸಿದೆ.

ರೋಹಿತ್​​ಗೆ ಈಗಾಗ್ಲೇ ಕ್ಯಾಪ್ಟನ್ ಆಗಿ ತವರಿನಲ್ಲಿ ಯಶಸ್ಸು ಗಳಿಸಿದ್ದೂ, ಒಂದು ಪಂದ್ಯದಲ್ಲೂ ಭಾರತ ಸೋತಿಲ್ಲ. ಹಿಟ್‌ಮ್ಯಾನ್ ಈಗಾಗ್ಲೆ ಗೆಲುವಿನ ತೋರಣ ಕಟ್ಟಿದ್ದಾರೆ. ಈಗ ಈ ಮ್ಯಾಜಿಕ್​​​​, ಆಂಗ್ಲರ ನಾಡಲ್ಲೂ ರಿಪೀಟ್ ಆಗೋದು ಕಠಿಣ ವೆನಿಸಿದೆ. ಯಾಕಂದ್ರೆ ಇಂಡಿಯನ್​ ಕಂಡಿಷನ್​​​ ಬೇರೆ, ಇಂಗ್ಲೆಂಡ್ ಕಂಡೀಷನ್ ಬೇರೆ. ಇಲ್ಲಿ ಅನುಭವ ಹೊಂದಿದ್ರೆ ಸಾಲದು, ಸಾಂಘಿಕ ಪ್ರದರ್ಶನ ಮೂಡಿ ಬರಬೇಕಿದೆ. ಆದ್ರೆ ತಂಡ ಆ ಕೊರತೆ ಎದುರಿಸ್ತಿದೆ.

Ind vs Eng ಇಂದಿನಿಂದ ಟೀಂ ಇಂಡಿಯಾಗೆ ಇಂಗ್ಲೆಂಡ್ ಟಿ20 ಚಾಲೆಂಜ್..!

ಸ್ವತಃ ಕ್ಯಾಪ್ಟನ್ ರೋಹಿತ್ ಶರ್ಮಾ ಬ್ಯಾಡ್​​ ಫಾರ್ಮ್​ ಸುಳಿಗೆ ಸಿಲುಕಿದ್ದಾರೆ. ಇವರ ಬ್ಯಾಟ್​​ನಿಂದ ಬಿಗ್ ಇನ್ನಿಂಗ್ಸ್ ಮೂಡಿ ಬರ್ತಿಲ್ಲ. ಇನ್ನು ತಂಡದ ಮಿಡಲ್ ಆರ್ಡರ್​​​​​​​ ಬ್ಯಾಟರ್ಸ್​ ಕೂಡ ಸ್ಥಿರ ಪ್ರದರ್ಶನ ನೀಡ್ತಿಲ್ಲ. ಇದರ ಜೊತೆ ಯಂಗ್​​ ಪ್ಲೇಯರ್ಸ್​ ತಂಡದಲ್ಲಿದ್ದು ನೈತಿಕ ಸ್ಥೈರ್ಯ ತುಂಬುವ ಕೆಲಸವನ್ನ ಕ್ಯಾಪ್ಟನ್ ರೋಹಿತ್ ಶರ್ಮಾ​ ಮಾಡಬೇಕಿದೆ. ಫೈನಲಿ ಸ್ವದೇಶಿ ಯಶಸ್ವಿ ಕ್ಯಾಪ್ಟನ್, ಫಾರಿನ್​​​​ನಲ್ಲಿ ಸಕ್ಸಸ್​ ಕಾಣ್ತಾರಾ ? ಇಲ್ಲ ಹಿಟ್​ಮ್ಯಾನ್​ ಕ್ಯಾಪ್ಟನ್ಸಿ ಸೂಪರ್ ಶೋ ಬರೀ ಭಾರತಕ್ಕಷ್ಟೇ ಸೀಮಿತವಾಗುತ್ತಾ ಅನ್ನೋದನ್ನು ಕಾದು ನೋಡಬೇಕು.

ಭಾರತ-ಇಂಗ್ಲೆಂಡ್ ನಡುವಿನ ಸೀಮಿತ ಓವರ್‌ಗಳ ಸರಣಿಯ ವೇಳಾಪಟ್ಟಿ

ಜುಲೈ 07 - ಮೊದಲ ಟಿ20- ಸೌಥಾಂಪ್ಟನ್- ರಾತ್ರಿ 10.30
ಜುಲೈ 09 - ಎರಡನೇ ಟಿ20- ಬರ್ಮಿಂಗ್‌ಹ್ಯಾಮ್- ಸಂಜೆ 7.00
ಜುಲೈ 10 - ಮೂರನೇ ಟಿ20 - ನಾಟಿಂಗ್‌ಹ್ಯಾಮ್‌- ಸಂಜೆ 7.00

ಜುಲೈ 12 - ಮೊದಲ ಏಕದಿನ - ಲಂಡನ್ - ಸಂಜೆ 5.30
ಜುಲೈ 14 - ಎರಡನೇ ಏಕದಿನ - ಲಂಡನ್ - ಸಂಜೆ 5.30
ಜುಲೈ 17 - ಮೂರನೇ ಏಕದಿನ - ಮ್ಯಾಂಚೆಸ್ಟರ್ - ಮಧ್ಯಾಹ್ನ 3.30