ಗುವಾಹಟಿ[ಜ.04]: ಟೀಂ ಇಂಡಿಯಾ ಮಾರಕ ವೇಗಿ ಜಸ್ಪ್ರೀತ್ ಬುಮ್ರಾ ಹಲವು ತಿಂಗಳುಗಳ ಬಳಿಕ ತಂಡ ಕೂಡಿಕೊಂಡಿದ್ದು, ಲಂಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಮಿಂಚು ಹರಿಸಲು ರೆಡಿಯಾಗಿದ್ದಾರೆ. ಗುವಾಹಟಿಯಲ್ಲಿ ನಡೆಯಲಿರುವ ಪಂದ್ಯಕ್ಕೂ ಮುನ್ನ ಲಂಕಾ ಬ್ಯಾಟ್ಸ್‌ಮನ್’ಗಳಿಗೆ ಎಚ್ಚರಿಕೆ ರವಾನಿಸಿದ್ದಾರೆ. 

ಲಂಕಾ ವಿರುದ್ಧದ ಟಿ20 ಪಂದ್ಯಕ್ಕೆ 2 ಬದಲಾವಣೆ ಖಚಿತ; ಇಲ್ಲಿದೆ ಸಂಭವನೀಯ ತಂಡ!

ಹೌದು, ಜಸ್ಪ್ರೀತ್ ಬುಮ್ರಾ 2019ರ ಅಕ್ಟೋಬರ್ ಬಳಿಕ ಗಾಯದ ಸಮಸ್ಯೆಯಿಂದಾಗಿ ತಂಡದಿಂದ ಹೊರಗುಳಿದಿದ್ದರು. ಇದೀಗ ಲಂಕಾ ವಿರುದ್ಧದ ಸರಣಿಗೆ ಬುಮ್ರಾ ಸ್ಥಾನ ಪಡೆದಿದ್ದಾರೆ. ಅಭ್ಯಾಸದ ವೇಳೆ ಬುಮ್ರಾ ಕರಾರುವಕ್ಕಾಗಿ ವಿಕೆಟ್’ಗೆ ಯಾರ್ಕರ್ ಹಾಕಿದ ವಿಡಿಯೋವೊಂದನ್ನು ಬಿಸಿಸಿಐ ಹಂಚಿಕೊಂಡಿದೆ. ಈ ಮೂಲಕ ಎದುರಾಳಿ ಪಾಳಯದಲ್ಲಿ ನಡುಕ ಹುಟ್ಟುವಂತೆ ಮಾಡಿದೆ.

ರಣಜಿ ಟ್ರೋಫಿ: ಮುಂಬೈ ಮೇಲೆ ಬಿಗಿ ಹಿಡಿತ ಸಾಧಿಸಿದ ಕರ್ನಾಟಕ

ಜನವರಿ 5ರಂದು ಆರಂಭವಾಗಲಿರುವ ಮೊದಲ ಪಂದ್ಯದಲ್ಲಿ ಬುಮ್ರಾ ಅಪರೂಪದ ದಾಖಲೆಯ ಮೇಲೆ ಕಣ್ಣಿಟ್ಟಿದ್ದು, ಇನ್ನು 2 ವಿಕೆಟ್ ಕಬಳಿಸಿದರೆ, ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್’ನಲ್ಲಿ ಭಾರತ ಪರ ಗರಿಷ್ಠ ವಿಕೆಟ್ ಪಡೆದ ಬೌಲರ್ ಎನಿಸಲಿದ್ದಾರೆ. ಚಹಲ್ ಹಾಗೂ ಅಶ್ವಿನ್ ತಲಾ 52 ವಿಕೆಟ್ ಪಡೆದಿದ್ದಾರೆ. ಪ್ರಸ್ತುತ ಬುಮ್ರಾ 51 ವಿಕೆಟ್ ಪಡೆದಿದ್ದು, ಹೊಸ ದಾಖಲೆ ಬರೆಯಲು ಬುಮ್ರಾಗೆ 2 ವಿಕೆಟ್’ಗಳ ಅವಶ್ಯಕತೆಯಿದೆ.