ಗುವಾಹಟಿ(ಜ.04): ಹೊಸ ವರ್ಷವನ್ನು ಸಂಭ್ರಮದಿಂದ ಆಚರಿಸಿದ ಟೀಂ ಇಂಡಿಯಾ ಕ್ರಿಕೆಟಿಗ ಇದೀಗ ಮತ್ತೆ ಮೈದಾನಕ್ಕಿಳಿದಿದ್ದಾರೆ. ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ಭರ್ಜರಿ ತಯಾರಿ ನಡೆಯುತ್ತಿದೆ. ಜ.5 ರಂದು ಗುವಾಹಟಿಯಲ್ಲಿ ಮೊದಲ ಟಿ20 ಪಂದ್ಯ ನಡೆಯಲಿದೆ. ಇತ್ತ ಲಂಕಾ ತಂಡ ಕೂಡ ಕಸರತ್ತು ನಡೆಸುತ್ತಿದೆ.

ಇದನ್ನೂ ಓದಿ: 27ರ ಹರೆಯದ ನತಾಶಗೆ ಮನಸೋತ 26ರ ಪಾಂಡ್ಯ; ಇಲ್ಲಿದೆ ಕ್ರಿಕೆಟ್ ಬಾಲಿವುಡ್ ಲವ್ ಸ್ಟೋರಿ!

ಹೊಸ ವರ್ಷದ ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸೋ ಮೂಲಕ ಶುಭಾರಂಭ ಮಾಡಲು ಉಭಯ ತಂಡಗಳು ರೆಡಿಯಾಗಿವೆ. ಹೀಗಾಗಿ ಭಾರತ ಬಲಿಷ್ಠ ತಂಡವನ್ನೇ ಕಣಕ್ಕಿಳಿಸಲು ಮುಂದಾಗಿದೆ. ಲಂಕಾ ವಿರುದ್ದದ ಮೊದಲ ಟಿ20 ಪಂದ್ಯಕ್ಕ 2 ಬದಲಾವಣೆಗಳು ಖಚಿತ. ಕಾರಣ ಶಿಖರ್ ಧವನ್ ತಂಡಕ್ಕೆ ವಾಪಾಸ್ಸಾಗಿದ್ದಾರೆ. ಇನ್ನು ವೇಗಿ ಜಸ್ಪ್ರೀತ್ ಬುಮ್ರಾ ಕೂಡ ತಂಡಕ್ಕೆ ಆಗಮಿಸಿದ್ದಾರೆ. ಹೀಗಾಗಿ ಇವರಿಬ್ಬರೂ ಪ್ಲೇಯಿಂಗ್ ಇಲೆವೆನ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: ವರ್ಷದ ಮೊದಲ ಸರಣಿ: ಟೀಂ ಇಂಡಿಯಾದ ಮೂವರ ಮೇಲೆ ಎಲ್ಲರ ಕಣ್ಣು!.

ಸಂಭವನೀಯ ಟೀಂ ಇಂಡಿಯಾ:
ಶಿಖರ್ ಧವನ್, ಕೆಎಲ್ ರಾಹುಲ್, ವಿರಾಟ್ ಕೊಹ್ಲಿ(ನಾಯಕ), ಶ್ರೇಯಸ್ ಅಯ್ಯರ್, ರಿಷಬ್ ಪಂತ್, ಶಿವಂ ದುಬೆ, ರವೀಂದ್ರ ಜಡೇಜಾ, ವಾಶಿಂಗ್ಟನ್ ಸುಂದರ್, ಯಜುವೇಂದ್ರ ಚಹಾಲ್, ಜಸ್ಪ್ರೀತ್ ಬುಮ್ರಾ, ನವದೀಪ್ ಸೈನಿ

ಭಾರತ -ಶ್ರೀಲಂಕಾ ಟಿ20 ಸರಣಿ
ಜ.5, 1ನೇ ಟಿ20, ಗುವಹಾಟಿ
ಜ.7, 2ನೇ ಟಿ20, ಇಂದೋರ್
ಜ.10, 3ನೇ ಟಿ20, ಪುಣೆ