* ಕಳಪೆ ಪಾರ್ಮ್‌ನಿಂದ ಬಳಲುತ್ತಿರುವ ಟೀಂ ಇಂಡಿಯಾ ಆರಂಭಿಕ ಬ್ಯಾಟರ್‌ ಮಯಾಂಕ್ ಅಗರ್‌ವಾಲ್* ರೋಹಿತ್ ಶರ್ಮಾಗೆ ಕೋವಿಡ್ ದೃಢಪಟ್ಟ ಬೆನ್ನಲ್ಲೇ ಅಗರ್‌ವಾಲ್‌ಗೆ ಬುಲಾವ್* ಭಾರತ-ಇಂಗ್ಲೆಂಡ್ ಎದುರಿನ ಏಕೈಕ ಟೆಸ್ಟ್‌ ಜುಲೈ 01ರಿಂದ ಆರಂಭ

ಲಂಡನ್(ಜೂ.28): ಮಯಾಂಕ್ ಅಗರ್ವಾಲ್ ಕರ್ನಾಟಕದ ಓಪನಿಂಗ್ ಬ್ಯಾಟರ್. ಇಂಟರ್ ನ್ಯಾಷನಲ್ ಕ್ರಿಕೆಟ್ ಕೆರಿಯರ್,​ ಕವಲು ದಾರಿ ಹಿಡಿದಿದೆ ಅನ್ನುವಾಗ್ಲೇ ಅದೃಷ್ಟ ಕೈ ಹಿಡಿದಿದೆ. ಭಾರತ ಟೆಸ್ಟ್ ತಂಡದಿಂದ ಡ್ರಾಪ್ ಆಗಿದ್ದ ಮಯಾಂಕ್ ಅಗರ್‌ವಾಲ್, ಕಳಪೆ ಫಾರ್ಮ್​ನಿಂದ ಬಳಲುತ್ತಿದ್ದಾರೆ. ಆದ್ರೂ ಇಂಗ್ಲೆಂಡ್ ವಿರುದ್ಧದ ಏಕೈಕ ಟೆಸ್ಟ್ ಪಂದ್ಯಕ್ಕೆ ಕನ್ನಡಿಗನಿಗೆ ಬುಲಾವ್ ನೀಡಲಾಗಿದೆ. ಈಗಾಗ್ಲೇ ಇಂಗ್ಲೆಂಡ್​ನಲ್ಲಿ ಟೀಂ ಇಂಡಿಯಾ ಸೇರಿಕೊಂಡಿದ್ದಾರೆ. 5ನೇ ಹಾಗೂ ಕೊನೆ ಟೆಸ್ಟ್​ನಲ್ಲಿ ಮಯಾಂಕ್ ಅಗರ್‌ವಾಲ್ ಆಡಿದ್ರೂ ಆಶ್ಚರ್ಯವಿಲ್ಲ ಬಿಡಿ.

ರಾಹುಲ್​ಗೆ ಇಂಜುರಿ. ರೋಹಿತ್​ಗೆ ಕೋವಿಡ್​: 

ಕಳೆದ ವರ್ಷ ಇಂಗ್ಲೆಂಡ್​ಗೆ ಹೋಗಿದ್ದ ಟೀಂ ಇಂಡಿಯಾ (Team India) ನಾಲ್ಕು ಟೆಸ್ಟ್​​ಗಳನ್ನಾಡಿ 2-1ರಿಂದ ಸರಣಿಯಲ್ಲಿ ಮುನ್ನಡೆ ಸಾಧಿಸಿತ್ತು. ಆದರೆ ಕೊನೆ ಟೆಸ್ಟ್​ ಆರಂಭಕ್ಕೂ ಮುನ್ನ ಕೋವಿಡ್​-19 (COVID 19) ಕಾಣಿಸಿಕೊಂಡಿದ್ದರಿಂದ 5ನೇ ಟೆಸ್ಟ್​ ಅನ್ನ ಮುಂದೂಡಲಾಗಿತ್ತು. ಈಗ ಆ ಟೆಸ್ಟ್ ಆಡಲು ಇಂಗ್ಲೆಂಡ್​ಗೆ ಹೋಗಿರೋ ಟೀಂ ಇಂಡಿಯಾಗೆ ಗಾಯ ಮತ್ತು ಕೋವಿಡ್​-19 ಸಮಸ್ಯೆ ಕಾಡುತ್ತಿದೆ. ಇಂಗ್ಲೆಂಡ್​ಗೆ ಫ್ಲೈಟ್ ಹತ್ತೋಕು ಮುಂಚೆ ವೈಸ್ ಕ್ಯಾಪ್ಟನ್ ಕೆ ಎಲ್ ರಾಹುಲ್ (KL Rahul) ಇಂಜುರಿ ಲಿಸ್ಟ್​​ಗೆ ಸೇರಿದ್ದರು. ಅವರ ಬದಲಿಗೆ ಯಾರನ್ನೂ ಆಯ್ಕೆ ಮಾಡಿರಲಿಲ್ಲ. ಈಗ ಕ್ಯಾಪ್ಟನ್ ರೋಹಿತ್ ಶರ್ಮಾ (Rohit Sharma) ಕೋವಿಡ್​ನಿಂದ ಬಳಲುತ್ತಿದ್ದಾರೆ. 

ಕಳೆದ ವರ್ಷ ಇಂಗ್ಲೆಂಡ್ ಟೂರ್​ಗೆ ಹೋಗಿದ್ದ ಟೀಂ ಇಂಡಿಯಾದಲ್ಲಿ ಮಯಾಂಕ್ ಸ್ಥಾನ ಪಡೆದಿದ್ದರೂ ಟೆಸ್ಟ್ ಮಾತ್ರ ಆಡಿರಲಿಲ್ಲ. ಈ ವರ್ಷ ಸೌತ್ ಆಫ್ರಿಕಾ ಮತ್ತು ಶ್ರೀಲಂಕಾ ಟೆಸ್ಟ್ ಸರಣಿಯಲ್ಲಿ ಮಯಾಂಕ್ ವಿಫಲರಾಗಿದ್ದರಿಂದ ಇಂಗ್ಲೆಂಡ್ ಟೆಸ್ಟ್​ ಪಂದ್ಯದಿಂದ ಡ್ರಾಪ್ ಆಗಿದ್ದರು. ಆದರೆ ಈಗ ಇಬ್ಬರು ಖಾಯಂ ಓಪನರ್ಸ್ ಅಲಭ್ಯರಾಗಿರೋದ್ರಿಂದ ಮಯಾಂಕ್​​​​ಗೆ ಬುಲಾವ್ ನೀಡಲಾಗಿದೆ. ಕೊರೋನಾ ಟೆಸ್ಟ್​​ನಲ್ಲಿ ನೆಗಟಿವ್ ಬಂದಿದ್ದು, ಈಗ ಅವರು ಏಕೈಕ ಟೆಸ್ಟ್​ ಆಡಲು ಲಭ್ಯರಿದ್ದಾರೆ. ಇಂಗ್ಲೆಂಡ್‌ನ ಕೋವಿಡ್ ಪ್ರೋಟೋಕಾಲ್‌ಗಳು ಆರ್‌ಟಿ-ಪಿಸಿಆರ್ ಪರೀಕ್ಷೆಯು ನೆಗೆಟಿವ್ ಆಗಿದ್ದರೆ, ಕ್ವಾರಂಟೈನ್ ಅವಧಿಯ ಅಗತ್ಯವಿಲ್ಲ.

Ind vs Eng: ಭಾರತ ಎದುರಿನ ಬರ್ಮಿಂಗ್‌ಹ್ಯಾಮ್‌ ಟೆಸ್ಟ್‌ಗೆ ಬಲಿಷ್ಠ ಇಂಗ್ಲೆಂಡ್ ತಂಡ ಪ್ರಕಟ..!

ಟೆಸ್ಟ್​ ಆರಂಭಕ್ಕೂ ಮುನ್ನ ರೋಹಿತ್ ಚೇತರಿಸಿಕೊಳ್ಳದಿದ್ದರೆ ಎಡ್ಜ್​​​ಬಾಸ್ಟನ್ ಟೆಸ್ಟ್​ನಲ್ಲಿ ಮಯಾಂಕ್ ಅಗರ್‌ವಾಲ್ (Mayank Agarwal) ಮತ್ತು ಶುಭ್‌​ಮನ್ ಗಿಲ್ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಕಳೆದ ವರ್ಷ ನಾಲ್ಕೂ ಟೆಸ್ಟ್​ನಲ್ಲೂ ಬೆಂಚ್ ಕಾಯ್ಸಿದ್ದ ಮಯಾಂಕ್​​​, ಇಂಗ್ಲೆಂಡ್​​​ನಲ್ಲಿ ಟೆಸ್ಟ್​ ಆಡೋ ಆಸೆಯನ್ನ ಕೈಬಿಟ್ಟಿದ್ದರು. ಆದ್ರೆ ಕಳೆದ ವರ್ಷ ನನಸಾಗದ ಕನಸು, ಈ ವರ್ಷ ನನಸಾಗೋ ಸಾಧ್ಯತೆ ಇದೆ. ಯಾಕಂದರೆ ಟೀಂ ಇಂಡಿಯಾದಲ್ಲಿ ಶುಭ್‌ಮನ್‌ ಗಿಲ್ ಬಿಟ್ಟರೆ ಮಯಾಂಕ್ ಒಬ್ಬರೇ ಖಾಯಂ ಓಪನರ್ ಇರೋದು. 

Ind vs Eng ರೋಹಿತ್‌ ಶರ್ಮಾಗೆ ಕೋವಿಡ್ ದೃಢ, ಇಂಗ್ಲೆಂಡ್‌ನತ್ತ ಮುಖಮಾಡಿದ ಮಯಾಂಕ್ ಅಗರ್‌ವಾಲ್..!

ಮಯಾಂಕ್​ ಅಗರ್‌ವಾಲ್‌ ಡು ಆರ್ ಡೈ ಟೆಸ್ಟ್ : 

ರೋಹಿತ್​ ಶರ್ಮಾ, ಕೆ ಎಲ್ ರಾಹುಲ್, ಶುಭ್‌ಮನ್‌ ಗಿಲ್ (Shubman Gill) ಹೀಗೆ ಮೂವರು ಓಪನರ್ಸ್ ಇರೋದ್ರಿಂದ ಮಯಾಂಕ್​ಗೆ ಟೆಸ್ಟ್​ ಟೀಮ್​ನಲ್ಲಿ ಸ್ಥಾನ ಇಲ್ಲದಂತಾಗಿದೆ. ಆದ್ರೆ ಕ್ಯಾಪ್ಟನ್​-ವೈಸ್ ಕ್ಯಾಪ್ಟನ್ ಅನುಪಸ್ಥಿತಿಯಲ್ಲಿ ಈಗ ಆಡಲು ಚಾನ್ಸ್ ಸಿಗುತ್ತಿದೆ. ಸಿಕ್ಕ ಅವಕಾಶದಲ್ಲಿ ಉತ್ತಮ ಪ್ರದರ್ಶನ ನೀಡಿದ್ರೆ ಮಯಾಂಕ್​ಗೆ ಉಳಿಗಾಲ. ಆಕಸ್ಮಾತ್ ವಿಫಲರಾದ್ರೆ ಮತ್ಯಾವತ್ತೂ ಅವರು ಟೀಂ ಇಂಡಿಯಾದಲ್ಲಿ ಕಾಣಿಸಿಕೊಳ್ಳುವುದು ಅನುಮಾನ.