'ಇದು ಟೀಮ್‌ ಇಂಡಿಯಾ ಅಲ್ಲ..' ವಿಶ್ವಕಪ್‌ ತಂಡದ ಕುರಿತಾಗಿ ವೀರೇಂದ್ರ ಸೆಹ್ವಾಗ್‌ ಅಚ್ಚರಿಯ ರಿಯಾಕ್ಷನ್‌!

ಭಾರತೀಯ ಕ್ರಿಕೆಟ್ ಇತಿಹಾಸದ ದಂತಕಥೆ ವೀರೇಂದ್ರ ಸೆಹ್ವಾಗ್ ಅವರು ಮಂಗಳವಾರ, ಭಾರತದ ಏಕದಿನ ವಿಶ್ವಕಪ್ ತಂಡವನ್ನು ಪ್ರಕಟಿಸಿದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
 

Team India Nahin Bharat former player Virender Sehwag Reaction To India World Cup Squad san

ನವದೆಹಲಿ (ಸೆ.5): ಮುಂಬರುವ ಏಕದಿನ ವಿಶ್ವಕಪ್‌ ಟೂರ್ನಿಗೆ ಭಾರತ ತಂಡವನ್ನು ಬಿಸಿಸಿಐ ಪ್ರಕಟಿಸಿದೆ. ಸೆಪ್ಟೆಂಬರ್‌ 5 ರಂದು ಟೀಮ್‌ ಇಂಡಿಯಾ ನಾಯಕ ರೋಹಿತ್‌ ಶರ್ಮ ಹಾಗೂ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್‌ ಅಗರ್ಕರ್‌ 15 ಸದಸ್ಯರ ಭಾರತ ತಂಡವನ್ನು ಪ್ರಕಟ ಮಾಡಿದರು. ಭಾರತದಲ್ಲಿ ವಿಶ್ವಕಪ್‌ ಟೂರ್ನಿ ಆರಂಭವಾಗಲು ಇನ್ನು ಸರಿಯಾಗಿ ಒಂದು ತಿಂಗಳಷ್ಟೇ ಬಾಕಿ ಉಳಿದಿದೆ. ಕಳೆದ 10 ವರ್ಷಗಳಿಂದ ಭಾರತದ ಪಾಲಿಗೆ ಐಸಿಸಿ ಟ್ರೋಫಿ ಗಗನ ಕುಸುಮವಾಗಿದೆ. ಈ ಬಾರಿ ರೋಹಿತ್‌ ಶರ್ಮ ನೇತೃತ್ವದಲ್ಲಿ ಟ್ರೋಫಿ ಗೆಲ್ಲುವ ಗುರಿಯಲ್ಲಿದೆ. ಅಕ್ಟೋಬರ್‌ 8 ರಂದು ಆಸ್ಟ್ರೇಲಿಯಾ ವಿರುದ್ಧ ಆಡುವ ಮೂಲಕ ಭಾರತ ತನ್ನ ವಿಶ್ವಕಪ್‌ ಅಭಿಯಾನವನ್ನು ಆರಂಭಿಸಲಿದೆ. ಟೀಮ್‌ ಇಂಡಿಯಾ ಸದ್ಯ ಏಷ್ಯಾಕಪ್‌ ಟೂರ್ನಿಯಲ್ಲಿ ಆಡುತ್ತಿದ್ದು, ಸೆಪಟ್ಎಂಬರ್‌ 10 ರಂದು ಪಾಕಿಸ್ತಾನವನ್ನು ಎದುರಿಸಲಿದೆ. ಸೋಮವಾರ ನಡೆದ ಪಂದ್ಯದಲ್ಲಿ ಟೀಮ್‌ ಇಂಡಿಯಾ 10 ವಿಕೆಟ್‌ಗಳಿಂದ ನೇಪಾಳವನ್ನು ಸೋಲಿಸಿದೆ. ಈ ನಡುವೆ ಟೀಮ್‌ ಇಂಡಿಯಾ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್‌, 15 ಸದಸ್ಯರ ಭಾರತ ತಂಡದ ಆಯ್ಕೆಯ ಬಗ್ಗೆ ಅಚ್ಚರಿಯ ಪ್ರತಿಕ್ರಿಯೆ ನೀಡಿದ್ದು, ಇದು ಟೀಮ್‌ ಇಂಡಿಯಾ ಅಲ್ಲ ಎಂದು ಹೇಳಿದ್ದಾರೆ.

ಮಂಗಳವಾರ ಬಂದಿರುವ ವರದಿಯ ಪ್ರಕಾರ, ಸೆ.18 ರಿಂದ 21ರವರೆಗೆ ನಡೆಯಲಿರುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ದೇಶದ ಹೆಸರನ್ನು ಮರು ನಾಮಕರಣ ಮಾಡುವ ಪ್ರಸ್ತಾಪವನ್ನು ಸರ್ಕಾರ ಮಾಡಲಿದೆ. ರಿಪಬ್ಲಿಕ್‌ ಆಫ್‌ ಇಂಡಿಯಾ ಬದಲಿಗೆ ರಿಪಬ್ಲಿಕ್‌ ಆಫ್‌ ಭಾರತ ಎನ್ನುವ ಹೆಸರನ್ನು ಸರ್ಕಾರ ನೀಡಲಿದೆ. ಭಾರತದ ಸಂವಿಧಾನದ 1 ನೇ ವಿಧಿಯು ಭಾರತ, ಅಂದರೆ ಭಾರತವು ರಾಜ್ಯಗಳ ಒಕ್ಕೂಟವಾಗಿದೆ ಎಂದು ಹೇಳುತ್ತದೆ. ಈ ಲೇಖನ ಕೂಡ ಬದಲಾಗುವ ಸಾಧ್ಯತೆ ಇದೆ. ಮುಂಬರುವ 2023ರ ಐಸಿಸಿ ಏಕದಿನ ವಿಶ್ವಕಪ್‌ಗೆ ರೋಹಿತ್ ಶರ್ಮಾ ನೇತೃತ್ವದಲ್ಲಿ ತಂಡವನ್ನು ಘೋಷಿಸಿದಾಗ ವೀರೇಂದ್ರ ಸೆಹ್ವಾಗ್ ತಮ್ಮ ಬೆಂಬಲವನ್ನು ಘೋಷಿಸಿ ಟ್ವೀಟ್‌ ಮಾಡಿದ್ದಾರೆ. ಅದರೊಂದಿಗೆ ದೇಶಕ್ಕೆ ಇಂಡಿಯಾ ಎನ್ನುವ ಹೆಸರಿನ ಬದಲು ಭಾರತ್‌ ಎನ್ನುವ ಹೆಸರನ್ನು ನೀಡೋದಕ್ಕೂ ಬೆಂಬಲ ಸೂಚಿಸಿದ್ದಾರೆ.

ಈ ಟ್ವೀಟ್‌ನಲ್ಲಿ ವೀರೇಂದ್ರ ಸೆಹ್ವಾಗ್ ಅವರು ಇಂಡಿಯಾದ ಹೆಸರನ್ನು ಭಾರತ ಎಂದು ಬದಲಾವಣೆ ಮಾಡೋದಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ಹೇಳಿದ್ದಾರೆ. ಅದರೊಂದಿಗೆ ಮುಂದಿನ ವಿಶ್ವಕಪ್‌ ಟೂರ್ನಿಯ ವೇಳೆ ಟೀಮ್‌ ಇಂಡಿಯಾ ಎನ್ನುವ ಬದಲಿಗೆ ಟೀಮ್‌ ಭಾರತ್‌ (#TeamBharat) ಎನ್ನುವ ಹ್ಯಾಶ್‌ ಟ್ಯಾಗ್‌ ಬಳಸಬೇಕು. ಅದರೊಂದಿಗೆ ಎಲ್ಲಾ ಕಡೆ ಭಾರತ ತಂಡ ಎಂದೇ ಕರೆಯಬೇಕು ಎಂದು ಹೇಳಿದ್ದಾರೆ.

ಅದರೊಂದಿಗೆ ವಿಶ್ವಕಪ್‌ ತಂಡದಲ್ಲಿರುವ ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮ, ಜಸ್‌ಪ್ರೀತ್‌ ಬುಮ್ರಾ ಹಾಗೂ ರವೀಂದ್ರ ಜಡೇಜಾ ಬಗ್ಗೆಯೂ ಮಾತನಾಡಿದ್ದಾರೆ. ಒಬ್ಬ ಅಭಿಮಾನಿಯಾಗಿ, ನಾವು ನಮ್ಮ ಹೃದಯದಲ್ಲಿ ಭಾರತ್ ಎಂಬ ಸ್ಪೂರ್ತಿಯೊಂದಿಗೆ ಈ ಆಟಗಾರರನ್ನು ಹುರಿದುಂಬಿಸಬೇಕು ಎಂದು ಅವರು ಬರೆದುಕೊಂಡಿದ್ದಾರೆ.ಆಟಗಾರರು ತಮ್ಮ ಗುರುತು ಬದಲಾಗಿರುವ ಬಗ್ಗೆ ತಿಳಿಸಲು ವಿಶ್ವಕಪ್‌ನಲ್ಲಿ "ಭಾರತ್" ಎನ್ನುವ ಪದವಿರುವ ಜೆರ್ಸಿಗಳನ್ನು ಧರಿಸಬೇಕು ಎಂದು ಅವರು ಹೇಳಿದ್ದಾರೆ. ಅದರೊಂದಿಗೆ ತಮ್ಮ ಟ್ವೀಟ್‌ಅನ್ನು  ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಅವರಿಗೂ ಟ್ಯಾಗ್‌ ಮಾಡಿದ್ದು, ಈ ಬಗ್ಗೆ ಗಮನ ನೀಡುವಂತೆ ಹೇಳಿದ್ದಾರೆ. ಇನ್ನೊಂದೆಡೆ ಯಾರಾದರೂ ಗಾಯಗೊಳ್ಳದ ಹೊರತು ವಿಶ್ವಕಪ್‌ ತಂಡದಲ್ಲಿ ಯಾವುದೇ ಬದಲಾವಣೆ ಆಗೋದಿಲ್ಲ ಎಂದು ಅಗರ್ಕರ್‌ ಹೇಳಿದ್ದಾರೆ.

ನನ್ನ ಕಣ್ಣೀ​ರು ದೇಶ ನೋಡಬಾರದೆಂದ ಹರ್ಮನ್‌ಪ್ರೀತ್ ಕೌರ್‌ಗೆ ತಂದೆಯೇ ಮೊದಲ ಗುರು, ಸೆಹ್ವಾಗ್‌ ಆರಾಧ್ಯ ದೈವ..!

'ನಮ್ಮಲ್ಲಿ ಹೆಮ್ಮೆಯನ್ನು ಹುಟ್ಟಿಸುವ ಹೆಸರು ಇರಬೇಕು ಎಂದು ನಾನು ಯಾವಾಗಲೂ ನಂಬಿದ್ದೇನೆ. ನಾವು ಭಾರತೀಯರು, ಇಂಡಿಯಾ ಎನ್ನುವುದು ಬ್ರಿಟಿಷರು ನೀಡಿದ ಹೆಸರು ಮತ್ತು ನಮ್ಮ ಮೂಲ ಹೆಸರನ್ನು 'ಭಾರತ್' ಅನ್ನು ಅಧಿಕೃತವಾಗಿ ಮರಳಿ ಪಡೆಯಲು ಈಗಾಗಲೇ ಬಹಳ ತಡವಾಗಿದೆ' ಎಂದೂ ಸೆಹ್ವಾಗ್‌ ಟ್ವೀಟ್‌ ಮಾಡಿದ್ದಾರೆ.

ವಾಸೀಂ ಅಕ್ರಂರಿಂದ ಕಾಪಾಡಿ ಎಂದು ಸಚಿನ್‌ಗೆ ಕೈಮುಗಿದಿದ್ದ ವಿರೇಂದ್ರ ಸೆಹ್ವಾಗ್‌..! ಯಾಕೆ?

Latest Videos
Follow Us:
Download App:
  • android
  • ios