ದುಬೈ(ಫೆ.13): ಭಾರತದ ಮಾಜಿ ಆಲ್ರೌಂಡರ್‌ ರಾಬಿನ್‌ ಸಿಂಗ್‌, ಯುನೈಟೆಡ್‌ ಅರಬ್‌ ಎಮಿರೇಟ್ಸ್‌ (ಯುಎಇ) ಕ್ರಿಕೆಟ್‌ ತಂಡದ ನಿರ್ದೇಶಕರಾಗಿ ನೇಮಕಗೊಂಡಿದ್ದಾರೆ. ಯುಎಇ ಮುಖ್ಯ ಕೋಚ್‌ ಆಗಿದ್ದ ಡೌಗಿ ಬ್ರೌನ್‌ರಿಂದ ತೆರವಾದ ಸ್ಥಾನಕ್ಕೆ 56 ವರ್ಷ ವಯಸ್ಸಿನ ರಾಬಿನ್‌ ನೇಮಕವಾಗಿದ್ದಾರೆ. 

ಇದನ್ನೂ ಓದಿ: ರವಿಶಾಸ್ತ್ರಿ ಬದಲಿಸುವುದೇ ಒಳ್ಳೆಯದು ಎಂದ ರಾಬಿನ್ ಸಿಂಗ್

1989 ಮತ್ತು 2001ರ ಅವಧಿಯಲ್ಲಿ ರಾಬಿನ್‌, ಭಾರತ ಪರ 1 ಟೆಸ್ಟ್‌ ಹಾಗೂ 136 ಏಕದಿನ ಪಂದ್ಯಗಳನ್ನಾಡಿದ್ದರು. ಕೋಚಿಂಗ್‌ನಲ್ಲಿ ರಾಬಿನ್‌ ಅನುಭವ ಹೊಂದಿದ್ದಾರೆ. ಐಪಿಎಲ್‌ನ ಮುಂಬೈ ಇಂಡಿಯನ್ಸ್‌ ತಂಡದಲ್ಲಿ ರಾಬಿನ್‌ ಸಹಾಯಕ ಕೋಚ್‌ ಆಗಿ ಕಾರ‍್ಯನಿರ್ವಹಿಸಿದ್ದರು.

ದುಬೈ ತಂಡ ಏಕದಿನದಲ್ಲಿ ಸದ್ಯ 19ನೇ ಸ್ಥಾನ ಹಾಗೂ ಟಿ20 ಕ್ರಿಕೆಟ್‌ನಲ್ಲಿ 15ನೇ ಸ್ಥಾನ ಅಲಂಕರಿಸಿದೆ. 1996ರ ವಿಶ್ವಕಪ್ ಹಾಗೂ 2015ರ ವಿಶ್ವಕಪ್ ಟೂರ್ನಿಗೆ ಅರ್ಹತಾ ಸುತ್ತಿನ ಮೂಲಕ ಆಯ್ಕೆಯಾಗಿದ್ದ ಯುಎಇ, 2018ರಲ್ಲಿ ಏಕದಿನ ಮಾನ್ಯತೆ ಪಡೆದುಕೊಂಡಿದೆ.