ದುಬೈ(ಮಾ.11): ಇಂಗ್ಲೆಂಡ್‌ ವಿರುದ್ಧ ಟಿ20 ಸರಣಿ ಆರಂಭಕ್ಕೆ ಕೇವಲ 1 ದಿನ ಬಾಕಿ ಇದ್ದು, 5 ಪಂದ್ಯಗಳ ಸರಣಿಯನ್ನು ಭಾರತ 4-1 ಇಲ್ಲವೇ 5-0ಯಲ್ಲಿ ಗೆದ್ದುಕೊಂಡರೆ ಐಸಿಸಿ ವಿಶ್ವ ಟಿ20 ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲಿದೆ.

ನ್ಯೂಜಿಲೆಂಡ್‌ ವಿರುದ್ಧ ಆಸ್ಪ್ರೇಲಿಯಾ ಟಿ20 ಸರಣಿ ಸೋತಿದ್ದರಿಂದ 3ನೇ ಸ್ಥಾನದಲ್ಲಿದ್ದ ಭಾರತ ಈಗ 2ನೇ ಸ್ಥಾನಕ್ಕೇರಿದೆ. ಭಾರತ 268 ರೇಟಿಂಗ್‌ ಅಂಕಗಳನ್ನು ಹೊಂದಿದೆ. ಮೊದಲ ಸ್ಥಾನದಲ್ಲಿರುವ ಇಂಗ್ಲೆಂಡ್‌ 275 ರೇಟಿಂಗ್‌ ಅಂಕ ಹೊಂದಿದ್ದು, ಭಾರತ ವಿರುದ್ಧ ವೈಟ್‌ವಾಶ್‌ ಅನುಭವಿಸಿದರೆ 3ನೇ ಸ್ಥಾನಕ್ಕೆ ಕುಸಿಯಲಿದೆ. 1-4ರ ಅಂತರದಲ್ಲಿ ಸರಣಿ ಸೋತರೆ ಇಂಗ್ಲೆಂಡ್‌ 2ನೇ ಸ್ಥಾನಕ್ಕಿಳಿಯಲಿದೆ.

ಫಿಟ್ನೆಸ್‌ ಟೆಸ್ಟ್‌ನಲ್ಲಿ ವರುಣ್‌ ಮತ್ತೆ ಫೇಲ್, ನಟರಾಜನ್‌ ಆಡೋದು ಡೌಟ್‌..!

ಮಹತ್ವದ ಮೈಲಿಗಲ್ಲಿನ ಹೊಸ್ತಿಲಲ್ಲಿ ವಿರಾಟ್‌

ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 3000 ರನ್‌ ಮೈಲಿಗಲ್ಲು ತಲುಪಲು ಭಾರತದ ನಾಯಕ ವಿರಾಟ್‌ ಕೊಹ್ಲಿಗೆ ಕೇವಲ 72 ರನ್‌ ಬೇಕಿದೆ. 5 ಪಂದ್ಯಗಳ ಸರಣಿಯಲ್ಲಿ ಅವರು 72ಕ್ಕೂ ಹೆಚ್ಚು ರನ್‌ ಗಳಿಸಿ 3000 ರನ್‌ ದಾಟಿದರೆ, ಮೂರೂ ಮಾದರಿಯಲ್ಲಿ ಈ ಮೈಲಿಗಲ್ಲು ಸ್ಥಾಪಿಸಿದ ವಿಶ್ವದ ಮೊದಲ ಕ್ರಿಕೆಟಿಗ ಎನ್ನುವ ದಾಖಲೆ ಬರೆಯಲಿದ್ದಾರೆ. ಸದ್ಯ ವಿರಾಟ್‌ 85 ಪಂದ್ಯಗಳಲ್ಲಿ 2928 ರನ್‌ ಕಲೆಹಾಕಿದ್ದಾರೆ. 25 ಅರ್ಧಶತಕ ಬಾರಿಸಿರುವ ಕೊಹ್ಲಿ, ಅಂ.ರಾ.ಟಿ20ಯಲ್ಲಿ ಈ ವರೆಗೂ ಒಂದೂ ಶತಕ ದಾಖಲಿಸಿಲ್ಲ.