Asianet Suvarna News Asianet Suvarna News

ಕಿವೀಸ್ ಎದುರು ಕ್ಲೀನ್ ಸ್ವೀಪ್ ಹೊಸ್ತಿಲಲ್ಲಿ ಟೀಂ ಇಂಡಿಯಾ

ಭಾರತ-ನ್ಯೂಜಿಲೆಂಡ್ ನಡುವಿನ 5ನೇ ಹಾಗೂ ಅಂತಿಮ ಟಿ20 ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಕೊನೆಯ ಪಂದ್ಯವನ್ನಾದರೂ ಗೆದ್ದು ಮಾನ ಕಾಪಾಡಿಕೊಳ್ಳಲು ಆತಿಥೇಯ ಕಿವೀಸ್ ಪಡೆ ಎದುರು ನೋಡುತ್ತಿದ್ದರೆ, ವಿರಾಟ್ ಪಡೆ ಕ್ಲೀನ್ ಸ್ವೀಪ್ ಮಾಡುವ ತವಕದಲ್ಲಿದೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ...

Team India eye T20 series whitewash against New Zealand
Author
Mount Maunganui, First Published Feb 2, 2020, 9:36 AM IST

ಮೌಂಟ್‌ ಮಾಂಗನ್ಯುಯಿ(ಫೆ.02): ವಿಶ್ವಕಪ್‌ ವರ್ಷದಲ್ಲಿ ಅಮೋಘ ಲಯದಲ್ಲಿರುವ ಟೀಂ ಇಂಡಿಯಾ, ನ್ಯೂಜಿಲೆಂಡ್‌ ವಿರುದ್ಧದ 5 ಟಿ20 ಪಂದ್ಯಗಳ ಸರಣಿಯನ್ನು 5-0 ಅಂತರದಲ್ಲಿ ಕ್ಲೀನ್‌ ಸ್ವೀಪ್‌ ಮಾಡುವ ಗುರಿ ಹೊಂದಿದೆ. 

ಮತ್ತೆ ಸೂಪರ್ ಓವರ್‌ ಗೆದ್ದ ಟೀಂ ಇಂಡಿಯಾ

ಸತತ 2 ಪಂದ್ಯಗಳನ್ನು ಸೂಪರ್‌ ಓವರ್‌ನಲ್ಲಿ ಗೆದ್ದು ಸರಣಿಯಲ್ಲಿ 4-0 ಮುನ್ನಡೆ ಹೊಂದಿರುವ ಭಾರತ ಇನ್ನೂ ಕೆಲ ಪ್ರಯೋಗಗಳನ್ನು ಮಾಡುವ ನಿರೀಕ್ಷೆ ಇದೆ. ಕಳೆದ ಪಂದ್ಯದಲ್ಲಿ ವಿಶ್ರಾಂತಿ ಪಡೆದಿದ್ದ ರೋಹಿತ್‌ ಶರ್ಮಾ ಈ ಪಂದ್ಯದಲ್ಲಿ ನಾಯಕತ್ವ ವಹಿಸಿಕೊಂಡು ಕೊಹ್ಲಿಗೆ ವಿಶ್ರಾಂತಿ ನೀಡುವ ಸಾಧ್ಯತೆ ಇದೆ. ರಾಹುಲ್‌, ಬುಮ್ರಾ, ಚಹಲ್‌ ಸಹ ವಿಶ್ರಾಂತಿ ಪಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ. ರಿಷಭ್‌ ಪಂತ್‌, ಶಮಿ ಹಾಗೂ ಕುಲ್ದೀಪ್‌ ಆಡಬಹುದು.

INDvNZ 5ನೇ ಟಿ20: ಬದಲಾವಣೆಗೆ ಮುಂದಾದ ಭಾರತ! ಇಲ್ಲಿದೆ ಸಂಭವನೀಯ ತಂಡ!

ನ್ಯೂಜಿಲೆಂಡ್‌ ಇದುವರೆಗೂ ತವರಿನಲ್ಲಿ ಆಡಿದ ದ್ವಿಪಕ್ಷೀಯ ಟಿ20 ಸರಣಿಯಲ್ಲಿ ಎಲ್ಲಾ ಪಂದ್ಯಗಳನ್ನೂ ಸೋತಿಲ್ಲ. ಕೊನೆ ಪಂದ್ಯದಲ್ಲಾದರೂ ಗೆದ್ದು ಮಾನ ಉಳಿಸಿಕೊಳ್ಳಲು ಹೋರಾಡಲಿದೆ.

ಪಂದ್ಯ ಆರಂಭ: ಮಧ್ಯಾಹ್ನ 12.30ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ 1
 

Follow Us:
Download App:
  • android
  • ios