ಇಂಗ್ಲೆಂಡ್‌ನ ಬೆಂಡೆತ್ತಿ ಭಾರತ ಏಕದಿನ ಸರಣಿ ಕ್ಲೀನ್‌ಸ್ವೀಪ್!

ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಪೂರ್ವಭಾವಿಯಾಗಿ ಭಾರತ ತಂಡ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ 3-0 ಅಂತರದಲ್ಲಿ ಭರ್ಜರಿ ಜಯ ಸಾಧಿಸಿದೆ. ಕೊನೆಯ ಪಂದ್ಯದಲ್ಲಿ 142 ರನ್‌ಗಳ ಅಂತರದ ಗೆಲುವು ದಾಖಲಿಸಿತು. ಶುಭಮನ್ ಗಿಲ್ ಅವರ ಶತಕ ಮತ್ತು ಬೌಲರ್‌ಗಳ മികച്ച പ്രകടന ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು.

Team India Demolish England By 142 Runs To Complete Clean Sweep In ODI Series kvn

ಅಹಮದಾಬಾದ್: ಮಹತ್ವದ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಭಾರತ ತಂಡ ತನ್ನ ಸಿದ್ಧತೆಯನ್ನು ಭರ್ಜರಿಯಾಗಿಯೇ ಮುಗಿಸಿದೆ. ಇಂಗ್ಲೆಂಡ್ ವಿರುದ್ಧ ತವರಿನ ಏಕದಿನ ಸರಣಿಯಲ್ಲಿ ರೋಹಿತ್‌ ಶರ್ಮಾ ಪಡೆ 3-0 ಅಂತರದಲ್ಲಿ ಕ್ಲೀನ್‌ ಸ್ವೀಪ್ ಸಾಧಿಸಿ, ಚಾಂಪಿಯನ್ಸ್ ಟ್ರೋಫಿಗೆ ಮುನ್ನ ಆತ್ಮವಿಶ್ವಾಸ ಹೆಚ್ಚಿಸಿತು. 

ಬುಧವಾರ ನಡೆದ 3ನೇ ಹಾಗೂ ಕೊನೆ ಪಂದ್ಯದಲ್ಲಿ ಭಾರತ 142 ರನ್ ಜಯಭೇರಿ ಬಾರಿಸಿತು. ಟಿ20 ಸರಣಿ ಬಳಿಕ ಏಕದಿನದಲ್ಲೂ ಇಂಗ್ಲೆಂಡ್ ಹೀನಾಯ ಸೋಲಿನ ಮುಖಭಂಗಕ್ಕೆ ಒಳಗಾಯಿತು. ಆರಂಭಿಕ 2 ಪಂದ್ಯಗಳಲ್ಲಿ ಚೇಸ್ ಮಾಡಿ ಗೆದ್ದಿದ್ದ ಭಾರತಕ್ಕೆ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡುವ ಅವಕಾಶ ಸಿಕ್ಕಿತು. ಇದನ್ನು ತಂಡ ವ್ಯರ್ಥಗೊಳಿಸಲಿಲ್ಲ. ಶುಭಮನ್ ಗಿಲ್, ಶ್ರೇಯಸ್ ಅಯ್ಯರ್, ವಿರಾಟ್ ಕೊಹ್ಲಿ, ಕೆ.ಎಲ್.ರಾಹುಲ್ ಅಬ್ಬರದ ಆಟದಿಂದಾಗಿ ಭಾರತ 50 ಓವರ್‌ಗಳಲ್ಲಿ356 ರನ್‌ಗೆ ಆಲೌಟಾಯಿತು. ಬೌಲಿಂಗ್‌ನಲ್ಲೂ ಜಾದೂ ಮಾಡಿದ ಭಾರತ, ಇಂಗ್ಲೆಂಡ್ ತಂಡವನ್ನು 34.2 ಓವರ್‌ಗಳಲ್ಲಿ 214 ರನ್‌ ಗೆ ಕಟ್ಟಿಹಾಕಿತು.

ಅಹಮದಾಬಾದ್‌ನಲ್ಲಿ ಶತಕ ಸಿಡಿಸಿ ಹೊಸ ದಾಖಲೆ ಬರೆದ ಶುಭ್‌ಮನ್ ಗಿಲ್‌!

ಇಂಗ್ಲೆಂಡ್ ತಂಡದ ಯಾರೊಬ್ಬರಿಗೂ ಅರ್ಧಶತಕ ಬಾರಿಸಲು ಸಾಧ್ಯವಾಗಲಿಲ್ಲ. ಗಸ್ ಆಟಿನ್ಸನ್ 38, ಟಾಮ್ ಬ್ಯಾಂಟನ್ 38, ಬೆನ್ ಡಕೆಟ್ 34, ಜೋ ರೂಟ್ 24, ಫಿಲ್ ಸಾಲ್ಟ್ 23 ರನ್‌ಗೆ ಔಟಾದರು. ಅರ್ಶ್‌ದೀಪ್ ಸಿಂಗ್, ಹಾರ್ದಿಕ್ ಪಾಂಡ್ಯ, ಹರ್ಷಿತ್ ರಾಣಾ, ಅಕ್ಷರ್ ಪಟೇಲ್ ತಲಾ 2 ವಿಕೆಟ್ ಕಿತ್ತರು.

ಅಬ್ಬರದ ಆಟ: ರೋಹಿತ್ ಶರ್ಮಾ ಹೊರತುಪಡಿಸಿ ಭಾರತದ ಬ್ಯಾಟರ್‌ಗಳು ಈ ಪಂದ್ಯದಲ್ಲಿ ಇಂಗ್ಲೆಂಡ್ ಬೌಲರ್‌ಗಳನ್ನು ಚೆಂಡಾಡಿದರು. ಶುಭಮನ್ ಗಿಲ್ ತಾವು ಶತಕ ಬಾರಿಸಿದ್ದಲ್ಲದೇ, ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್‌ ಅಯ್ಯರ್ ‌ ಜೊತೆಗೂಡಿ ತಲಾ 100+ ರನ್ ಜೊತೆಯಾಟವಾಡಿದರು. ತಮ್ಮ ಆಕರ್ಷಕ ಹೊಡೆತಗಳ ಮೂಲಕ ಪ್ರೇಕ್ಷಕರ ಮನರಂಜಿಸಿದ ಗಿಲ್, 102 ಎಸೆತಗಳಲ್ಲಿ 14 ಬೌಂಡರಿ, 3 ಸಿಕ್ಸರ್‌ಗಳೊಂದಿಗೆ 112 ರನ್‌ ಸಿಡಿಸಿದರು.

ಲಯ ಕಂಡುಕೊಂಡ ಕೊಹ್ಲಿ52, ಅಭೂತಪೂರ್ವ ಆಟ ಮುಂದುವರಿಸಿದ ಶ್ರೇಯಸ್ 78 ರನ್ ಬಾರಿಸಿದರು. ಮತ್ತೆ ತಮ್ಮ ಎಂದಿನ 5ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ರಾಹುಲ್ 29 ಎಸೆತಕ್ಕೆ 40 ರನ್ ಸಿಡಿಸಿದರು. ಆದಿಲ್ ರಶೀದ್ 4 ವಿಕೆಟ್ ಕಿತ್ತರು.

ಚಾಂಪಿಯನ್ಸ್ ಟ್ರೋಫಿ ಟೂರ್ನಿ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ; ಭಾರತದ ಮ್ಯಾಚ್ ಯಾವಾಗ? ಎಲ್ಲಿ ವೀಕ್ಷಿಸಬಹುದು?

ಸ್ಕೋರ್:
ಭಾರತ 50 ಓವರಲ್ಲಿ 356/10 (ಶುಭಮನ್ 112, ಶ್ರೇಯಸ್ 78, ಕೊಹ್ಲಿ 52, ರಾಹುಲ್ 40, ಆದಿಲ್ 4-64, ವುಡ್ 2-45)
ಇಂಗ್ಲೆಂಡ್ 34.2 ಓವರಲ್ಲಿ 214/10 (ಆಟಿನ್ಸನ್ 38, ಬ್ಯಾಂಟನ್ 38, ಅಕ್ಷರ್ 2-22, ಹರ್ಷಿತ್ 2-31) 
ಪಂದ್ಯಶ್ರೇಷ್ಠ ಮತ್ತು ಸರಣಿ ಶ್ರೇಷ್ಠ: ಶುಭಮನ್

ಅಂಕಿ-ಅಂಶ:

142 ರನ್: ಭಾರತಕ್ಕೆ 142 ರನ್ ಜಯ. ಇದು ಇಂಗ್ಲೆಂಡ್ ವಿರುದ್ಧ ಭಾರತಕ್ಕೆ 2ನೇ ಅತಿ ದೊಡ್ಡ ಗೆಲುವು. 2008ರಲ್ಲಿ 158 ರನ್‌ಗಳಲ್ಲಿ ಗೆದ್ದಿತ್ತು.

10ನೇ ಸೋಲು  : ಇಂಗ್ಲೆಂಡ್ ತಂಡ 2023ರ ಏಕದಿನ ವಿಶ್ವಕಪ್ ಬಳಿಕ ಆಡಿದ 14 ಏಕದಿನ ಪಂದ್ಯಗಳ ಪೈಕಿ 10ರಲ್ಲಿ ಸೋಲನುಭವಿಸಿದೆ.

10 ಟಾಸ್: ಕಳೆದ 10 ಏಕದಿನ ಪಂದ್ಯದಲ್ಲೂ ಭಾರತ ಟಾಸ್ ಸೋತಿದೆ. 2023ರ ವಿಶ್ವಕಪ್ ಸೆಮೀಸ್‌ನಲ್ಲಿ ಕಿವೀಸ್ ವಿರುದ್ಧ ಕೊನೆ ಬಾರಿ ಟೀಂ ಇಂಡಿಯಾ ಟಾಸ್ ಗೆದ್ದಿತ್ತು.

Latest Videos
Follow Us:
Download App:
  • android
  • ios