Asianet Suvarna News Asianet Suvarna News

ಟಿ20 ವಿಶ್ವಕಪ್‌ನಲ್ಲೂ ಅಬ್ಬರಿಸಲು ಸೂರ್ಯಕುಮಾರ್ ಯಾದವ್ ಮಾಸ್ಟರ್ ಪ್ಲ್ಯಾನ್..!

ಸದ್ಯ ಕ್ರಿಕೆಟ್ ಜಗತ್ತಿನಲ್ಲಿ ಐಪಿಎಲ್‌ ಸಮರ ಜೋರಾಗಿದೆ. ಆದ್ರೆ, ಭಾರತೀಯ ಕ್ರಿಕೆಟ್ ಅಭಿಮಾನಿಗಳು ಮಾತ್ರ ಟಿ20 ವಿಶ್ವಕಪ್ ದಂಗಲ್‌ಗಾಗಿ ಕಾಯ್ತಿದ್ದಾರೆ. ಫ್ಯಾನ್ಸ್ ಮಾತ್ರ ಅಲ್ಲ ಟೀಂ ಇಂಡಿಯಾದ ಆಟಗಾರರು ಕೂಡ ವಿಶ್ವಕಪ್ನಲ್ಲಿ ಅಬ್ಬರಿಸಲೇಬೇಕು ಅಂತ ಫಿಕ್ಸ್ ಆಗಿದ್ದಾರೆ.

Team India Cricketer Suryakumar Yadav starts Practice Ahead of ICC T20 World Cup 2024 kvn
Author
First Published May 9, 2024, 2:17 PM IST

ಬೆಂಗಳೂರು(ಮೇ.09): ಈ ಆಟಗಾರ ಫ್ಲಾಪ್ ಶೋ ಮೂಲಕ ಕಳೆದ ಏಕದಿನ ವಿಶ್ವಕಪ್‌ನಲ್ಲಿ ಟೀಂ ಇಂಡಿಯಾಗೆ ವಿಲನ್ ಆಗಿದ್ದ. ಇದ್ರಿಂದ ಆ ಕಳಂಕ ತೆಗೆದು ಹಾಕಲು ಮುಂಬರೋ ಟಿ20 ವಿಶ್ವಕಪ್‌ನಲ್ಲಿ ಅಬ್ಬರಿಸಲು ನಿರ್ಧರಿಸಿದ್ದಾನೆ. ಅದಕ್ಕಾಗಿ ಸ್ಪೆಷಲ್ ಪ್ಲ್ಯಾನ್ ಮಾಡಿದ್ದಾನೆ. ಯಾರು ಆ ಆಟಗಾರ..? ಏನದು ಪ್ಲ್ಯಾನ್ ಅಂತೀರಾ..? ಈ ಸ್ಟೋರಿ ನೋಡಿ. 

ಸ್ಪೆಷಲ್ ಪ್ರಾಕ್ಟೀಸ್ ಮೊರೆ ಹೋದ ಟಿ20 ಸ್ಪೆಷಲಿಸ್ಟ್ ಬ್ಯಾಟರ್..!

ಸದ್ಯ ಕ್ರಿಕೆಟ್ ಜಗತ್ತಿನಲ್ಲಿ ಐಪಿಎಲ್‌ ಸಮರ ಜೋರಾಗಿದೆ. ಆದ್ರೆ, ಭಾರತೀಯ ಕ್ರಿಕೆಟ್ ಅಭಿಮಾನಿಗಳು ಮಾತ್ರ ಟಿ20 ವಿಶ್ವಕಪ್ ದಂಗಲ್‌ಗಾಗಿ ಕಾಯ್ತಿದ್ದಾರೆ. ಫ್ಯಾನ್ಸ್ ಮಾತ್ರ ಅಲ್ಲ ಟೀಂ ಇಂಡಿಯಾದ ಆಟಗಾರರು ಕೂಡ ವಿಶ್ವಕಪ್ನಲ್ಲಿ ಅಬ್ಬರಿಸಲೇಬೇಕು ಅಂತ ಫಿಕ್ಸ್ ಆಗಿದ್ದಾರೆ. ಅದಕ್ಕಾಗಿ ಸಮರಾಭ್ಯಾಸ ಶುರು ಮಾಡಿದ್ದಾರೆ. ಅದರಲ್ಲೂ ಟಿ20 ಸ್ಪೆಷಲಿಸ್ಟ್ ಸೂರ್ಯಕುಮಾರ್ ಯಾದವ್ ಸ್ಪೆಷಲ್ ಪ್ರಾಕ್ಟೀಸ್ ಮೊರೆ ಹೋಗಿದ್ದಾರೆ.

ರೋಹಿತ್ ಶರ್ಮಾ ಪಡೆಯ ಟಿ20 ವಿಶ್ವಕಪ್ ಗೆಲ್ಲುವ ಆಸೆಗೆ ಮತ್ತೆ ಐಪಿಎಲ್ ವಿಲನ್ ಆಗುತ್ತಾ..?

ಯೆಸ್, ಇಂಜುರಿಯಿಂದ ಚೇತರಿಸಿಕೊಂಡು ಬಂದ ನಂತರ ಐಪಿಎಲ್‌ನಲ್ಲಿ ಸೂರ್ಯಕುಮಾರ್ ಯಾದವ್ ಜಬರ್ದಸ್ತ್ ಪ್ರದರ್ಶನ ನೀಡ್ತಿದ್ದಾರೆ. ಅದ್ಭುತ ಬ್ಯಾಟಿಂಗ್‌ನಿಂದ ಮಿಂಚ್ತಿದ್ದಾರೆ. ಸನ್‌ರೈಸರ್ಸ್ ಹೈದ್ರಾಬಾದ್ ವಿರುದ್ಧದ ಪಂದ್ಯದಲ್ಲಿ ಆಡಿದ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್‌ ಇದಕ್ಕೆ ಸಾಕ್ಷಿ.! ತಂಡ ತೀವ್ರ ಸಂಕಷ್ಟದಲ್ಲಿದ್ದಾಗ ಕ್ರೀಸ್‌ಗಿಳಿದ ಸೂರ್ಯ ಫಿಯರ್ಲೆಸ್ ಆಗಿ ಬ್ಯಾಟ್ ಬೀಸಿದ್ರು. ಕೌಂಟರ್ ಅಟ್ಯಾಕ್ ಮೂಲಕ, ಮ್ಯಾಚ್ ಮುಂಬೈ ಪರ ವಾಲುವಂತೆ ಮಾಡಿದ್ರು. ಕೇವಲ 51 ಎಸೆತಗಳಲ್ಲಿ ಶತಕ ಸಿಡಿಸಿದ್ರು. ಕೊನೆಯವರೆಗೂ ಕ್ರೀಸ್‌ನಲ್ಲಿ ನಿಂತು ತಂಡಕ್ಕೆ ಗೆಲುವು ತಂದುಕೊಟ್ರು. 

ಮಧ್ಯಾಹ್ನದ ಸುಡು ಬಿಸಿಲಿನಲ್ಲಿ ಸೂರ್ಯ ಅಭ್ಯಾಸ..!

ಐಪಿಎಲ್‌ನಂತೆ ಟಿ20 ವಿಶ್ವಕಪ್ ಟೂರ್ನಿಯಲ್ಲೂ ಮಿಂಚಲು ಸೂರ್ಯ ಮಾಸ್ಟರ್ ಪ್ಲ್ಯಾನ್ ಮಾಡಿದ್ದಾರೆ. ಬೇರೆ ಆಟಗಾರರು ಬೆಳಿಗ್ಗೆ ಮತ್ತು ಸಂಜೆ ಹೊತ್ತು ನೆಟ್ಸ್ ಪ್ರಾಕ್ಟೀಸ್ ಮಾಡಿದ್ರೆ, ಸೂರ್ಯ ಮಾತ್ರ ಮಧ್ಯಾಹ್ನ ಹೊತ್ತು ಪ್ರಾಕ್ಟೀಸ್ ಮಾಡ್ತಿದ್ದಾರೆ. ಇದರ ಹಿಂದಿನ ಕಾರಣ ಏನಂದ್ರೆ, ಅಮೇರಿಕಾ  ಮತ್ತು  ವೆಸ್ಟ್ ಇಂಡೀಸ್ನಲ್ಲಿ ವಿಶ್ವಕಪ್ ಪಂದ್ಯಗಳು ಹಗಲಿನಲ್ಲಿ ನಡೆಯಲಿವೆ. ಐಪಿಎಲ್‌ನಲ್ಲಿ ಹೆಚ್ಚಿನ ಮ್ಯಾಚ್ಗಳು ರಾತ್ರಿ ವೇಳೆ ನಡೆಯಲಿವೆ. ಇದ್ರಿಂದ ಎರಡು ತಿಂಗಳ ನಂತರ ಏಕಾಏಕಿ ಹಗಲಿನಲ್ಲಿ ಬ್ಯಾಟಿಂಗ್ ಮಾಡಲು ಕಷ್ಟವಾಗಬಹುದು. ಹೀಗಾಗಿ ಸೂರ್ಯ ಹಗಲಿನಲ್ಲಿ ಅಭ್ಯಾಸ ಮಾಡಿದ್ದಾರೆ. 

3 ವರ್ಷಗಳ ಬಳಿಕ ಜಾವೆಲಿನ್ ತಾರೆ ನೀರಜ್‌ ಚೋಪ್ರಾ ಭಾರತದಲ್ಲಿ ಸ್ಪರ್ಧೆ

ಕಳಂಕ ಕಳೆದುಕೊಳ್ಳಲು ಸೂರ್ಯಗೆ ಇದೇ ಬೆಸ್ಟ್ ಚಾನ್ಸ್..!

ಯೆಸ್, ಕಳೆದ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಸೂರ್ಯಕುಮಾರ್ರಿಂದ ಹೇಳಿಕೊಳ್ಳುವ ಪ್ರದರ್ಶನ ಬಂದಿರಲಿಲ್ಲ. ಅದರಲ್ಲೂ ಫೈನಲ್ ಫೈಟ್ನಲ್ಲಿ ಸೂರ್ಯ ಬ್ಯಾಟಿಂಗ್ ಸಾಕಷ್ಟು ಟೀಕೆಗೆ ಗುರಿಯಾಗಿತ್ತು. ಕೊನೆಯ ಓವರ್ಗಳಲ್ಲಿ ಕುಲ್ದೀದ್ ಯಾದವ್‌ಗೆ ಸ್ಟ್ರೈಕ್ ಬಿಟ್ಟುಕೊಟ್ಟಿದ್ದು ಅಭಿಮಾನಿಗಳನ್ನ ಕೆರಳಿಸಿತ್ತು. ಹೀಗಾಗಿ ಸೂರ್ಯಗೆ ಏಕದಿನ ವಿಶ್ವಕಪ್ನ ಕಳಂಕ ಕಳೆದುಕೊಳ್ಳಲು, ಟಿ20 ವಿಶ್ವಕಪ್ ಬೆಸ್ಟ್ ಚಾನ್ಸ್ ಆಗಿದೆ.

ಸ್ಪೋರ್ಟ್ಸ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್ 
 

Follow Us:
Download App:
  • android
  • ios