3 ವರ್ಷಗಳ ಬಳಿಕ ಜಾವೆಲಿನ್ ತಾರೆ ನೀರಜ್ ಚೋಪ್ರಾ ಭಾರತದಲ್ಲಿ ಸ್ಪರ್ಧೆ
26ರ ನೀರಜ್ 2021ರ ಮಾರ್ಚ್‌ನಲ್ಲಿ ಕೊನೆ ಬಾರಿ ಭಾರತದಲ್ಲಿ ಫೆಡರೇಶನ್ ಕಪ್‌ನಲ್ಲಿ ಸ್ಪರ್ಧಿಸಿದ್ದರು. ಆ ಬಳಿಕ ಅವರು 2021ರಲ್ಲಿ ಟೋಕಿಯೋ ಒಲಿಂಪಿಕ್ಸ್, 2022ರಲ್ಲಿ ಡೈಮಂಡ್ ಲೀಗ್, 2023ರಲ್ಲಿ ವಿಶ್ವ ಚಾಂಪಿಯನ್ ಹಾಗೂ ಏಷ್ಯನ್ ಗೇಮ್ಸ್‌ನಲ್ಲಿ ಚಾಂಪಿಯನ್ ಆಗಿದ್ದಾರೆ. ಅವರ ಜೊತೆ ಕಿಶೋರ್ ಜೆನಾ ಕೂಡಾ ಕಣಕ್ಕಿಳಿಯಲಿದ್ದಾರೆ.
ನವದೆಹಲಿ: ಜಾವೆಲಿನ್ ಎಸೆತದಲ್ಲಿ ಒಲಿಂಪಿಕ್ಸ್ ಹಾಗೂ ವಿಶ್ವ ಚಾಂಪಿಯನ್ ನೀರಜ್ ಚೋಪ್ರಾ 3 ವರ್ಷಗಳ ಬಳಿಕ ಭಾರತದಲ್ಲಿ ಸ್ಪರ್ಧಿಸಲಿದ್ದಾರೆ. ಅವರು ಮೇ 12ರಿಂದ 15ರ ವರೆಗೆ ಭುವನೇಶ್ವರದಲ್ಲಿ ನಡೆಯಲಿರುವ ರಾಷ್ಟ್ರೀಯ ಫೆಡರೇಶನ್ ಕಪ್‌ನಲ್ಲಿ ಕಣಕ್ಕಿಳಿಯಲಿದ್ದಾರೆ.
26ರ ನೀರಜ್ 2021ರ ಮಾರ್ಚ್‌ನಲ್ಲಿ ಕೊನೆ ಬಾರಿ ಭಾರತದಲ್ಲಿ ಫೆಡರೇಶನ್ ಕಪ್‌ನಲ್ಲಿ ಸ್ಪರ್ಧಿಸಿದ್ದರು. ಆ ಬಳಿಕ ಅವರು 2021ರಲ್ಲಿ ಟೋಕಿಯೋ ಒಲಿಂಪಿಕ್ಸ್, 2022ರಲ್ಲಿ ಡೈಮಂಡ್ ಲೀಗ್, 2023ರಲ್ಲಿ ವಿಶ್ವ ಚಾಂಪಿಯನ್ ಹಾಗೂ ಏಷ್ಯನ್ ಗೇಮ್ಸ್‌ನಲ್ಲಿ ಚಾಂಪಿಯನ್ ಆಗಿದ್ದಾರೆ. ಅವರ ಜೊತೆ ಕಿಶೋರ್ ಜೆನಾ ಕೂಡಾ ಕಣಕ್ಕಿಳಿಯಲಿದ್ದಾರೆ.
ಆರ್‌ಸಿಬಿ vs ಪಂಜಾಬ್ ಕಿಂಗ್ಸ್: ಪ್ಲೇ ಆಫ್ ರೇಸ್ ಗೆಲ್ಲೋರು ಯಾರು?
ಇಂದಿನಿಂದ ಒಲಿಂಪಿಕ್ಸ್ ಅರ್ಹತಾ ಕುಸ್ತಿ
ಇಸ್ತಾಂಬುಲ್ (ಟರ್ಕಿ): ಒಲಿಂಪಿಕ್ಸ್ ವಿಶ್ವ ಅರ್ಹತಾ ಕುಸ್ತಿ ಚಾಂಪಿಯನ್‌ಶಿಪ್ ಗುರುವಾರದಿಂದ ಆರಂಭಗೊಳ್ಳಲಿದೆ. ಇದು ಈ ಬಾರಿ ಒಲಿಂಪಿಕ್ಸ್ ಕುಸ್ತಿಯ ಕೊನೆ ಅರ್ಹತಾ ಟೂರ್ನಿಯಾಗಿದ್ದು, ಕೋಟಾಗಳು ಲಭ್ಯವಿದೆ. ಭಾರತದ 14 ಮಂದಿ ಸ್ಪರ್ಧಿಸಲಿದ್ದು, ಗರಿಷ್ಠಪ್ರಮಾಣದಲ್ಲಿ ಕೋಟಾ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ. ಭಾರತದಿಂದ ಈವರೆಗೆ ವಿವಿಧ ಅರ್ಹತಾ ಕೂಟಗಳ ಮೂಲಕ ನಾಲ್ವರು ಮಹಿಳಾ ಕುಸ್ತಿಪಟುಗಳು ಒಲಿಂಪಿಕ್ಸ್ ಪ್ರವೇಶಿಸಿದ್ದಾರೆ.
ಪುರುಷರು ಈ ವರೆಗೂ ಒಂದೂ ಕೋಟಾ ಗೆದ್ದಿಲ್ಲ. ಇತ್ತೀಚೆಗೆ ಕಜಕಸ್ತಾನದ ಬಿಷೇಕ್‌ನಲ್ಲಿ ನಡೆದಿದ್ದ ಅರ್ಹತಾ ಟೂರ್ನಿ ಯಲ್ಲೂ ಭಾರತ ಕಳಪೆ ಪ್ರದರ್ಶನ ನೀಡಿತ್ತು. ಪುರುಷರ ಫ್ರೀಸ್ಟೈಲ್ ವಿಭಾಗದಲ್ಲಿ ಸ್ಪರ್ಧಿಸಲಿರುವ ಅಮನ್ (57), ಸುಜೀತ್ (65), ಜೈದೀಪ್ (74), ದೀಪಕ್ ಪೂನಿಯಾ(86), ದೀಪಕ್ (97) ಹಾಗೂ ಸುಮಿತ್ (125 ), ಮಹಿಳಾ ಫ್ರೀಸ್ಟೈಲ್ ನಲ್ಲಿ ಮಾನಿ(62), ನಿಶಾ(68 ) ಮೇಲೆ ಹೆಚ್ಚಿನ ನಿರೀಕ್ಷೆಯಿದೆ.
ಮೊದಲ ಬಾರಿಗೆ ಬುಮ್ರಾ ಮಗನ ಮುಖ ರಿವೀಲ್; ವಾಂಖೇಡೆಯಲ್ಲಿ ಅಪ್ಪನ ಆಟ ಎಂಜಾಯ್ ಮಾಡಿದ ಅಂಗದ್
ಹಡಗಿನಲ್ಲಿ ಫ್ರಾನ್‌ಗೆ ಆಗಮಿಸಿದ ಪ್ಯಾರಿಸ್ ಒಲಿಂಪಿಕ್ಸ್ ಜ್ಯೋತಿ
ಪ್ಯಾರಿಸ್: 2024ರ ಪ್ಯಾರಿಸ್ ಒಲಿಂಪಿಕ್ಸ್ ಜ್ಯೋತಿ ಬುಧವಾರ ಫ್ರಾನ್ಸ್‌ನ ಬಂದರು ನಗರ ಮಾರ್ಸೆಗೆ ಆಗಮಿಸಿದೆ. ಇತ್ತೀಚೆ ಗಷ್ಟೇ ಗ್ರೀಸ್‌ನಲ್ಲಿ ಸಂಪ್ರದಾಯದಂತೆ ಒಲಿಂಪಿಕ್ಸ್ ಜ್ಯೋತಿ ಬೆಳಗಿಸಲಾಗಿತ್ತು. ಅಲ್ಲಿಂದ 19ನೇ ಶತಮಾನದ ಹಡಗು 'ಬೆಲೆಮ್' ಮೂಲಕ ಜ್ಯೋತಿಯನ್ನು ಫ್ರಾನ್ಸ್‌ಗೆ ತರಲಾಗಿದೆ. ಜ್ಯೋತಿ ಹಸ್ತಾಂತರ ಪ್ರಕ್ರಿಯೆ ವೇಳೆ ಲಕ್ಷಾಂತರ ಮಂದಿ ಸೇರಿದ್ದರು. ಇನ್ನು ಫ್ರಾನ್ಸ್‌ನ ವಿವಿಧ ನಗರಗಳಲ್ಲಿ ಸುಮಾರು 12000 ಕಿ.ಮೀ. ದೂ ಒಲಿಂಪಿಕ್ಸ್ ಜ್ಯೋತಿ ಯಾತ್ರೆ ಸಂಚರಿಸಲಿದೆ.