Asianet Suvarna News Asianet Suvarna News

ವಿಶ್ವ ನಂ.1 ಸೂರ್ಯಕುಮಾರ್‌ ಯಾದವ್ ಐಸಿಸಿ ಟಿ20 ವರ್ಷದ ಕ್ರಿಕೆಟಿಗ

ವಿಶ್ವ ನಂ.1 ಸ್ಥಾನದಲ್ಲಿರುವ ಸೂರ್ಯ ಅವರನ್ನು ಐಸಿಸಿ, ಭಾರತದ ಮಧ್ಯಮ ಕ್ರಮಾಂಕದ ಬೆನ್ನೆಲುಬು ಎಂದು ಬಣ್ಣಿಸಿದೆ. 2023ರಲ್ಲಿ 17 ಅಂತಾರಾಷ್ಟ್ರೀಯ ಟಿ20 ಪಂದ್ಯವಾಡಿರುವ ಸೂರ್ಯ 5 ಅರ್ಧಶತಕ, 2 ಶತಕಗಳೊಂದಿಗೆ 733 ರನ್‌ ಗಳಿಸಿದ್ದಾರೆ.

Team India Cricketer Suryakumar Yadav named ICC T20I Player of the Year for 2023 kvn
Author
First Published Jan 25, 2024, 1:20 PM IST

ದುಬೈ(ಜ.25): ಭಾರತ ಕ್ರಿಕೆಟ್‌ ತಂಡದ ಸ್ಪೋಟಕ ಬ್ಯಾಟರ್‌ ಸೂರ್ಯಕುಮಾರ್‌ ಯಾದವ್‌ ಸತತ 2ನೇ ಬಾರಿ ಐಸಿಸಿ ವರ್ಷದ ಟಿ20 ಆಟಗಾರ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ವಿಶ್ವ ನಂ.1 ಸ್ಥಾನದಲ್ಲಿರುವ ಸೂರ್ಯ ಅವರನ್ನು ಐಸಿಸಿ, ಭಾರತದ ಮಧ್ಯಮ ಕ್ರಮಾಂಕದ ಬೆನ್ನೆಲುಬು ಎಂದು ಬಣ್ಣಿಸಿದೆ. 2023ರಲ್ಲಿ 17 ಅಂತಾರಾಷ್ಟ್ರೀಯ ಟಿ20 ಪಂದ್ಯವಾಡಿರುವ ಸೂರ್ಯ 5 ಅರ್ಧಶತಕ, 2 ಶತಕಗಳೊಂದಿಗೆ 733 ರನ್‌ ಗಳಿಸಿದ್ದಾರೆ. ಹಾರ್ದಿಕ್‌ ಪಾಂಡ್ಯ ಹಾಗೂ ರೋಹಿತ್‌ ಶರ್ಮಾ ಅನುಪಸ್ಥಿತಿಯಲ್ಲಿ ಟಿ20 ತಂಡದ ನಾಯಕತ್ವ ವಹಿಸಿದ್ದ ಅವರು, ಆಸ್ಟ್ರೇಲಿಯಾ ವಿರುದ್ಧ 4-1ರಿಂದ ಸರಣಿ ಗೆಲುವು ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ 1-1ರಿಂದ ಸರಣಿ ಸಮಬಲ ಸಾಧಿಸಲು ಯಶಸ್ವಿಯಾಗಿದ್ದರು.

ಇದೇ ವೇಳೆ ಐಸಿಸಿ ಉದಯೋನ್ಮುಖ ಕ್ರಿಕೆಟಿಗ ಪ್ರಶಸ್ತಿಗೆ ನ್ಯೂಜಿಲೆಂಡ್‌ನ ತಾರಾ ಬ್ಯಾಟರ್‌ ರಚಿನ್‌ ರವೀಂದ್ರ ಭಾಜನರಾಗಿದ್ದಾರೆ. ಏಕದಿನ, ಟೆಸ್ಟ್‌, ವರ್ಷದ ಕ್ರಿಕೆಟಿಗ ಪ್ರಶಸ್ತಿಯನ್ನು ಐಸಿಸಿ ಗುರುವಾರ ಪ್ರಕಟಿಸುವ ಸಾಧ್ಯತೆಯಿದೆ.

ಹೈದರಬಾದ್ ಟೆಸ್ಟ್: ಭಾರತ ಎದುರು ಟಾಸ್ ಗೆದ್ದ ಇಂಗ್ಲೆಂಡ್ ಬ್ಯಾಟಿಂಗ್ ಆಯ್ಕೆ

ಕಿರಿಯರಿಗೆ ಅವಕಾಶಕ್ಕಾಗಿ ಹಿರಿಯರನ್ನು ಕೈಬಿಡುವುದು ಅನಿವಾರ್ಯ: ರೋಹಿತ್ ಶರ್ಮಾ

ಹೈದರಾಬಾದ್‌: ಕಿರಿಯ, ಪ್ರತಿಭಾವಂತ ಆಟಗಾರರಿಗೆ ಅವಕಾಶ ಒದಗಿಸುವ ಸಲುವಾಗಿ ಹಿರಿಯರನ್ನು ಆಯ್ಕೆಗೆ ಪರಿಗಣಿಸದಿರುವುದು ಅನಿವಾರ್ಯ ಎಂದು ಭಾರತದ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ. ಇಂಗ್ಲೆಂಡ್ ವಿರುದ್ದದ ಮೊದಲೆರಡು ಟೆಸ್ಟ್‌ಗಳಿಂದ ವಿರಾಟ್ ಕೊಹ್ಲಿ ಹೊರಗುಳಿದ ನಂತರ ಚರ್ಚೆಯಲ್ಲಿದ್ದ ಪೂಜಾರ, ಅಜಿಂಕ್ಯ ರಹಾನೆ ಆಯ್ಕೆಯ ಕುರಿತು ರೋಹಿತ್ ಶರ್ಮಾ ಬುಧವಾರ ಪ್ರತಿಕ್ರಿಯೆ ನೀಡಿದ್ದಾರೆ.

ಅನುಭವಿ ಆಟಗಾರರನ್ನು ಆಯ್ಕೆಗೆ ಪರಿಗಣಿಸದೇ ಇರುವುದು ಕಷ್ಟದ ಕೆಲಸ. ಆದರೆ ಕಿರಿಯರನ್ನು ಮುಂದಿಟ್ಟುಕೊಂಡು ಕೆಲವೊಮ್ಮೆ ಕಠಿಣ ನಿರ್ಧಾರ ಕೈಗೊಳ್ಳಬೇಕಾಗುತ್ತದೆ ಎಂದಿದ್ದಾರೆ.

ಪಾರ್ಟಿಯಲ್ಲಿ ಕುಡಿದು ಪ್ರಜ್ಞೆ ಕಳೆದುಕೊಂಡ ಮ್ಯಾಕ್ಸ್‌ವೆಲ್‌

ಸಿಡ್ನಿ: ಪಾರ್ಟಿಯಲ್ಲಿ ಅತಿಯಾಗಿ ಕುಡಿದ ಕಾರಣ ಆಸ್ಟ್ರೇಲಿಯಾದ ತಾರಾ ಆಲ್ರೌಂಡರ್‌ ಗ್ಲೆನ್‌ ಮ್ಯಾಕ್ಸ್‌ವೆಲ್‌ ಪ್ರಜ್ಞೆ ಕಳೆದುಕೊಂಡ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ವರದಿಗಳ ಪ್ರಕಾರ, ಅಡಿಲೇಡ್‌ನಲ್ಲಿ ಕಳೆದ ವಾರ ನಡೆದಿದ್ದ ಪಾರ್ಟಿಯಲ್ಲಿ ಮ್ಯಾಕ್ಸ್‌ವೆಲ್‌ ಕುಡಿದು ಕಾರಣ ಪ್ರಜ್ಞೆ ತಪ್ಪಿದ್ದು, ಎಬ್ಬಿಸಲು ಪ್ರಯತ್ನಿಸಿದರೂ ಎಚ್ಚರಗೊಳ್ಳದ ಕಾರಣ ಆ್ಯಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಮಾರ್ಗ ಮಧ್ಯೆ ಅವರು ಎದ್ದು ಕೂತಿದ್ದಾರೆ ಎಂದು ತಿಳಿದುಬಂದಿದೆ. 

'ಇನ್ನಾದರೂ...?' ಶೋಯೆಬ್ ಮಲಿಕ್ ಮದುವೆಯಾಗಿದ್ದನ್ನ ಲೇವಡಿ ಮಾಡಿದ ಶಾಹಿದ್ ಅಫ್ರಿದಿ..! ಏನಂದ್ರು ನೀವೇ ನೋಡಿ

ಇದೇ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ಪ್ಯಾಟ್‌ ಕಮಿನ್ಸ್‌ ಅವರು ಮ್ಯಾಕ್ಸ್‌ವೆಲ್‌ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ತಾವೇನು ಮಾಡುತ್ತಿದ್ದೇವೆ ಎಂಬುದರ ಬಗ್ಗೆ ಅರಿವಿರಬೇಕು ಎಂದಿದ್ದಾರೆ. ಪ್ರಕರಣದ ಬಗ್ಗೆ ಕ್ರಿಕೆಟ್‌ ಆಸ್ಟ್ರೇಲಿಯಾ ತನಿಖೆ ನಡೆಸುತ್ತಿದೆ.
 

Follow Us:
Download App:
  • android
  • ios