Asianet Suvarna News Asianet Suvarna News

Shardul Thakur gets engaged: ಬಹುಕಾಲದ ಗೆಳತಿಯ ಜತೆ ನಿಶ್ಚಿತಾರ್ಥ ಮಾಡಿಕೊಂಡ ಶಾರ್ದೂಲ್ ಠಾಕೂರ್

* ಬಹುಕಾಲದ ಗೆಳತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡ ಕ್ರಿಕೆಟಿಗ ಶಾರ್ದೂಲ್ ಠಾಕೂರ್

* ಶಾರ್ದೂಲ್ ಠಾಕೂರ್ ಟೀಂ ಇಂಡಿಯಾ ಸ್ಟಾರ್ ಬೌಲರ್‌

* ಮುಂಬೈನಲ್ಲಿ ನಡೆದ ಸರಳ ಸುಂದರ ನಿಶ್ಚಿತಾರ್ಥ ಕಾರ್ಯಕ್ರಮ

Team India Cricketer Shardul Thakur gets engaged to his girlfriend Mittali Parulkar in Mumbai kvn
Author
Bengaluru, First Published Nov 29, 2021, 5:44 PM IST
  • Facebook
  • Twitter
  • Whatsapp

ಮುಂಬೈ(ನ.29): ಟೀಂ ಇಂಡಿಯಾ ವೇಗದ ಬೌಲರ್‌ ಶಾರ್ದೂಲ್ ಠಾಕೂರ್ (Shardul Thakur) ತಮ್ಮ ಬಹುಕಾಲದ ಗೆಳತಿ ಮಿಥಾಲಿ ಪರೂಲ್ಕರ್ (Mittali Parulkar) ಅವರೊಂದಿಗೆ ಇಂದು ನಿಶ್ಚಿತಾರ್ಥ (engagement) ಮಾಡಿಕೊಂಡಿದ್ದಾರೆ. ಮುಂಬೈ ಕ್ರಿಕೆಟ್ ಸಂಸ್ಥೆಯ (Mumbai Cricket Association) ಆವರಣದಲ್ಲಿ ನಡೆದ ಸರಳ ಸುಂದರ ಕಾರ್ಯಕ್ರಮದಲ್ಲಿ ಶಾರ್ದೂಲ್ ಠಾಕೂರ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಶಾರ್ದೂಲ್ ಠಾಕೂರ್ ತಮ್ಮ ಗೆಳತಿಗೆ ಉಂಗುರ ತೊಡಿಸುತ್ತಿರುವ ಕ್ಷಣ ಸಾಮಾಜಿಕ ಜಾಲತಾಣಗಳಲ್ಲಿ ಕ್ರಿಕೆಟ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

ಶಾರ್ದೂಲ್ ಠಾಕೂರ್ ಅವರ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಆಪ್ತ ಸ್ನೇಹಿತರು ಹಾಗೂ ಕುಟುಂಬಸ್ಥರು ಸೇರಿ ಕೇವಲ 75 ಮಂದಿಗೆ ಮಾತ್ರ ಆಮಂತ್ರಣ ನೀಡಲಾಗಿತ್ತು. ಶಾರ್ದೂಲ್ ಠಾಕೂರ್ ಹಾಗೂ ಮಿಥಾಲಿ ಪರೂಲ್ಕರ್ ಅವರ ವಿವಾಹವು 2022ರ ಐಸಿಸಿ ಟಿ20 ವಿಶ್ವಕಪ್ ಮುಕ್ತಾಯದ ಬಳಿಕ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಮುಂಬೈ ಕ್ರಿಕೆಟ್ ಸಂಸ್ಥೆಯ ಆವರಣದಲ್ಲಿ ನಡೆದ ಸರಳ ಸುಂದರ ಕಾರ್ಯಕ್ರಮದಲ್ಲಿ ಕೇವಲ 75 ಮಂದಿಯಷ್ಟೇ ಪಾಲ್ಗೊಂಡಿದ್ದರು. ಅವರೆಲ್ಲರೂ ಈ ಜೋಡಿಯ ಆಪ್ತ ಸ್ನೇಹಿತರು ಹಾಗೂ ಕುಟುಂಬಸ್ಥರಾಗಿದ್ದರು. ಆಸ್ಟ್ರೇಲಿಯಾದಲ್ಲಿ ನಡೆಯಲಿರುವ 2022ರ ಐಸಿಸಿ ಟಿ20 ವಿಶ್ವಕಪ್ ಮುಕ್ತಾಯದ ಬಳಿಕ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲಿದೆ ಎಂದು ಮೂಲಗಳು ತಿಳಿಸಿವೆ ಎಂದು ಟೈಮ್ಸ್‌ ಆಫ್ ಇಂಡಿಯಾ ವರದಿ ಮಾಡಿದೆ.

ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಕೊನೆಯ ಬಾರಿಗೆ ಭಾರತ ತಂಡದಲ್ಲಿ ಕಾಣಿಸಿಕೊಂಡಿದ್ದ ಶಾರ್ದೂಲ್ ಠಾಕೂರ್: 

ಮುಂಬೈ ಮೂಲದ ಪ್ರತಿಭಾನ್ವಿತ ಆಲ್ರೌಂಡರ್‌ ಶಾರ್ದೂಲ್ ಠಾಕೂರ್ ಇತ್ತೀಚೆಗಷ್ಟೆ ಯುಎಇನಲ್ಲಿ ಜರುಗಿದ ಐಸಿಸಿ ಟಿ20 ವಿಶ್ವಕಪ್ (ICC T20 World Cup) ಟೂರ್ನಿಯಲ್ಲಿ ಕಡೆಯ ಬಾರಿಗೆ ಟೀಂ ಇಂಡಿಯಾ (Team India) ಜೆರ್ಸಿಯಲ್ಲಿ ಕಾಣಿಸಿಕೊಂಡಿದ್ದರು. ಬಲಗೈ ವೇಗಿ ಶಾರ್ದೂಲ್ ಠಾಕೂರ್ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ಪರ ಎರಡು ಪಂದ್ಯಗಳಲ್ಲಿ ಕಣಕ್ಕಿಳಿದಿದ್ದರು. ಆದರೆ ಯಾವುದೇ ವಿಕೆಟ್‌ ಕಬಳಿಸಲು ಶಾರ್ದೂಲ್ ಯಶಸ್ವಿಯಾಗಿರಲಿಲ್ಲ. ಟಿ20 ವಿಶ್ವಕಪ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ (Virat Kohli) ನೇತೃತ್ವದ ಟೀಂ ಇಂಡಿಯಾ ಮೊದಲೆರಡು ಪಂದ್ಯಗಳಲ್ಲಿ ಸೋಲು ಕಾಣುವ ಮೂಲಕ ಸೆಮೀಸ್‌ಗೇರುವ ಅವಕಾಶವನ್ನು ಕೈಚೆಲ್ಲಿತ್ತು.

Ind vs NZ Kanpur Test: ಕಿವೀಸ್‌ ಪಡೆಯನ್ನು ಸೋಲಿನಿಂದ ಪಾರು ಮಾಡಿದ 'ಭಾರತದ' ಜೋಡಿ..!

ಇನ್ನು ಐಸಿಸಿ ಟಿ20 ವಿಶ್ವಕಪ್ ಮುಕ್ತಾಯದ ಬಳಿಕ ಶಾರ್ದೂಲ್ ಠಾಕೂರ್ ಅವರಿಗೆ ಬಿಸಿಸಿಐ (BCCI) ವಿಶ್ರಾಂತಿ ನೀಡಿದೆ. ಹೀಗಾಗಿ ತವರಿನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ದದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಶಾರ್ದೂಲ್ ಠಾಕೂರ್ ಕಾಣಿಸಿಕೊಂಡಿರಲಿಲ್ಲ. ಇದಾದ ಬಳಿಕ ಕಿವೀಸ್ ಎದುರಿನ 2 ಪಂದ್ಯಗಳ ಟೆಸ್ಟ್‌ ಸರಣಿಯಿಂದಲೂ ಶಾರ್ದೂಲ್ ಠಾಕೂರ್ ವಿಶ್ರಾಂತಿ ಪಡೆದಿದ್ದರು.

ಶಾರ್ದೂಲ್ ಠಾಕೂರ್ ಇದುವರೆಗೂ ಭಾರತ ಪರ 4 ಟೆಸ್ಟ್, 15 ಏಕದಿನ ಹಾಗೂ 23 ಟಿ20 ಪಂದ್ಯಗಳನ್ನಾಡಿದ್ದು, ಕ್ರಮವಾಗಿ 14, 22 ಹಾಗೂ 31 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಅದರಲ್ಲೂ ಆಸ್ಟ್ರೇಲಿಯಾ ವಿರುದ್ದದ ಟೆಸ್ಟ್ ಸರಣಿ ಗೆಲುವಿನಲ್ಲಿ ಶಾರ್ದೂಲ್ ಠಾಕೂರ್ ಆಲ್ರೌಂಡ್‌ ಪ್ರದರ್ಶನ ಪ್ರಮುಖ ಪಾತ್ರ ವಹಿಸಿತ್ತು. ಇನ್ನು ಐಪಿಎಲ್‌ನಲ್ಲಿ 67 ಪಂದ್ಯಗಳನ್ನಾಡಿರುವ ಶಾರ್ದೂಲ್ ಠಾಕೂರ್ 67 ವಿಕೆಟ್ ಕಬಳಿಸಿದ್ದಾರೆ. 2021ರ ಐಪಿಎಲ್ (IPL 2021) ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡವು ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಶಾರ್ದೂಲ್ ಠಾಕೂರ್‌ ಬೌಲಿಂಗ್‌ನಲ್ಲಿ ಮಹತ್ವದ ಕಾಣಿಕೆ ನೀಡಿದ್ದರು.
 

Follow Us:
Download App:
  • android
  • ios