* ಟೆಸ್ಟ್ ಕ್ರಿಕೆಟ್‌ನಲ್ಲಿ ಸ್ಪೋಟಕ ಬ್ಯಾಟಿಂಗ್ ಮೂಲಕ ಮಿಂಚುತ್ತಿರುವ ರಿಷಭ್ ಪಂತ್* ಇಂಗ್ಲೆಂಡ್ ಎದುರು ಸ್ಪೋಟಕ ಶತಕ ಸಿಡಿಸಿ ಭಾರತಕ್ಕೆ ಆಸರೆಯಾಗಿದ್ದ ಪಂತ್* ಟೆಸ್ಟ್ ಕ್ರಿಕೆಟ್‌ನಲ್ಲಿ ಸೆಂಚುರಿಗಳನ್ನ ಸಿಡಿಸೋ ಪಂತ್, ಟಿ20 ಕ್ರಿಕೆಟ್ಗೆ ಬಂದರೆ ಠುಸ್ ಪಟಾಕಿ
ಬೆಂಗಳೂರು(ಜು.09): ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್ನಲ್ಲಿ ರಿಷಭ್ ಪಂತ್ ಸೆಂಚುರಿ ಸಿಡಿಸಿದ್ದೇ ಬಂತು. ಅವರ ಕಳಪೆ ಆಟಗಳೆಲ್ಲಾ ಒಂದೊಂದಾಗಿ ಮಾಯವಾಗ್ತಿವೆ. ಸತತ ವೈಫಲ್ಯ ಅನುಭವಿಸಿದ್ದ ಡೆಲ್ಲಿ ಕೀಪರ್, ಒಂದು ಇನ್ನಿಂಗ್ಸ್ನಲ್ಲಿ ಎಲ್ಲವನ್ನೂ ಮರೆಸಿದ್ದಾರೆ. ಆಂಗ್ಲರ ಬೇಟೆಯಾಡಿದ ರಿಷಭ್ ಪಂತ್, ಫಸ್ಟ್ ಇನ್ನಿಂಗ್ಸ್ನಲ್ಲಿ ಟೀಂ ಇಂಡಿಯಾಗೆ ಆಸರೆಯಾಗಿದ್ದರು. ಅವರ ಬ್ಯಾಟಿಂಗ್ ಸ್ಟೈಲ್ಗೆ ಫಿದಾ ಆಗಿ ಎಲ್ಲರೂ ಪಂತ್-ಪಂತ್-ಪಂತ್ ಎನ್ನುತ್ತಿದ್ದಾರೆ.
ಆದರೆ ಟೆಸ್ಟ್ ಕ್ರಿಕೆಟ್‌ನಲ್ಲಿ ಸೆಂಚುರಿಗಳನ್ನ ಸಿಡಿಸೋ ರಿಷಭ್ ಪಂತ್ (Rishabh Pant), ಟಿ20 ಕ್ರಿಕೆಟ್ಗೆ ಬಂದರೆ ಠುಸ್ ಪಟಾಕಿ. ಇದು ನಾವ್ ಹೇಳ್ತಿಲ್ಲ. ಅವರ ಅಂಕಿ-ಅಂಶಗಳೇ ಹೇಳ್ತಿವೆ. ಆಸ್ಟ್ರೇಲಿಯಾ, ಇಂಗ್ಲೆಂಡ್, ಸೌತ್ ಆಫ್ರಿಕಾದಲ್ಲಿ ಟೆಸ್ಟ್ ಶತಕಗಳನ್ನ ಸಿಡಿಸಿದ್ದಾರೆ. ಆದರೆ ಶಾರ್ಟ್ ಫಾಮ್ಯಾಟ್ಗೆ ಬಂದರೆ ಅವರ ಆಟ ಅಷ್ಟಕಷ್ಟೆ. ಒನ್ಡೇ ಕ್ರಿಕೆಟ್‌ನಲ್ಲಿ ಪರವಾಗಿಲ್ಲ. ಟಿ20 ಕ್ರಿಕೆಟ್‌ನಲ್ಲಿ ಅವರ ಆಟ ತೀರ ಕಳಪೆಯಾಗಿದೆ. ಐಪಿಎಲ್ನಲ್ಲೂ ಅವರ ಆಟ ಹೇಳಿಕೊಳ್ಳುವಂತಿಲ್ಲ.
42 ಇನ್ನಿಂಗ್ಸ್ ಆಡಿದ್ರೂ 123ರ ಬ್ಯಾಟಿಂಗ್ ಸ್ಟ್ರೈಕ್ರೇಟ್
ಟೆಸ್ಟ್ ಕ್ರಿಕೆಟ್‌ನಲ್ಲಿ ಆಟಗಾರನ ಪರ್ಫಾಮೆನ್ಸ್ ಅನ್ನು ಆತನ ಸರಾಸರಿ ಮೇಲೆ ಹೇಳಲಾಗುತ್ತೆ. ಆದ್ರೆ ಟಿ20 ಕ್ರಿಕೆಟ್‌ನಲ್ಲಿ ಸರಾಸರಿ ಇಂಪಾಡೆಂಟೇ ಅಲ್ಲ. ಟಿ20ಯಲ್ಲಿ ಏನಿದ್ದರೂ ಸ್ಟ್ರೈಕ್ರೇಟ್. ಜಸ್ಟ್ 10 ಬಾಲ್ನಲ್ಲಿ 30 ರನ್ ಹೊಡೆದ್ರೆ ಸಾಕು, ಆತ ಅದ್ಭುತ ಬ್ಯಾಟ್ಸ್ಮನ್ ಎನಿಸಿಕೊಂಡು ಬಿಡುತ್ತಾನೆ. ರಿಷಭ್ ಪಂತ್, ಟೀಂ ಇಂಡಿಯಾ ಪರ 42 ಟಿ20 ಇನ್ನಿಂಗ್ಸ್ ಆಡಿದ್ರೂ ಅವರ ಸ್ಟ್ರೈಕ್ರೇಟ್ ಜಸ್ಟ್ 123 ಅಷ್ಟೆ. ಕಡಿಮೆ ಸ್ಟೈಕ್ರೇಟ್ ಇದೆ ಅನ್ನೋ ಕಾರಣಕ್ಕೆ ಕನ್ಸಿಟೆನ್ಸಿ ಪರ್ಫಾಮೆನ್ಸ್ ನೀಡುತ್ತಿದ್ದರೂ ಶಿಖರ್ ಧವನ್ ಅವರನ್ನ ಟಿ20 ಫಾಮ್ಯಾಟ್ನಿಂದ ಡ್ರಾಪ್ ಮಾಡಲಾಗಿದೆ. ಅದೇ ಮಾನದಂಡ ಇಟ್ಟುಕೊಂಡ್ರೆ ರಿಷಭ್ ಪಂತ್ ಸಹ ಟಿ20 ಟೀಮ್ನಿಂದ ಕಿಕೌಟ್ ಆಗಲಿದ್ದಾರೆ.
ದಿನೇಶ್ ಕಾರ್ತಿಕ್ ಸೇರಿ ಈ ನಾಲ್ವರಿಗೂ ಒಲಿಯಲಿಲ್ಲ ಟೆಸ್ಟ್ ಕ್ರಿಕೆಟ್ ಯಶಸ್ಸು..!
ವಿಶ್ವಕಪ್ನಲ್ಲಿ ಪಂತ್ಗೆ ಕಾಂಪಿಟೇಟರ್ ಡಿಕೆ ಸ್ಟ್ರೈಕ್ರೇಟ್ 145:
ಯೆಸ್, ಟಿ20 ವರ್ಲ್ಡ್ಕಪ್ ಟೀಮ್ನಲ್ಲಿ ಪಂತ್ ಮತ್ತು ದಿನೇಶ್ ಕಾರ್ತಿಕ್ (Dinesh Karthik) ಇಬ್ಬರೂ ಸ್ಥಾನ ಪಡೆಯುತ್ತಾರೆ. ಆದ್ರೆ ಪ್ಲೇಯಿಂಗ್-11ನಲ್ಲಿ ಇರೋದು ಮಾತ್ರ ಒಬ್ಬರೇ. ಟಿ20 ಫ್ಯಾಮ್ಯಾಟ್ಗೆ ಬಂದರೆ ಪಂತ್ ಅವರನ್ನ ಡಿಕೆ ಹಿಂದಿಕ್ಕಲಿದ್ದಾರೆ. ಯಾಕಂದರೆ ಪಂತ್ 123ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟಿಂಗ್ ಮಾಡಿದ್ದರೆ, ಡಿಕೆ ಸ್ಟ್ರೈಕ್ರೇಟ್ ಬರೋಬ್ಬರಿ 145.45. ರಿಷಭ್ ಪಂತ್ 48 ಟಿ20 ಪಂದ್ಯಗಳಿಂದ 741 ರನ್ ಬಾರಿಸಿದ್ದಾರೆ. 123.91ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟಿಂಗ್ ಮಾಡಿ 3 ಅರ್ಧಶತಕಗಳನ್ನೂ ದಾಖಲಿಸಿದ್ದಾರೆ. ಇನ್ನು ದಿನೇಶ್ ಕಾರ್ತಿಕ್ 39 ಟಿ20 ಮ್ಯಾಚ್ಗಳಲ್ಲಿ 496 ರನ್ ಹೊಡೆದಿದ್ದಾರೆ. 145.45ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟಿಂಗ್ ಮಾಡಿ ಒಂದು ಹಾಫ್ ಸೆಂಚುರಿಯನ್ನೂ ಬಾರಿಸಿದ್ದಾರೆ.
ಟಿ20 ಫಾರ್ಮ್ಯಾಟ್ನಲ್ಲಿ ಸ್ಟ್ರೈಕ್ರೇಟ್ಗೆ ಹೆಚ್ಚು ಮಹತ್ವ. ನಂಬರ್ 3 ಸ್ಲಾಟ್ನಲ್ಲಿ ಕೊಹ್ಲಿ, ನಾಲ್ಕರಲ್ಲಿ ಸೂರ್ಯಕುಮಾರ್ ಯಾದವ್ (Suryakumar Yadav), ಐದರಲ್ಲಿ ಹಾರ್ದಿಕ್ ಪಾಂಡ್ಯ, ನಂಬರ್ 6 ಸ್ಲಾಟ್ನಲ್ಲಿ ಡಿಕೆ ಆಡೋದ್ರಿಂದ ಪಂತ್ಗೆ ಜಾಗವಿಲ್ಲ. ಆಕಸ್ಮಾತ್ ಅವರನ್ನ ಆಡಿಸಿದ್ರೆ ಈ ನಾಲ್ವರಲ್ಲಿ ಒಬ್ಬರನ್ನ ಡ್ರಾಪ್ ಮಾಡ್ಬೇಕು. ಹಾಗಾಗಿ ಪಂತ್ ಪ್ಲೇಯಿಂಗ್-11ನಿಂದ ಡ್ರಾಪ್ ಆಗೋ ಎಲ್ಲಾ ಚಾನ್ಸಸ್ ಇದೆ.
