ಮುಂಬೈ(ಮಾ.21): ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ ಎಂ.ಎಸ್.ಧೋನಿಯನ್ನು ಮತ್ತೆ ಟೀಂ ಇಂಡಿಯಾ ಜರ್ಸಿಯಲ್ಲಿ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. ಆದರೆ 2019ರ ವಿಶ್ವಕಪ್ ಟೂರ್ನಿ ಬಳಿಕ ಧೋನಿ ಕ್ರಿಕೆಟ್‌ನಿಂದ ದೂರ ಉಳಿದಿದ್ದಾರೆ. ಧೋನಿ ಆಯ್ಕೆ ಕುರಿತು ಹಿಂದಿನ ಆಯ್ಕೆ ಸಮಿತಿ ಗೊಂದಲದ ಹೇಳಿಕೆ ನೀಡಿತ್ತು. ಬಳಿಕ ಐಪಿಎಲ್ ಪ್ರದರ್ಶನದ ಮೇಲೆ ಧೋನಿ ಆಯ್ಕೆ ನಡೆಸಲಾಗುತ್ತೆ ಎಂದಿತ್ತು. ಇದೀಗ ಐಪಿಎಲ್ ನಡೆಯೋದೇ ಅನುಮಾನವಾಗಿದೆ.

ಇವರೇ ನೋಡಿ ಸಾರ್ವಕಾಲಿಕ ಟಾಪ್ 10 ಮ್ಯಾಚ್ ಫಿನಿಶರ್‌ಗಳು..!

ಐಪಿಎಲ್ ಟೂರ್ನಿ ಆಡದೇ ಧೋನಿ ಟೀಂ ಇಂಡಿಯಾ ಸೇರಿಕೊಳ್ಳುವುದು ಅನುಮಾನ. ಈ ನೋವು ಅಭಿಮಾನಿಗಳನ್ನು ಕಾಡುತ್ತಿದೆ. ಇದರ ಬೆನ್ನಲ್ಲೇ ಮಾಜಿ ನಾಯಕ ಸುನಿಲ್ ಗವಾಸ್ಕರ್ ಹೇಳಿಕೆ ಅಭಿಮಾನಿಗಳಿಗೆ ಮತ್ತಷ್ಟು ನೋವು ತಂದಿದೆ. ಧೋನಿ ಸದ್ದಿಲ್ಲದೆ ವಿದಾಯ ಹೇಳಲಿದ್ದಾರೆ ಎಂದು ಗವಾಸ್ಕರ್ ಹೇಳಿದ್ದಾರೆ.  ಮುಂಬರುವ ಟಿ20 ವಿಶ್ವಕಪ್ ಟೂರ್ನಿಗೆ ಆಯ್ಕೆ ಮಾಡೋ ಭಾರತ ತಂಡದಲ್ಲಿ ಧೋನಿಗೆ ಸ್ಥಾನ ಸಿಗುವುದು ಕಷ್ಟ. ಏಕದಿನದ ಮಾತು ಅಸಾಧ್ಯ. ಹೀಗಾಗಿ ಧೋನಿ ಸದಲ್ಲದೇ ವಿದಾಯ ಹೇಳಲಿದ್ದಾರೆ ಎಂದು ಗವಾಸ್ಕರ್ ಹೇಳಿದ್ದಾರೆ.

ಐಪಿಎಲ್ ರದ್ದಾದರೂ ಶತಕದ ಸಿಡಿಸಿ ಅಬ್ಬರಿಸಿದ ಧೋನಿ!

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಹೊರತು ಪಡಿಸಿದರೆ ಇನ್ಯಾವ ದಿಗ್ಗಜ ಕ್ರಿಕೆಟಿಗರಿಗೂ ವಿದಾಯದ ಪಂದ್ಯ ಅಥವಾ ಉತ್ತಮ ವಿದಾಯ ಸಿಕ್ಕಿಲ್ಲ. ರಾಹುಲ್ ದ್ರಾವಿಡ್, ವಿವಿಎಸ್ ಲಕ್ಷ್ಮಣ್, ಜಹೀರ್ ಖಾನ್, ಯುವರಾಜ್ ಸಿಂಗ್, ವಿರೇಂದ್ರ ಸೆಹ್ವಾಗ್ ಸೇರಿದಂತೆ ಬಹುತೇಕರು ಸದ್ದಿಲ್ಲದೆ ವಿದಾಯ ಹೇಳಿ ಅಭಿಮಾನಿಗಳಿಗೆ ಶಾಕ್ ನೀಡಿದ್ದರು. ಇದೀಗ ಇದೇ ಹಾದಿಯಲ್ಲಿ ಧೋನಿ ಕೂಡ ಮುನ್ನಡೆಯಲಿದ್ದಾರೆ ಅನ್ನೋ ಗವಾಸ್ಕರ್ ಹೇಳಿಕೆ ಅಭಿಮಾನಿಗಳಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.