ಇವರೇ ನೋಡಿ ಸಾರ್ವಕಾಲಿಕ ಟಾಪ್ 10 ಮ್ಯಾಚ್ ಫಿನಿಶರ್‌ಗಳು..!
ಜಂಟಲ್‌ಮ್ಯಾನ್ಸ್ ಕ್ರೀಡೆ ಎನಿಸಿಕೊಂಡಿರುವ ಕ್ರಿಕೆಟ್‌ಗೆ ಜಗತ್ತಿನಾದ್ಯಂತ ಕೋಟ್ಯಾಂತರ ಅಭಿಮಾನಿಗಳಿದ್ದಾರೆ. ಬ್ಯಾಟಿಂಗ್ ವಿಭಾಗವನ್ನು ತೆಗೆದುಕೊಂಡರೆ ಪ್ರತಿಯೊಂದು ಕ್ರಮಾಂಕಕ್ಕೂ ತನ್ನದೇಯಾದ ಮಹತ್ವವಿದೆ.
ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಮ್ಯಾಚ್ ಫಿನಿಶರ್‌ಗಳು ತಂಡದ ಫಲಿತಾಂಶವನ್ನೇ ಬದಲಿಸುವ ಸಾಮರ್ಥ್ಯ ಹೊಂದಿರುತ್ತಾರೆ. ತಂಡದ ಅಗತ್ಯಕ್ಕೆ ಹೊಂದಿಕೊಂಡು ಬ್ಯಾಟ್ ಬೀಸುವ ಇವರು ಕೊನೆಯವರೆಗೂ ನೆಲಕಚ್ಚಿ ಆಡುವ ಮೂಲಕ ಪಂದ್ಯದ ಫಲಿತಾಂಶವನ್ನೇ ಬದಲಿಸುವ ಸಾಮರ್ಥ್ಯ ಹೊಂದಿರುತ್ತಾರೆ. ಜಗತ್ತಿನ ಟಾಪ್ 10 ಮ್ಯಾಚ್ ಫಿನಿಶರ್‌ಗಳ ಪಟ್ಟಿಯನ್ನು ಸುವರ್ಣ ನ್ಯೂಸ್.ಕಾಂ ನಿಮ್ಮ ಮುಂದಿಡುತ್ತಿದೆ.
10. ಜಾವೇದ್ ಮಿಯಾಂದಾದ್: ಪಾಕಿಸ್ತಾನದ ಕೆಚ್ಚೆದೆಯ ಹೋರಾಟಗಾರ, 47 ಬಾರಿ ಮಿಯಾಂದಾದ್ ಪಾಕ್ ತಂಡವನ್ನು ಗೆಲುವಿನ ದಡ ಸೇರಿಸಿದ್ದಾರೆ.
9. ಅಜೇಯ್ ಜಡೇಜಾ: 90ರ ದಶಕದ ಟೀಂ ಇಂಡಿಯಾದ ನಂಬಿಕಸ್ಥ ಬ್ಯಾಟ್ಸ್‌ಮನ್. ಟೀಂ ಇಂಡಿಯಾಗೆ 38 ಬಾರಿ ಜಡೇಜಾ ಗೆಲುವಿನ ಸಿಹಿ ಉಣಿಸಿದ್ದಾರೆ.
8. ಜೋಸ್ ಬಟ್ಲರ್: ಇಂಗ್ಲೆಂಡ್ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್. ಆರಂಭಿಕನಾಗಿ ಹಾಗೆಯೇ ಮ್ಯಾಚ್ ಫಿನಿಶರ್ ಆಗಿ ಸೈ ಎನಿಸಿಕೊಂಡಿದ್ದು, ಇಂಗ್ಲೆಂಡ್ ತಂಡ ಗುರಿ ಬೆನ್ನಟ್ಟಿದ ಸಂದರ್ಭದಲ್ಲಿ ಬಟ್ಲರ್ 42 ಬಾರಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದ್ದಾರೆ.
7.ಆಂಡ್ರೆ ರಸೆಲ್: ಕೆರಿಬಿಯನ್ ತಂಡದ ಉಪಯುಕ್ತ ಆಲ್ರೌಂಡರ್. ತಮ್ಮ ಸ್ಪೋಟಕ ಬ್ಯಾಟಿಂಗ್ ಮೂಲಕ ನೋಡ ನೋಡುತ್ತಿದಂತೆ ಮ್ಯಾಚ್ ಫಿನಿಶ್ ಮಾಡುವ ಸಾಮರ್ಥ್ಯ ರಸೆಲ್‌ಗಿದೆ.
6. ಸುರೇಶ್ ರೈನಾ: ಟೀಂ ಇಂಡಿಯಾದ ಮತ್ತೋರ್ವ ಮಧ್ಯಮ ಕ್ರಮಾಂಕದ ಅತ್ಯಂತ ನಂಬಿಕಸ್ಥ ಬ್ಯಾಟ್ಸ್‌ಮನ್. ಗುರಿ ಬೆನ್ನಟ್ಟುವಾಗ ರೈನಾ 64 ಬಾರಿ ಯಶಸ್ವಿಯಾಗಿ ಟೀಂ ಇಂಡಿಯಾಗೆ ಗೆಲುವು ತಂದಿಟ್ಟಿದ್ದಾರೆ.
5. ಮೈಕೆಲ್ ಹಸ್ಸಿ: ಮಿಸ್ಟರ್ ಕನ್ಸಿಸ್ಟೆಂಟ್ ಪದಕ್ಕೆ ಮತ್ತೊಂದು ಹೆಸರು ಆಸೀಸ್‌ನ ಮಾಜಿ ಕ್ರಿಕೆಟಿಗ ಮೈಕೆಲ್ ಹಸ್ಸಿ ಎನ್ನಬಹುದು. ಹಸ್ಸಿ ಏಕಾಂಗಿಯಾಗಿ 50 ಬಾರಿ ಕಾಂಗರೂ ಪಡೆಗೆ ಗೆಲುವಿನ ಸಿಹಿ ಉಣಬಡಿಸಿದ್ದಾರೆ.
4. ಯುವರಾಜ್ ಸಿಂಗ್: ಟೀಂ ಇಂಡಿಯಾದ ಸವ್ಯಸಾಚಿ. ಟಿ20 ಹಾಗೂ ಏಕದಿನ ವಿಶ್ವಕಪ್ ಗೆಲುವಿನ ರೂವಾರಿ. ಗುರಿ ಬೆನ್ನಟ್ಟು ವೇಳೆ ಯುವಿ 90 ಬಾರಿ ಟೀಂ ಇಂಡಿಯಾ ಗೆಲುವಿನ ನಗೆ ಬೀರುವಂತೆ ಮಾಡಿದ್ದಾರೆ.
3. ಲ್ಯಾನ್ಸ್ ಕ್ಲೂಸ್ನರ್: ಡೆತ್ ಓವರ್‌ನಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡುವ ಮೂಲಕ ಹರಿಣಗಳ ಪಾಲಿಗೆ ಕ್ಲೂಸ್ನರ್ ಆಪತ್ಭಾಂಧವ ಎನಿಸಿಕೊಂಡಿದ್ದರು. 53 ಬಾರಿ ರನ್ ಚೇಸ್ ಮಾಡುವ ವೇಳೆ ದಕ್ಷಿಣ ಆಫ್ರಿಕಾ ತಂಡಕ್ಕೆ ಕ್ಲೂಸ್ನರ್ ಗೆಲುವಿನ ಸಿಹಿ ಉಣಿಸಿದ್ದಾರೆ.
2. ಎಂ. ಎಸ್. ಧೋನಿ: ಆಧುನಿಕ ಕ್ರಿಕೆಟ್‌ನ ಸೂಪರ್‌ಸ್ಟಾರ್ ಮ್ಯಾಚ್ ಫಿನಿಶರ್ ಎಂದರೆ ಅದು ಧೋನಿ ಮಾತ್ರ. 2011 ಏಕದಿನ ವಿಶ್ವಕಪ್ ಫೈನಲ್ ಪಂದ್ಯವನ್ನು ಮರೆಯಲು ಸಾಧ್ಯವೇ? ಧೋನಿ ಬರೋಬ್ಬರಿ 112 ಬಾರಿ ಆಪತ್ಭಾಂದವನಾಗಿ ತಂಡವನ್ನು ಗೆಲುವಿನ ದಡ ಸೇರಿಸಿದ್ದಾರೆ.
1. ಮೈಕೆಲ್ ಬೆವನ್: ಧೋನಿ, ಹಸ್ಸಿ ಮ್ಯಾಚ್ ಫಿನಿಶರ್ ಆಗಿ ಗುರುತಿಸಿಕೊಳ್ಳುವ ಮುನ್ನವೇ ಅತ್ಯಂತ ಯಶಸ್ವಿ ಮ್ಯಾಚ್ ಫಿನಿಶರ್ ಎನಿಸಿಕೊಂಡಿದ್ದು ಆಸ್ಟ್ರೇಲಿಯಾದ ಮೈಕೆಲ್ ಬೆವನ್. ಆಸ್ಟ್ರೇಲಿಯಾ ಪರ 72 ಬಾರಿ ಏಕಾಂಗಿಯಾಗಿ ತಂಡವನ್ನು ಗೆಲುವಿನ ದಡ ಸೇರಿಸಿದ ಕೀರ್ತಿ ಬೆವನ್‌ಗೆ ಸಲ್ಲಿತ್ತದೆ.