ಇಶಾನ್ ಕಿಶನ್, ಸೌತ್ ಆಫ್ರಿಕಾ ಟೂರ್‌ಗೆ ಸೆಲೆಕ್ಟ್ ಆಗಿದ್ದರು. ಆದ್ರೆ ವಿಶ್ರಾಂತಿ ನೆಪವೊಡ್ಡಿ ಆಫ್ರಿಕಾ ಟೂರ್​ನಿಯಿಂದ ಹೊರಗುಳಿದಿದ್ದರು. ಈ ನಡುವೆ ದುಬೈನಲ್ಲಿ ಎಂ ಎಸ್ ಧೋನಿ ಜೊತೆ ಪಾರ್ಟಿ ಮಾಡಿದ್ದ ಇಶಾನ್​​​, ಖಾಸಗಿ ಟಿವಿ ಕ್ವೀಜ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆನಂತರವೂ ಅವರು ಟೀಂ​​ ಆಯ್ಕೆಗೆ ಲಭ್ಯವಿರುವುದಾಗಿ ಬಿಸಿಸಿಐಗೆ ಮಾಹಿತಿಯನ್ನೂ ನೀಡಿಲ್ಲ.

ಬೆಂಗಳೂರು(ಜ.13) ಇಶಾನ್ ಕಿಶನ್ ಅವರ ಇಂಟರ್ ನ್ಯಾಷನಲ್ ಕೆರಿಯರ್ ಕವಲು ದಾರಿ ಹಿಡಿದಿದೆ. ವಯಸ್ಸು ಚಿಕ್ಕದು. ಫಾರ್ಮ್‌ನಲ್ಲಿ ಬೇರೆ ಇದ್ದಾರೆ. ಆದ್ರೂ ಕೆರಿಯರ್ ಯಾಕೆ ಕ್ಲೋಸ್ ಆಗ್ತಿದೆ ಅಂತ ಯೋಚಿಸ್ತಿದ್ದೀರಾ..? ಅವರು ಮಾಡಿದ ಒಂದೇ ಒಂದು ಮಿಸ್ಟೇಕ್, ಇಂದು ಇಶಾನ್​ಗೆ ಸಂಕಷ್ಟ ತಂದೊಡ್ಡಿದೆ.

ಇಂಜುರಿಯಾಗಿಲ್ಲ, ಬ್ಯುಸಿನೂ ಇಲ್ಲ, ರಣಜಿ ಯಾಕಾಡುತ್ತಿಲ್ಲ..?

ಕಳೆದೊಂದು ವರ್ಷದಿಂದ ಟೀಂ ಇಂಡಿಯಾದ ಕಾಯಂ ಮೆಂಬರ್ ಆಗಿದ್ದ ವಿಕೆಟ್​ ಕೀಪರ್ ಕಮ್ ಬ್ಯಾಟರ್​ ಇಶಾನ್ ಕಿಶನ್, ಅಫ್ಘಾನಿಸ್ತಾನ ಟಿ20 ಸಿರೀಸ್‌ಗೆ ಸೆಲೆಕ್ಟ್ ಆಗಿಲ್ಲ. ಅವರು ಆಯ್ಕೆಯಾಗಿಲ್ಲ ಅನ್ನೋ ಸುದ್ದಿ ಹೊರಬೀಳುತ್ತಿದಂತೆ ಅವರ ವಿರುದ್ಧ ಪುಂಖಾನುಪುಂಖವಾಗಿ ವಿವಿಧ ಸ್ಟೋರಿಗಳು ಹೊರಬಂದವು. ಈಗ ಅವರು ಕೋಚ್​ ರಾಹುಲ್ ದ್ರಾವಿಡ್​ ಅವರ ಮಾತನ್ನೇ ಗಾಳಿಗೆ ತೂರಿದ್ದಾರೆ. ಕೋಚ್ ಯಾವ ಲೆಕ್ಕಾ ಅನ್ನೋ ರೀತಿ ವರ್ತಿಸುತ್ತಿದ್ದಾರೆ. ಸದ್ಯ ಅವರ ವರ್ತನೆ ನೋಡುತ್ತಿದ್ದರೆ, ಅವರು ಟೀಂ ಇಂಡಿಯಾಗೆ ಕಮ್‌ಬ್ಯಾಕ್ ಮಾಡೋದು ದುಸ್ತರವಾಗಲಿದೆ.

ಜೂನಿಯರ್​ ಯುವರಾಜ್ ಸಿಂಗ್ ನಮ್ಮ ಶಿವಂ ದುಬೆ.! ಧೋನಿ ಸೈನ್ಯ ಸೇರಿದ ನಂತರ ಬಯಲಾಯ್ತು ಅಸಲಿ ಟ್ಯಾಲೆಂಟ್..!

ರಣಜಿ ಆಡಿ ತಂಡಕ್ಕೆ ಮರಳಬೇಕು ಎಂದಿದ್ದ ದ್ರಾವಿಡ್

ಇಶಾನ್ ಕಿಶನ್, ಸೌತ್ ಆಫ್ರಿಕಾ ಟೂರ್‌ಗೆ ಸೆಲೆಕ್ಟ್ ಆಗಿದ್ದರು. ಆದ್ರೆ ವಿಶ್ರಾಂತಿ ನೆಪವೊಡ್ಡಿ ಆಫ್ರಿಕಾ ಟೂರ್​ನಿಯಿಂದ ಹೊರಗುಳಿದಿದ್ದರು. ಈ ನಡುವೆ ದುಬೈನಲ್ಲಿ ಎಂ ಎಸ್ ಧೋನಿ ಜೊತೆ ಪಾರ್ಟಿ ಮಾಡಿದ್ದ ಇಶಾನ್​​​, ಖಾಸಗಿ ಟಿವಿ ಕ್ವೀಜ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆನಂತರವೂ ಅವರು ಟೀಂ​​ ಆಯ್ಕೆಗೆ ಲಭ್ಯವಿರುವುದಾಗಿ ಬಿಸಿಸಿಐಗೆ ಮಾಹಿತಿಯನ್ನೂ ನೀಡಿಲ್ಲ. ಹಾಗಾಗಿ ಅವರನ್ನ ಅಫ್ಘನ್ ಟಿ20 ಸರಣಿಗೆ ಆಯ್ಕೆ ಮಾಡಿಲ್ಲ. ಈಗ ಅವರು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆಯಾಗಬೇಕಂದ್ರೆ ಕೋಚ್ ದ್ರಾವಿಡ್ ಒಂದು ಕಂಡೀಶನ್ ಹಾಕಿದ್ದಾರೆ.

ಟೀಂ ಇಂಡಿಯಾಗೆ ಕಮ್‌ಬ್ಯಾಕ್‌ ಮಾಡಬೇಕಾದರೆ ಇಶಾನ್‌ ಕಿಶನ್‌ ದೇಶಿ ಕ್ರಿಕೆಟ್‌ ಆಡಬೇಕು. ಭಾರತ ತಂಡಕ್ಕೆ ಮರಳುವ ಮುನ್ನ ಅವರು ರಣಜಿ ಟ್ರೋಫಿ ಟೂರ್ನಿಯಲ್ಲಿ ಆಡಬೇಕು. ನಂತರ ಅವರನ್ನು ತಂಡದ ಆಯ್ಕೆಗೆ ಪರಿಗಣಿಸಲಾಗುವುದು ಎಂದು ಕೋಚ್‌ ರಾಹುಲ್‌ ದ್ರಾವಿಡ್‌ ಹೇಳಿದ್ದಾರೆ.

ಜಾರ್ಖಂಡ್ ಪರ ರಣಜಿ ಆಡ್ತಿಲ್ಲ ಇಶಾನ್​

ನಿನ್ನೆಯಿಂದ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ 2ನೇ ಪಂದ್ಯಗಳು ಆರಂಭವಾಗಿವೆ. ಜಾರ್ಖಂಡ್​ ತಂಡ ಮಹಾರಾಷ್ಟ್ರ ವಿರುದ್ಧ ಆಡ್ತಿದೆ. ಆದ್ರೆ ರಣಜಿ ಟ್ರೋಫಿ ಆಡುವ ಬಗ್ಗೆ ಇಶಾನ್‌ ಕಿಶನ್‌ ಸಂಪರ್ಕ ಮಾಡಿಲ್ಲ ಎಂದು ಜಾರ್ಖಂಡ್‌ ಕ್ರಿಕೆಟ್‌ ಸಂಸ್ಥೆ ಹೇಳಿದೆ. ರಾಜ್ಯ ತಂಡದ ಪರ ಆಡಲು ಅವರು ಯಾವುದೇ ರೀತಿಯಲ್ಲಿ ಯಾರನ್ನೂ ಸಂಪರ್ಕ ಮಾಡಿಲ್ಲ. ಅವರು ಆಡಲು ಬಯಸಿದ್ದೇ ಆದರೆ ತಂಡದ ಆಡುವ 11ರ ಬಳಗಕ್ಕೆ ನೇರ ಪ್ರವೇಶ ಪಡೆಯಲಿದ್ದಾರೆ. ಈ ಬಗ್ಗೆ ಅವರು ನಮಗೆ ಮಾಹಿತಿ ನೀಡಬೇಕಷ್ಟೆ ಎಂದು ಜಾರ್ಖಂಡ್‌ ಕ್ರಿಕೆಟ್‌ ಸಂಸ್ಥೆ ಮಾಹಿತಿ ನೀಡಿದೆ. ಅಲ್ಲಿಗೆ ಅವರು ಯಾಕೋ ರಣಜಿ ಆಡಲು ಆಸಕ್ತಿ ತೋರಿಲ್ಲ ಅನ್ನುವಂತಾಯ್ತು.

Breaking: ಇಂಗ್ಲೆಂಡ್‌ ವಿರುದ್ಧ ಮೊದಲ ಎರಡು ಟೆಸ್ಟ್‌ಗೆ ಭಾರತ ತಂಡ ಪ್ರಕಟ

ಟಿ20 ವಿಶ್ವಕಪ್ ಆಡಲು ಕೀಪರ್ ಸ್ಥಾನಕ್ಕೆ ತೀವ್ರ ಪೈಪೋಟಿ

ಪ್ರತಿಷ್ಠಿತ ಸೌತ್ ಆಫ್ರಿಕಾ ಸರಣಿ ಆಡಿದ್ದರೆ ಇಶಾನ್‌ಗೆ ಈ ಗತಿ ಬರುತ್ತಿರಲಿಲ್ಲ. ಆದ್ರೆ ಅವರು ಮಹತ್ವದ ಆಫ್ರಿಕಾ ಸರಣಿ ವೇಳೆಯೇ ವಿಶ್ರಾಂತಿ ಬಯಸಿದ್ದರು. ಇದು ಟೀಮ್​​ ಇಂಡಿಯಾಗೆ ಆಘಾತವಾಗಿತ್ತು. ಈಗ ತಂಡದ ಆಯ್ಕೆಗೆ ಲಭ್ಯವಿರುವುದಾಗಿ ಮಾಹಿತಿಯನ್ನೂ ನೀಡಿಲ್ಲ. ಹಾಗಾಗಿ ಅಫ್ಘನ್ ಸರಣಿಗೆ ಆಯ್ಕೆಯಾಗಿಲ್ಲ. ರಣಜಿ ಟ್ರೋಫಿ ಪಂದ್ಯ ಆಡಿ ಕಮ್‌ಬ್ಯಾಕ್ ಮಾಡಬೇಕು ಅಂತ ಕೋಚ್ ದ್ರಾವಿಡ್ ಹೇಳಿದ್ರೂ ನಿನ್ನೆಯಿಂದ ಆರಂಭವಾದ 2ನೇ ಮ್ಯಾಚ್​ ಆಡ್ತಿಲ್ಲ. ಅಲ್ಲಿಗೆ ಅವರು ಇಂಗ್ಲೆಂಡ್ ಟೆಸ್ಟ್ ಸರಣಿಯ ಮೊದಲೆರಡು ಪಂದ್ಯಗಳಿಗೂ ಅಯ್ಕೆಯಾಗಿಲ್ಲ. ಇನ್ನು ಟಿ20 ವರ್ಲ್ಡ್‌ಕಪ್‌ಗೆ ಸೆಲೆಕ್ಟ್ ಆಗೋದು ಕನಸಿನ ಮಾತು. ಯಾಕಂದ್ರೆ ವಿಕೆಟ್ ಕೀಪರ್ ಸ್ಥಾನಕ್ಕೆ ಕೆಎಲ್ ರಾಹುಲ್, ಸಂಜು ಸ್ಯಾಮ್ಸನ್, ಜೀತೇಶ್ ಶರ್ಮಾ ಪೈಪೋಟಿ ನಡೆಸ್ತಿದ್ದಾರೆ. ಅಲ್ಲಿಗೆ ರೆಸ್ಟ್​ ಪಡೆದಿದ್ದು ಇಶಾನ್ ಕಿಶನ್ ಕೆರಿಯರ್‌ಗೆ ಮುಳುವಾಗಿದೆ.

ಸ್ಪೋರ್ಟ್ಸ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್