ಜೂನಿಯರ್​ ಯುವರಾಜ್ ಸಿಂಗ್ ನಮ್ಮ ಶಿವಂ ದುಬೆ.! ಧೋನಿ ಸೈನ್ಯ ಸೇರಿದ ನಂತರ ಬಯಲಾಯ್ತು ಅಸಲಿ ಟ್ಯಾಲೆಂಟ್..!

ಭಾರತ 2011ರ ಏಕದಿನ ವಿಶ್ವಕಪ್ ಹೀರೋ. ಈ ಪಂಜಾಬ್ ಪುತ್ತರ್ ಕ್ರಿಕೆಟ್​ಗೆ ಗುಡ್​ ಬೈ ಹೇಳಿ ವರ್ಷಗಳೇ ಕಳೆದಿವೆ. ಆದ್ರೆ, ಟೀಮ್ ಇಂಡಿಯಾದಲ್ಲಿ ಅವ್ರ ಸ್ಥಾನ ತುಂಬಬಲ್ಲ ಮತ್ತೊಬ್ಬ ಆಟಗಾರ ಸಿಕ್ಕಿಲ್ಲ. ಯುವಿಯಂತ ಬ್ಯಾಟರ್ ತಂಡದಲ್ಲಿದ್ರೆ, ಏಕದಿನ ವಿಶ್ವಕಪ್​ ಫೈನಲ್​ನಲ್ಲಿ ರೋಹಿತ್ ಪಡೆ ಆಸೀಸ್​ಗೆ ಶರಣಾಗ್ತಿರಲಿಲ್ಲ.

Team India Cricketer Shivam Dube a mini Yuvraj Singh More than just a resemblance kvn

ಬೆಂಗಳೂರು(ಜ.13) ಈ ಆಟಗಾರ ಕ್ರಿಕೆಟ್​ಗೆ ಗುಡ್​ ಬೈ ಹೇಳಿ ವರ್ಷಗಳೇ ಕಳೆದಿವೆ. ಆದ್ರೆ, ಟೀಮ್ ಇಂಡಿಯಾಗೆ ಅವ್ರ ಸ್ಥಾನ ತುಂಬಬಲ್ಲ ಮತ್ತೊಬ್ಬ ಆಟಗಾರ ಸಿಕ್ಕಿಲ್ಲ. ಆದ್ರೆ, ಈ ಮುಂಬೈಕರ್​ ಆ ಆಟಗಾರನ ರಿಪ್ಲೇಸ್ ಮಾಡೋ ಭರವಸೆ ಹುಟ್ಟಿಸಿದ್ದಾನೆ. ಅಪ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ತಮ್ಮ ತಾಕತ್ತು ಪ್ರೂವ್​ ಮಾಡಿದ್ದಾನೆ. ಯಾರು ಆ ಆಟಗಾರ..? ಏನ್ ಕಥೆ ಅಂತೀರಾ..? ಈ ಸ್ಟೋರಿ ನೋಡಿ...!  

ಬ್ಯಾಟಿಂಗ್ & ಬೌಲಿಂಗ್ ಎರಡರಲ್ಲೂ ಸೂಪರ್..! 

ಯುವರಾಜ್ ಸಿಂಗ್..! ಭಾರತ 2011ರ ಏಕದಿನ ವಿಶ್ವಕಪ್ ಹೀರೋ. ಈ ಪಂಜಾಬ್ ಪುತ್ತರ್ ಕ್ರಿಕೆಟ್​ಗೆ ಗುಡ್​ ಬೈ ಹೇಳಿ ವರ್ಷಗಳೇ ಕಳೆದಿವೆ. ಆದ್ರೆ, ಟೀಮ್ ಇಂಡಿಯಾದಲ್ಲಿ ಅವ್ರ ಸ್ಥಾನ ತುಂಬಬಲ್ಲ ಮತ್ತೊಬ್ಬ ಆಟಗಾರ ಸಿಕ್ಕಿಲ್ಲ. ಯುವಿಯಂತ ಬ್ಯಾಟರ್ ತಂಡದಲ್ಲಿದ್ರೆ, ಏಕದಿನ ವಿಶ್ವಕಪ್​ ಫೈನಲ್​ನಲ್ಲಿ ರೋಹಿತ್ ಪಡೆ ಆಸೀಸ್​ಗೆ ಶರಣಾಗ್ತಿರಲಿಲ್ಲ. 

ಹೌದು, ಯುವಿ ಟೀಂ ಇಂಡಿಯಾ ಮಿಡಲ್ ಆರ್ಡರ್​ ಬ್ಯಾಟಿಂಗ್​ನ ಸ್ಟ್ರಾಂಗ್ ವೆಪೆನ್ ಆಗಿದ್ರು. ಅದರಲ್ಲೂ ನಾಕೌಟ್​ ಮ್ಯಾಚ್​ಗಳಲ್ಲಿ ಅಸಲಿ ಮ್ಯಾಚ್ ವಿನ್ನರ್ ಆಗಿದ್ರು. ಯುವಿಯಂತ ಮ್ಯಾಚ್ ಫಿನಿಶರ್ ತಂಡಕ್ಕೆ ಬೇಕಾಗಿದೆ. ​ಸದ್ಯ ಶಿವಂ ದುಬೆಗೆ ಆ ಎಲ್ಲಾ ಅರ್ಹತೆಯಿದೆ. ಅಪ್ಘಾನಿಸ್ತಾನ ವಿರುದ್ಧದ ಮೊದಲ T20ಯಲ್ಲಿ ಶಿವಂ ದುಬೆಯ ಆಟವೇ ಆದಕ್ಕೆ ಸಾಕ್ಷಿ.!

ವಿ ಕೌಶಿಕ್ ಮ್ಯಾಜಿಕ್: ಮೊದಲ ದಿನವೇ ಕರ್ನಾಟಕ ಎದುರು ಗುಜರಾತ್ ಆಲೌಟ್

ಯೆಸ್, ಯುವಿನ ರಿಪ್ಲೇಸ್ ಮಾಡೋ ತಾಕತ್ತು ಈ ಮುಂಬೈಕರ್​ಗಿದೆ ಅಂದ್ರೆ ತಪ್ಪಿಲ್ಲ. ದುಬೆಯ ಬ್ಯಾಟಿಂಗ್ ಶೈಲಿಯು, ಯುವಿಯ ಬ್ಯಾಟಿಂಗ್​ನ​ ನೆನಪಿಸುತ್ತೆ.   ದುಬೆಯನ್ನ ಜೂನಿಯರ್​ ಯುವರಾಜ್ ಸಿಂಗ್ ಅಂತ ಫ್ಯಾನ್ಸ್ ಕರೀತಿದ್ದಾರೆ. ಮೊನ್ನೆಯ ಪಂದ್ಯದಲ್ಲಿ 4ನೇ ಕ್ರಮಾಂಕದಲ್ಲಿ ಫೀಲ್ಡಿಗಿಳಿದ ದುಬೆ, ಸಂಕಷ್ಟದ ಸಮಯದಲ್ಲಿ ತಂಡಕ್ಕೆ ಆಸರೆಯಾದ್ರು. 40 ಎಸೆತಗಳಲ್ಲಿ 5 ಫೋರ್ ಮತ್ತು 2 ಭರ್ಜರಿ ಸಿಕ್ಸರ್ ಸಹಿತ 60 ರನ್​ಗಳಿಸಿದ್ರು. ಕೊನೆವರೆಗೂ ಕ್ರೀಸ್​ನಲ್ಲಿ ನಿಂತು ತಂಡಕ್ಕೆ ಭರ್ಜರಿ ಗೆಲುವು ತಂದುಕೊಟ್ರು. 

ಬ್ಯಾಟಿಂಗ್​ ಅಷ್ಟೇ ಅಲ್ಲ, ಬೌಲಿಂಗ್‌ನಲ್ಲೂ ದುಬೆ ಮಿಂಚಿದ್ರು. 2 ಓವರ್​​​​ ಬೌಲಿಂಗ್ ಮಾಡಿ 9 ರನ್​ ನೀಡಿ ಒಂದು ವಿಕೆಟ್​​ ಪಡೆದುಕೊಂಡ್ರು. ಯುವರಾಜ್ ಸಿಂಗ್​ ಕೂಡ ನಂಬರ್​ ಫೋರ್​ನಲ್ಲೇ ಬ್ಯಾಟಿಂಗ್ ಮಾಡ್ತಿದ್ರು. ಅಲ್ಲದೇ, 6ನೇ ಬೌಲರ್​ ಆಗಿ ಕ್ಯಾಪ್ಟನ್ ಚಿಂತೆಯನ್ನ ಕಡಿಮೆ ಮಾಡ್ತಿದ್ರು. ಅಲ್ಲದೇ ಹಲವು ಬಾರಿ ಅದ್ಭುತ ಬೌಲಿಂಗ್ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟಿದ್ರು. 2011ರ ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ 15 ವಿಕಟ್​ ಬೇಟೆಯಾಡಿದ್ರು. ಆದ್ರೆ, ಯುವಿ ಎಡಗೈ ಸ್ಪಿನ್ನರ್​ ಆಗಿದ್ರು, ದುಬೆ ಬಲಗೈ ಮೀಡಿಯಮ್ ಫಾಸ್ಟ್ ಬೌಲರ್ ಅನ್ನೋದಷ್ಟೇ ವ್ಯತ್ಯಾಸ.! 

Breaking: ಇಂಗ್ಲೆಂಡ್‌ ವಿರುದ್ಧ ಮೊದಲ ಎರಡು ಟೆಸ್ಟ್‌ಗೆ ಭಾರತ ತಂಡ ಪ್ರಕಟ

ಧೋನಿ ಸೈನ್ಯ ಸೇರಿದ ನಂತರ ಬಯಲಾಯ್ತು ಅಸಲಿ ಟ್ಯಾಲೆಂಟ್..!

ಯೆಸ್, ದೇಶಿಯ ಕ್ರಿಕೆಟ್​ನಲ್ಲಿ ಮುಂಬೈ ಪರ ದುಬೆ ಬ್ಯಾಟ್ ಬೀಸ್ತಿದ್ದಾರೆ. ಇನ್ನು IPL​ನಲ್ಲಿ RCB ಪರ ಕರಿಯರ್ ಆರಂಭಿಸಿ, 2022ರ ಸೀಸನ್​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಕ್ಯಾಂಪ್ ಸೇರಿದ್ರು. ಧೋನಿ ಸೈನ್ಯ ಸೇರಿದ ನಂತರ ದುಬೆಯ ರಿಯಲ್ ಟ್ಯಾಲೆಂಟ್ ಬಯಲಾಯ್ತು. ಕಳೆದ ಸೀಸನ್​ನಲ್ಲಿ ದುಬೆ 158ರ ಸ್ಟ್ರೈಕ್​ರೇಟ್​ನಲ್ಲಿ  418 ರನ್ ಸಿಡಿಸಿದ್ರು. ದುಬೆ ತಾಕತ್ತಿಗೆ ಧೋನಿ ಫಿದಾ ಆಗಿದ್ದಾರೆ. ಆಪ್ಘಾನ್ ವಿರುದ್ಧದ ಪಂದ್ಯದ ನಂತರ ದುಬೆ ತಮ್ಮ ಯಶಸ್ಸಿನಲ್ಲಿ ಧೋನಿಗೂ ಪಾಲು ನೀಡಿದ್ರು. 

ಹಾರ್ದಿಕ್​ ಪಾಂಡ್ಯಗೆ ಟಫ್ ಕಾಂಪಿಟೇಟರ್..!

ಹೌದು, ಇಂಜುರಿಯಿಂದಾಗಿ ಹಾರ್ದಿಕ್ ಪಾಂಡ್ಯ ತಂಡದಿಂದ ಹೊರ ಗುಳಿದಿದ್ದಾರೆ. ಇದೇ ಕಾರಣಕ್ಕೆ ಫಾಸ್ಟ್​ ಬೌಲಿಂಗ್ ಆಲ್​ರೌಂಡರ್ ರೂಪದಲ್ಲಿ ದುಬೆಗೆ ತಂಡದಲ್ಲಿ ಅವಕಾಶ ಸಿಕ್ಕಿದೆ. ಮುಂದಿನ ಪಂದ್ಯಗಳಲ್ಲೂ ಇದೇ ರೀತಿ ಮಿಂಚಿದ್ರೆ, ಹಾರ್ದಿಕ್ ಪಾಂಡ್ಯಗೆ ಪರ್ಯಾವಾಗಿ ದುಬೆ  ಬೆಳೆದ್ರು ಅಚ್ಚರಿ ಇಲ್ಲ.

ಸ್ಪೋರ್ಟ್ಸ್​ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್ 
 

Latest Videos
Follow Us:
Download App:
  • android
  • ios