3.80 ಕೋಟಿ ರುಪಾಯಿ ವಾಚ್ ತೊಟ್ಟು ಫೋಸ್ ಕೊಟ್ಟ ಹಾರ್ದಿಕ್ ಪಾಂಡ್ಯ..! ಈ ವಾಚ್ ವಿಶೇಷತೆಗಳೇನು?
ದುಬಾರಿ ವಾಚ್‌ನೊಂದಿಗೆ ಪೋಸ್ ಕೊಟ್ಟ ಹಾರ್ದಿಕ್ ಪಾಂಡ್ಯ
ಹಾರ್ದಿಕ್ ಪಾಂಡ್ಯ ಬಳಿ ಇರುವ ವಾಚ್ ಬೆಲೆ ಬರೋಬ್ಬರಿ 3.80 ಕೋಟಿ ರುಪಾಯಿ
ಹಾರ್ದಿಕ್ ಪಾಂಡ್ಯ ಬಳಿ ಇರುವ ವಾಚ್ ವಿಶೇಷತೆ ಏನು?
ಬೆಂಗಳೂರು(ಜೂ.23): 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಮುಕ್ತಾಯದ ಬಳಿಕ ಟೀಂ ಇಂಡಿಯಾ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಬಿಡುವಿನ ಸಮಯವನ್ನು ಪತ್ನಿ ನತಾಶಾ ಸ್ಟಾಂಕೋವಿಚ್ ಜತೆ ಭರ್ಜರಿಯಾಗಿಯೇ ಎಂಜಾಯ್ ಮಾಡುತ್ತಿದ್ದಾರೆ. ಥಾಯ್ಲೆಂಡ್‌ನ ಪುಕೆಟ್‌ನಲ್ಲಿ ತಮ್ಮ ಕುಟುಂಬದ ಜತೆ ಪಾಂಡ್ಯ ರಜಾ ದಿನಗಳನ್ನು ಎಂಜಾಯ್ ಮಾಡುತ್ತಿದ್ದಾರೆ. ಇದೀಗ ಹಾರ್ದಿಕ್ ಪಾಂಡ್ಯ, ಬರೋಬ್ಬರಿ 3.80 ಕೋಟಿ ರುಪಾಯಿ ಮೌಲ್ಯದ NAUTILUS WHITE GOLD PHOENIX ವಾಚ್ ತೊಟ್ಟುಗಮನ ಸೆಳೆದಿದ್ದಾರೆ.
29 ವರ್ಷದ ಹಾರ್ದಿಕ್ ಪಾಂಡ್ಯ(Hardik Pandya), ಆಧುನಿಕ ಕ್ರಿಕೆಟ್‌ನ ಸ್ಟೈಲೀಷ್ ಕ್ರಿಕೆಟಿಗನಾಗಿ ಗುರುತಿಸಿಕೊಂಡಿದ್ದಾರೆ. ಮೈದಾನಕ್ಕಿಳಿದರೆ ಬ್ಯಾಟಿಂಗ್‌ನಲ್ಲಿ ಚೆಂಡನ್ನು ಬೌಂಡರಿ, ಸಿಕ್ಸರ್‌ಗಟ್ಟುವ ಅಭಿಮಾನಿಗಳನ್ನು ರಂಜಿಸುವ ಹಾರ್ದಿಕ್ ಪಾಂಡ್ಯ, ಬೌಲಿಂಗ್‌ನಲ್ಲಿ ಕೂಡಾ ಮಾರಕ ದಾಳಿ ನಡೆಸುವ ಮೂಲಕ ಮಿಂಚುತ್ತಿದ್ದಾರೆ. ಇನ್ನು ಮೈದಾನದಾಚೆಗೆ ಶೋಕಿ ಜೀವನ ನಡೆಸುವ ಹಾರ್ದಿಕ್ ಪಾಂಡ್ಯ ಬಳಿ ಸಾಕಷ್ಟು ದುಬಾರಿ ವಾಚ್ ಕಲೆಕ್ಷನ್‌ಗಳಿವೆ. ಇದೀಗ ಹಾರ್ದಿಕ್ ಪಾಂಡ್ಯ NAUTILUS WHITE GOLD PHOENIX ವಾಚ್ ತೊಟ್ಟು ಗಮನ ಸೆಳೆದಿದ್ದಾರೆ. ಅಷ್ಟಕ್ಕೂ ಈ ವಾಚ್‌ನ ವಿಶೇಷತೆ ಏನು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
Ashes 2023 ನಾವು ಮತ್ತಷ್ಟು ಆಕ್ರಮಣಕಾರಿ ಆಟ ಆಡ್ತೇವೆ; ಕಾಂಗರೂ ಪಡೆಗೆ ಮೆಕ್ಕಲಂ ಎಚ್ಚರಿಕೆ
ನಾಟಿಲಸ್ ವೈಟ್ ಗೋಲ್ಡ್ ಫೀನಿಕ್ಸ್ ವಾಚ್ ಬೆಲೆ: 3.80 ಕೋಟಿ ರುಪಾಯಿಗಳು
ಅತ್ಯಂತ ಅಪರೂಪದ ಮತ್ತು ಸುಂದರವಾದ ನಾಟಿಲಸ್ ಫೀನಿಕ್ಸ್ 18K ವೈಟ್ ಗೋಲ್ಡ್ ಕೇಸ್ ಅನ್ನು ವಜ್ರಗಳಿಂದ ಮುಚ್ಚಲಾಗಿದೆ ಮತ್ತು ಅದರ ಮೇಲೆ ಕೈಯಿಂದ ಚಿತ್ರಿಸಿದ ಫೀನಿಕ್ಸ್ ಎನಾಮೆಲ್ ಡಯಲ್ ಅನ್ನು ಒಳಗೊಂಡಿದೆ. ಇದೊಂದು ಅದ್ಭುತವಾದ ಸೃಷ್ಟಿಯಾಗಿದ್ದು, ವಾಚಿನ ಸುತ್ತ ಹೊಳೆಯುವ ವಜ್ರದ ಹರಳುಗಳನ್ನು ಅಲಂಕರಿಸಲಾಗಿದೆ. ಇದೊಂದು ಅಪರೂಪದ ವಾಚ್ ಆಗಿದ್ದು, ಸುಮಾರು 50 ಮೀಟರ್‌ವರೆಗೂ ನೀರು ನಿರೋಧಕವಾದ ವಾಚ್ ಅಗಿದೆ.
ಇನ್ನು ಹಾರ್ದಿಕ್ ಪಾಂಡ್ಯ ಕ್ರಿಕೆಟ್ ವಿಚಾರಕ್ಕೆ ಬರುವುದಾದರೇ ಕಳೆದ ತಿಂಗಳು ಮುಕ್ತಾಯವಾದ 2023ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಟೂರ್ನಿಯಲ್ಲಿ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟಾನ್ಸ್ (Gujarat Titans) ತಂಡವು ಸತತ ಎರಡನೇ ಬಾರಿಗೆ ಫೈನಲ್ ಪ್ರವೇಶಿಸಿತ್ತು. ಆದರೆ ಫೈನಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮುಗ್ಗರಿಸುವ ಮೂಲಕ ಹಾರ್ದಿಕ್ ಪಾಂಡ್ಯ ಪಡೆ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಇನ್ನು ಇದಾದ ಬಳಿಕ ಇಂಗ್ಲೆಂಡ್‌ನಲ್ಲಿ ನಡೆದ ಎರಡನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ (WTC Final) ಹಾರ್ದಿಕ್ ಪಾಂಡ್ಯ, ಭಾರತ ತಂಡದಲ್ಲಿ ಸ್ಥಾನ ಪಡೆದಿರಲಿಲ್ಲ. ಹಾರ್ದಿಕ್ ಪಾಂಡ್ಯ 2018ರಿಂದೀಚೆಗೆ ಇದುವರೆಗೂ ಯಾವುದೇ ಟೆಸ್ಟ್ ಪಂದ್ಯವನ್ನಾಡಿಲ್ಲ. ಹಾರ್ದಿಕ್ ಪಾಂಡ್ಯ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ತಮ್ಮದೇ ಆದ ಛಾಪು ಮೂಡಿಸುತ್ತಾ ಬಂದಿದ್ದಾರೆ. ಸದ್ಯ ರೋಹಿತ್ ಶರ್ಮಾ (Rohit Sharma) ಅನುಪಸ್ಥಿತಿಯಲ್ಲಿ ಹಾರ್ದಿಕ್ ಪಾಂಡ್ಯ ಭಾರತ ಟಿ20 ತಂಡವನ್ನು ನಾಯಕನಾಗಿ ಮುನ್ನಡೆಸುತ್ತಾ ಬಂದಿದ್ದು, ಪಾಂಡ್ಯ ಅವರೇ ಟೀಂ ಇಂಡಿಯಾದ ಭವಿಷ್ಯ ಸೀಮಿತ ಓವರ್‌ಗಳ ಕ್ರಿಕೆಟ್ ತಂಡದ ನಾಯಕ ಎಂದು ಬಿಂಬಿಸಲಾಗುತ್ತಿದೆ.
ಮುಂಬರುವ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಿನಲ್ಲಿ ಭಾರತದಲ್ಲೇ ಬಹುನಿರೀಕ್ಷಿತ ಐಸಿಸಿ ಏಕದಿನ ವಿಶ್ವಕಪ್ ಫೈನಲ್ (ICC ODI World Cup 2023) ಪಂದ್ಯವು ಜರುಗಲಿದ್ದು, ಹಾರ್ದಿಕ್ ಪಾಂಡ್ಯ ಆಲ್ರೌಂಡರ್ ವಿಭಾಗದಲ್ಲಿ ಅಮೋಘ ಪ್ರದರ್ಶನ ತೋರುವ ವಿಶ್ವಾಸದಲ್ಲಿದ್ದಾರೆ. ಪಾಂಡ್ಯ ಒಳ್ಳೆಯ ಮ್ಯಾಚ್ ಫಿನಿಶರ್ ಆಗಿ ಗುರುತಿಸಿಕೊಂಡಿದ್ದು, ಬೌಲಿಂಗ್‌ನಲ್ಲೂ ತಂಡಕ್ಕೆ ಉಪಯುಕ್ತ ರನ್ ಕಾಣಿಕೆ ನೀಡುವ ಸಾಮರ್ಥ್ಯ ಹೊಂದಿದ್ದಾರೆ.