* ಹರ್ಭಜನ್ ಸಿಂಗ್ ಅಭಿಮಾನಿಗಳ ಪಾಲಿಗೆ ಗುಡ್‌ ನ್ಯೂಸ್‌* ಭಜ್ಜಿ ಕುಟುಂಬಕ್ಕೆ ಹೊಸ ಅತಿಥಿಯ ಆಗಮನ* ಗಂಡು ಮಗುವಿಗೆ ಜನ್ಮವಿತ್ತ ಗೀತಾ ಬಸ್ರಾ

ನವದೆಹಲಿ(ಜು.10): ಟೀಂ ಇಂಡಿಯಾ ಅನುಭವಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಅವರ ಪತ್ನಿ ಗೀತಾ ಬಸ್ರಾ ಇಂದು(ಜು.10) ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಹರ್ಭಜನ್‌ ಸಿಂಗ್ ಟ್ವೀಟ್‌ ಮೂಲಕ ಈ ಸಿಹಿಸುದ್ದಿಯನ್ನು ಹಂಚಿಕೊಂಡಿದ್ದಾರೆ

ಹರ್ಭಜನ್ ಸಿಂಗ್‌ ದಂಪತಿಗೆ 2016ರ ಜುಲೈನಲ್ಲಿ ಹೆಣ್ಣು ಮಗುವನ್ನು ಸ್ವಾಗತಿಸಿದ್ದರು. ಭಜ್ಜಿ ದಂಪತಿ ಮೊದಲ ಮಗುವಿಗೆ ಹಿನಯಾ ಎಂದು ಹೆಸರಿಟ್ಟಿದ್ದಾರೆ. ಇದೀಗ ಗಂಡು ಮಗುವಿನ ಜನನದೊಂದಿಗೆ ಹರ್ಭಜನ್ ಸಿಂಗ್ ದಂಪತಿ ಹೊಸ ಅತಿಥಿಯನ್ನು ತಮ್ಮ ಕುಟುಂಬಕ್ಕೆ ಸ್ವಾಗತಿಸಿದ್ದಾರೆ.

Scroll to load tweet…

ಟೀಂ ಇಂಡಿಯಾ ಅನುಭವಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಅಕ್ಟೋಬರ್ 29, 2015ರಲ್ಲಿ ನಟಿ ಗೀತಾ ಬಸ್ರಾ ಅವರನ್ನು ಪಂಜಾಬ್‌ನ ಜಲಂದರ್‌ನಲ್ಲಿ ವಿವಾಹವಾಗಿದ್ದರು. ಗೀತಾ ಬಸ್ರಾ ಇಮ್ರಾನ್ ಹಶ್ಮಿ ಅಭಿನಯದ 'ದಿಲ್‌ ದಿಯಾ ಹೈ' ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದರು. 'ದಿಲ್‌ ದಿಯಾ ಹೈ' ಚಿತ್ರವು 2006ರಲ್ಲಿ ತೆರೆ ಕಂಡಿತ್ತು.

ಲಿಟ್ಲ್‌ ಮಾಸ್ಟರ್‌ ಸುನಿಲ್‌ ಗವಾಸ್ಕರ್‌ಗೆ 72ರ ಹುಟ್ಟುಹಬ್ಬದ ಸಂಭ್ರಮ

ಟೆಸ್ಟ್ ಕ್ರಿಕೆಟ್‌ನಲ್ಲಿ ಹ್ಯಾಟ್ರಿಕ್‌ ವಿಕೆಟ್‌ ಕಬಳಿಸಿದ ಭಾರತದ ಮೊದಲ ಬೌಲರ್ ಎನ್ನುವ ಹಿರಿಮೆ ಹರ್ಭಜನ್ ಸಿಂಗ್ ಅವರ ಹೆಸರಿನಲ್ಲಿದೆ. ಭಾರತ ಗೆದ್ದ ಚೊಚ್ಚಲ ಟಿ20 ವಿಶ್ವಕಪ್ ಹಾಗೂ 2011ರ ಏಕದಿನ ವಿಶ್ವಕಪ್ ಗೆಲುವಿನಲ್ಲಿ ಹರ್ಭಜನ್‌ ಸಿಂಗ್ ಪ್ರಮುಖ ಪಾತ್ರವಹಿಸಿದ್ದರು. 2016ರಲ್ಲಿ ಕೊನೆಯ ಬಾರಿಗೆ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿದ್ದ ಭಜ್ಜಿ ಸದ್ಯ ಐಪಿಎಲ್‌ನಲ್ಲಿ ಕೋಲ್ಕತ ನೈಟ್‌ ರೈಡರ್ಸ್ ತಂಡದ ಪರ ಗುರುತಿಸಿಕೊಂಡಿದ್ದಾರೆ.