Asianet Suvarna News Asianet Suvarna News

ಟೀಮ್‌ ಇಂಡಿಯಾ ಕ್ರಿಕೆಟರ್‌ ತಂದೆಗೆ ಬ್ರೇನ್‌ ಸ್ಟ್ರೋಕ್‌, ಸ್ಥಿತಿ ಗಂಭೀರ!

ಟೀಮ್‌ ಇಂಡಿಯಾ ಕ್ರಿಕೆಟಿಗನ ತಂದೆಗೆ ಮಂಗಳವಾರ ಬ್ರೇನ್‌ ಸ್ಟ್ರೋಕ್‌ ಆಗಿದ್ದು ಸ್ಥಿತಿ ಗಂಭೀರವಾಗಿದೆ. ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಚಿಕಿತ್ಸೆ ನಡೆಯತ್ತಿದೆ.
 

Team India Cricketer Deepak Chahar Father Lokendra Chahar Suffered Brain Stroke san
Author
First Published Dec 5, 2023, 1:37 PM IST

ನವದೆಹಲಿ (ಡಿ.5): ಟೀಮ್‌ ಇಂಡಿಯಾ ಕ್ರಿಕೆಟಿಗ ಹಾಗೂ ವೇಗದ ಬೌಲರ್‌ ದೀಪಕ್‌ ಚಹರ್‌ ಅವರ ತಂದೆ ಲೋಕೇಂದ್ರ ಚಹರ್‌ ಬ್ರೇನ್‌ ಸ್ಟ್ರೋಕ್‌ ಆಗಿದೆ. ಅವರ ಸ್ಥಿತಿ ಗಂಭೀರವಾಗಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಲಿಗಢದ ಖಾಸಗಿ ಆಸ್ಪತ್ರೆಗೆ ಅವರನ್ನು ದಾಖಲು ಮಾಡಲಾಗಿದೆ. ತಂದೆ ಮೆದುಳು ಪಾರ್ಶ್ವವಾಯುವಿಗೆ ತುತ್ತಾದ ಸುದ್ದಿ ತಿಳಿದ ಬೆನ್ನಲ್ಲಿಯೇ ದೀಪಕ್‌ ಚಹರ್‌ ಭಾರತ ತಂಡವನ್ನು ತೊರೆದು ಊರಿಗೆ ತೆರಳಿದ್ದರು. ಇದರಿಂದಾಗಿ ಭಾನುವಾರ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಐದನೇ ಟಿ20 ಪಂದ್ಯದಲ್ಲಿ ದೀಪಕ್‌ ಚಹರ್‌ ಆಗಿರಲಿಲ್ಲ. ಆಲಿಗಢದ ರಾಮ್‌ಘಾಟ್‌ ರಸ್ತೆಯಲ್ಲಿರುವ ಮಿಥಾರಾಜ್‌ ಆಸ್ಪತ್ರೆಯಲ್ಲಿ ಲೋಕೇಂದ್ರ ಚಹರ್‌ ಚಿಕಿತ್ಸೆ ಪಡೆಯುತ್ತಿದ್ದು, ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾರೆ. ಹಿಂದಿ ಮಾಧ್ಯಮಗಳ ವರದಿಯ ಪ್ರಕಾರ ಅವರು ಗಂಭೀರ ಪ್ರಮಾಣದ ಬ್ರೇನ್‌ ಸ್ಟ್ರೋಕ್‌ಗೆ ತುತ್ತಾಗಿದ್ದಾರೆ ಎನ್ನಲಾಗಿದೆ. ಮದುವೆ ಸಮಾರಂಭದಲ್ಲಿ ಭಾಗವಹಿಸುವ ಸಲುವಾಗಿ ಲೋಕೇಂದ್ರ ಚಹರ್‌ ಇತ್ತೀಚೆಗೆ ಆಲಿಗಢಕ್ಕೆ ಆಗಮಿಸಿದ್ದರು.

ಮದುವೆ ಕಾರ್ಯಕ್ರಮದಲ್ಲಿ ಇರುವಾಗಲೇ ಲೋಕೇಂದ್ರ ಚಹರ್‌ ಅವರ ಆರೋಗ್ಯ ಹದಗೆಟ್ಟಿತ್ತು ಎಂದು ಚಹರ್‌ ಅವರ ಕುಟುಂಬದ ಸದಸ್ಯರಾಗಿರುವ ದೇಶ್‌ರಾಜ್‌ ಚಹರ್‌ ತಿಳಿಸಿದ್ದಾರೆ. ತಂದೆಗೆ ಅನರೋಗ್ಯವಾಗಿರುವ ಸುದ್ದಿ ತಿಳಿಯುತ್ತಿದ್ದಂತೆ ಬೆಂಗಳೂರಿನಲ್ಲಿದ್ದ ದೀಪಕ್‌ ಚಹರ್‌ ತಂಡವನ್ನು ತೊರೆದು ದೆಹಲಿಗೆ ಆಗಮಿಸಿದ್ದರು. ಆ ಬಳಿಕ ಆಲಿಗಢಕ್ಕೆ ರಸ್ತೆ ಮಾರ್ಗವಾಗಿ ಬಂದಿದ್ದಾರೆ. ಈಗಾಗಲೇ ಅವರು ತಂದೆಯೊಂದಿಗೆ ಆಸ್ಪತ್ರೆಯಲ್ಲಿದ್ದಾರೆ ಎಂದು ವರದಿಯಾಗಿದೆ.

IPL ಟೂರ್ನಿಗೂ ಮುನ್ನ ಧೋನಿ ಪಡೆಗೆ ಗುಡ್‌ ನ್ಯೂಸ್‌, 14 ಕೋಟಿ ರುಪಾಯಿ ಸ್ಟಾರ್ ಆಟಗಾರ ಕಣಕ್ಕಿಳಿಯಲು ರೆಡಿ..!

ಆಸ್ಪತ್ರೆಯ ಚೇರ್ಮನ್‌ ಡಾ.ರಾಜೇಂದ್ರ ವರ್ಶಾನಿ ಪ್ರಕಾರ, ಟೀಮ್‌ ಇಂಡಿಯಾ ಕ್ರಿಕೆಟಿಗ ದೀಪಕ್‌ ಚಹರ್‌ ಅವರ ತಂದೆಗೆ ಸರಿಯಾದ ಸಮಯದಲ್ಲಿ ಸರಿಯಾದ ಚಿಕಿತ್ಸೆ ಸಿಕ್ಕಿದೆ ಎಂದು ಹೇಳಿದ್ದಾರೆ. ಅವರ ಸ್ಥಿತಿಯಲ್ಲಿ ಬಹಳ ಕೊಂಚ ಪ್ರಮಾಣದ ಪ್ರಗತಿ ಸಾಧಿಸಿದ್ದೇವೆ. ಅವರ ಚಿಕಿತ್ಸೆಗಾಗಿ ತಮ್ಮ ಟೀಮ್‌ನ ದೊಡ್ಡ ವೈದ್ಯರನ್ನು ನಿಯೋಜನೆ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

ಬ್ಯೂಸಿನೆಸ್ ಹೆಸ್ರಲ್ಲಿ ಕ್ರಿಕೆಟಿಗ ದೀಪಕ್ ಚಹಾರ್ ಪತ್ನಿಗೆ 10 ಲಕ್ಷ ರೂ ವಂಚನೆ, ಕಂಗಾಲಾದ ಜಯಾ!

Follow Us:
Download App:
  • android
  • ios