ಇಂಗ್ಲೆಂಡ್ ವಿರುದ್ದದ ಸೀಮಿತ ಓವರ್‌ಗಳ ಸರಣಿಯಲ್ಲಿ ಮಿಂಚಿನ ಪ್ರದರ್ಶನ ತೋರಿದ ಭುವನೇಶ್ವರ್ ಐಸಿಸಿ ಮಾರ್ಚ್ ತಿಂಗಳಿಗ ಪ್ರಶಸ್ತಿ ರೇಸ್‌ನಲ್ಲಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ದುಬೈ(ಏ.09): ಐಸಿಸಿ ಹೊಸದಾಗಿ ಪರಿಚಯಿಸಿರುವ ತಿಂಗಳ ಕ್ರಿಕೆಟಿಗ ಪ್ರಶಸ್ತಿ ರೇಸ್‌ನಲ್ಲಿ ಭಾರತ ತಂಡದ ವೇಗಿ ಭುವನೇಶ್ವರ್ ಕುಮಾರ್ ಸ್ಥಾನ ಪಡೆದಿದ್ದಾರೆ. ಮಾರ್ಚ್ ತಿಂಗಳ ಪ್ರಶಸ್ತಿಗೆ ಮೂವರು ಕ್ರಿಕೆಟಿಗರ ನಡುವೆ ಪೈಪೋಟಿ ಇದೆ.
ಆಫ್ಘಾನಿಸ್ತಾದ ರಶೀದ್ ಖಾನ್ ಹಾಗೂ ಜಿಂಬಾಬ್ವೆಯ ಶಾನ್ ವಿಲಿಯಮ್ಸ್, ಭುವನೇಶ್ವರ್‌ಗೆ ಪೈಪೋಟಿ ನೀಡಲಿದ್ದಾರೆ. ಇಂಗ್ಲೆಂಡ್ ವಿರುದ್ಧದ 3 ಏಕದಿನ ಪಂದ್ಯಗಳ ಸರಣಿಯಲ್ಲಿ ಭುವನೇಶ್ವರ್ 6 ವಿಕೆಟ್‌ಗಳನ್ನು ಕಬಳಿಸಿದ್ದರು. 5 ಪಂದ್ಯಗಳ ಟಿ20 ಸರಣಿಯಲ್ಲಿ 6.38ರ ಎಕಾನಮಿ ರೇಟ್‌ನಲ್ಲಿ 4 ವಿಕೆಟ್ ಕಿತ್ತಿದ್ದರು.
ಇಂದಿನಿಂದ ಐಪಿಎಲ್ ಟಿ20 ಕದನ ಶುರು; ಹ್ಯಾಟ್ರಿಕ್ ಟ್ರೋಫಿ ಮೇಲೆ ಮುಂಬೈ ಕಣ್ಣು..!
ಇನ್ನು ಮಹಿಳಾ ವಿಭಾಗದಲ್ಲಿ ಭಾರತದ ರಾಜೇಶ್ವರಿ ಗಾಯಕ್ವಾಡ್, ಪೂನಂ ರಾವತ್ ಹಾಗೂ ದಕ್ಷಿಣ ಆಫ್ರಿಕಾದ ಲೆಜಿಲಿ ಲೀ ತಿಂಗಳ ಶ್ರೇಷ್ಠ ಕ್ರಿಕೆಟರ್ ಪ್ರಶಸ್ತಿಯ ರೇಸ್‌ನಲ್ಲಿದ್ದಾರೆ.
ಆಸ್ಪತ್ರೆಯಿಂದ ಸಚಿನ್ ತೆಂಡುಲ್ಕರ್ ಬಿಡುಗಡೆ
ಮುಂಬೈ: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಕೋವಿಡ್‌ನಿಂದ ಗುಣಮುಖರಾಗಿದ್ದು, ಗುರುವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈ ವಿಷಯವನ್ನು ಸ್ವತಃ ಅವರೇ ಟ್ವೀಟರ್‌ನಲ್ಲಿ ಬಹಿರಂಗಪಡಿಸಿದ್ದು, ಇನ್ನೂ ಕೆಲ ದಿನಗಳ ಕಾಲ ಮನೆಯಲ್ಲೇ ಐಸೋಲೇಷನ್‌ನಲ್ಲಿ ಇರುವುದಾಗಿ ತಿಳಿಸಿದ್ದಾರೆ.
ರಾಯ್‌ಪುರ್‌ನಲ್ಲಿ ನಡೆದಿದ್ದ ರಸ್ತೆ ಸುರಕ್ಷತಾ ವಿಶ್ವ ಸೀರೀಸ್‌ನಲ್ಲಿ ಪಾಲ್ಗೊಂಡಿದ್ದ ಸಚಿನ್‌ಗೆ ಮಾ.27ರಂದು ಕೋವಿಡ್ ಪರೀಕ್ಷಾ ವರದಿ ಪಾಸಿಟಿವ್ ಬಂದಿತ್ತು. ಬಳಿಕ, ಏ.2ರಂದು ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಸಚಿನ್ ಕುಟುಂಬ ಸದಸ್ಯರ ಕೋವಿಡ್ ಪರೀಕ್ಷಾ ವರದಿ ನೆಗೆಟಿವ್ ಬಂದಿತ್ತು.
