ವಿಕೆಟ್‌ ಕೀಪರ್‌ ಸ್ಥಾನಕ್ಕೆ ರಾಹುಲ್‌ ಪರಿಗಣನೆ: ಶಾಸ್ತ್ರಿ!| ಮುಂದುವರೆದ ಎಂ.ಎಸ್‌.ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಭವಿಷ್ಯದ ಗುಟ್ಟು

ನವದೆಹಲಿ[ಡಿ.15]: ಎಂ.ಎಸ್‌.ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಭವಿಷ್ಯದ ಗುಟ್ಟು ಮುಂದುವರಿದಿದ್ದು, ರಿಷಭ್‌ ಪಂತ್‌ ಎಷ್ಟೇ ಅವಕಾಶ ನೀಡಿದರೂ ನಿರೀಕ್ಷೆ ಉಳಿಸಿಕೊಳ್ಳುತ್ತಿಲ್ಲ. ಹೀಗಾಗಿ, 2020ರ ಟಿ20 ವಿಶ್ವಕಪ್‌ಗೆ ಕೆ.ಎಲ್‌.ರಾಹುಲ್‌ರನ್ನು ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಸ್ಥಾನಕ್ಕೆ ಪರಿಗಣಿಸುವ ಸಾಧ್ಯತೆ ಎಂದು ಭಾರತ ತಂಡದ ಪ್ರಧಾನ ಕೋಚ್‌ ರವಿಶಾಸ್ತ್ರಿ ಹೇಳಿದ್ದಾರೆ.

ಶಾಸ್ತ್ರಿ ಹೇಳಿಕೆ ಭಾರತೀಯ ಕ್ರಿಕೆಟ್‌ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಧೋನಿ ಭವಿಷ್ಯದ ಬಗ್ಗೆ ಮಾತನಾಡಿರುವ ಶಾಸ್ತ್ರಿ, ‘ಮಾನಸಿಕವಾಗಿ ಅವರು ದಣಿದಿದ್ದಾರೆ. ಸಹಜವಾಗಿಯೇ ಅವರಿಗೆ ವಿಶ್ರಾಂತಿಯ ಅಗತ್ಯವಿತ್ತು. ಇನ್ಮುಂದೆ ಏಕದಿನ ಕ್ರಿಕೆಟ್‌ನಲ್ಲಿ ಅವರು ಆಡುವುದು ಅನುಮಾನ. ಟಿ20 ತಂಡಕ್ಕೆ ಮರಳಬಹುದು. ಐಪಿಎಲ್‌ನಲ್ಲಿ ಆಡಲಿದ್ದಾರೆ’ ಎಂದರು.