ಕಾರ್ಯಕ್ರಮವನ್ನು ನಿರ್ವಹಣೆ ಮಾಡುತ್ತಿದ್ದ ಮಂದಿರಾ ಬೇಡಿ, ರೋಹಿತ್ ಶರ್ಮಾ ಅವರನ್ನು ಉದ್ದೇಶಿಸಿ, "ಇತ್ತೀಚೆಗೆ ನೀವು ಯಾವ ಸಿನಿಮಾವನ್ನು/ ಶೋ ನೋಡಿದ್ದೀರಾ ಅಥವಾ ನೋಡಬೇಕು ಅಂದುಕೊಂಡಿದ್ದೀರಾ ಎಂದು ಪ್ರಶ್ನಿಸುತ್ತಾರೆ.
ರಾಜ್‌ಕೋಟ್(ಫೆ.12): ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ಇದೀಗ ಇಂಗ್ಲೆಂಡ್ ಎದುರಿನ ಮೂರನೇ ಟೆಸ್ಟ್ ಪಂದ್ಯಕ್ಕೆ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಲು ಸಜ್ಜಾಗಿದ್ದಾರೆ. ಫೆಬ್ರವರಿ 15ರಂದು ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯವು ರಾಜ್‌ಕೋಟ್‌ನಲ್ಲಿ ಆರಂಭವಾಗಲಿದೆ. ರಾಜ್‌ಕೋಟ್‌ಗೆ ವಿಮಾನ ಏರುವ ಮುನ್ನ ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಒಂದು ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ತಾವು ಇತ್ತೀಚೆಗೆ ನೋಡಿದ ಕೊನೆಯ ಸಿನಿಮಾ ಬಗ್ಗೆ ತುಟಿ ಬಿಚ್ಚಿದ್ದಾರೆ.
ಕಾರ್ಯಕ್ರಮವನ್ನು ನಿರ್ವಹಣೆ ಮಾಡುತ್ತಿದ್ದ ಮಂದಿರಾ ಬೇಡಿ, ರೋಹಿತ್ ಶರ್ಮಾ ಅವರನ್ನು ಉದ್ದೇಶಿಸಿ, "ಇತ್ತೀಚೆಗೆ ನೀವು ಯಾವ ಸಿನಿಮಾವನ್ನು/ ಶೋ ನೋಡಿದ್ದೀರಾ ಅಥವಾ ನೋಡಬೇಕು ಅಂದುಕೊಂಡಿದ್ದೀರಾ ಎಂದು ಪ್ರಶ್ನಿಸುತ್ತಾರೆ. ಇದಕ್ಕೆ ಪ್ರತಿಕ್ರಿಯಿಸಿದ ರೋಹಿತ್ ಶರ್ಮಾ, "ನಾನು 12th Fail ಸಿನಿಮಾ ನೋಡಿದೆ" ಎನ್ನುತ್ತಾರೆ. ಆಗ ಮಂದಿರಾ ಬೇಡಿ, "ತುಂಬಾ ಸ್ಪೋರ್ತಿದಾಯಕವಾಗಿದೆ" ಎನ್ನುತ್ತಾರೆ. ಮಂದಿರಾ ಬೇಡಿಯ ಮಾತನ್ನು ಸಮ್ಮತಿಸುತ್ತಾ, "ಹೌದು, ಇದು ನಿಜಕ್ಕೂ ಒಳ್ಳೆಯ ಸಿನಿಮಾ" ಎಂದು ರೋಹಿತ್ ಶರ್ಮಾ ಹೇಳುತ್ತಾರೆ.
ಇಂಗ್ಲೆಂಡ್ ಎದುರಿನ ಕೊನೆಯ 3 ಟೆಸ್ಟ್‌ಗೆ ಟೀಂ ಇಂಡಿಯಾ ಪ್ರಕಟ; ಕೊಹ್ಲಿ, ಅಯ್ಯರ್ ಔಟ್, RCB ಕ್ರಿಕೆಟಿಗನಿಗೆ ಜಾಕ್‌ಪಾಟ್
ಹೀಗಿತ್ತು ನೋಡಿ ಆ ಸಂಭಾಷಣೆ:
12th Fail ಎನ್ನುವ ಹಿಂದಿ ಸಿನಿಮಾವು ಐಎಎಸ್ ಅಧಿಕಾರಿಯೊಬ್ಬರ ಜೀವನಾಧಾರಿತ ಸಿನಿಮಾವಾಗಿದ್ದು, ಎಲ್ಲಾ ವರ್ಗದ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ವಿಷ್ಣು ವಿನೋದ್ ಚೋಪ್ರಾ ನಿರ್ದೇಶನದ 12th Fail ಸಿನಿಮಾದಲ್ಲಿ ವಿಕ್ರಾಂತ್ ಮೆಸ್ಸೆ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. 20 ಕೋಟಿ ಬಜೆಟ್‌ನಲ್ಲಿ ನಿರ್ಮಾಣಗೊಂಡ ಈ ಸಿನಿಮಾ ಜಗತ್ತಿನಾದ್ಯಂತ ಸುಮಾರು 69 ಕೋಟಿ ರುಪಾಯಿಗೂ ಹೆಚ್ಚು ಗಳಿಕೆ ಮಾಡಿಕೊಂಡಿದೆ. ಈ ಸಿನಿಮಾವು 5 ಫಿಲ್ಮ್ ಫೇರ್ ಅವಾರ್ಡ್ ತನ್ನದಾಗಿಸಿಕೊಂಡಿದೆ.
ತೀರಾ ಕಡುಬಡತನದ ಕುಟುಂಬದ ಹುಡಗನೊಬ್ಬ 12ನೇ ತರಗತಿ ಫೇಲ್ ಆದ ಬಳಿಕ, ಸತತ ಪರಿಶ್ರಮದಿಂದ ಓದಿ ಐಎಎಸ್ ಅಧಿಕಾರಿಯಾಗುವ ಕಥಾ ಹಂದರವಿರುವ ಸಿನಿಮಾ ಇದಾಗಿದೆ.
ವಿಶ್ರಾಂತಿ ಮುಗಿಸಿ ಇಂದು ಆಟಗಾರರು ರಾಜ್‌ಕೋಟ್‌ಗೆ
ರಾಜ್‌ಕೋಟ್: 2ನೇ ಟೆಸ್ಟ್ ಬಳಿಕ ಅಗತ್ಯ ವಿಶ್ರಾಂತಿ ಪಡೆದುಕೊಂಡಿರುವ ಟೀಂ ಇಂಡಿಯಾ ಆಟಗಾರರು, ಫೆ.15ರಿಂದ ಆರಂಭಗೊಳ್ಳಲಿರುವ 3ನೇ ಟೆಸ್ಟ್ ಪಂದ್ಯಕ್ಕಾಗಿ ಸೋಮವಾರ ರಾಜ್‌ಕೋಟ್‌ಗೆ ಆಗಮಿಸಲಿದ್ದಾರೆ. ಅತ್ತ ಇಂಗ್ಲೆಂಡ್ ಆಟಗಾರರು ಕೂಡಾ ಅಬುಧಾಬಿಯಿಂದ ಭಾರತಕ್ಕೆ ಬಂದು ಅಭ್ಯಾಸ ಶುರು ಮಾಡಲಿದ್ದಾರೆ.
ಈ ಆಟಗಾರನ ಜತೆ ಫೋಟೋ ಶೇರ್ ಮಾಡಿದ ಸಾನಿಯಾ ಮಿರ್ಜಾ..! ಆ ದಿನಗಳನ್ನು ಮೆಲುಕುಹಾಕಿದ ಮೂಗುತಿ ಸುಂದರಿ
ವಿಶಾಖಪಟ್ಟಣಂನಲ್ಲಿ 2ನೇ ಟೆಸ್ಟ್ ಪಂದ್ಯ ಫೆ.5ಕ್ಕೆ ಕೊನಗೊಂಡಿತ್ತು. 3ನೇ ಟೆಸ್ಟ್‌ಗೆ 10 ದಿನ ಅಂತರ ಇದ್ದಿದ್ದರಿಂದ ಆಟಗಾರರು ವಿಶ್ರಾಂತಿಗಾಗಿ ತಮ್ಮ ತಮ್ಮ ತವರಿಗೆ ತೆರಳಿದ್ದರು. ಸೋಮವಾರ ಎಲ್ಲಾ ಆಟಗಾರರು ರಾಜ್‌ಕೋಟ್‌ನಲ್ಲಿ ಕೂಡಿಕೊಳ್ಳಲಿದ್ದಾರೆ. ಇನ್ನು, ಇಂಗ್ಲೆಂಡ್ ಆಟಗಾರರು 2ನೇ ಟೆಸ್ಟ್ ಬಳಿಕ ಅಬುಧಾಬಿಗೆ ತೆರಳಿದ್ದರು. ಕೆಲ ದಿನಗಳ ವಿಶ್ರಾಂತಿ ಬಳಿಕ ಆಟಗಾರರು ಅಲ್ಲೇ ಅಭ್ಯಾಸ ಆರಂಭಿಸಿದ್ದು, ಸೋಮವಾರ ರಾಜ್‌ಕೋಟ್‌ಗೆ ಆಗಮಿಸಲಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಇಂಗ್ಲೆಂಡ್ ಎದುರಿನ ಕೊನೆಯ 3 ಪಂದ್ಯಕ್ಕೆ ಭಾರತ ತಂಡ ಹೀಗಿದೆ:
ರೋಹಿತ್ ಶರ್ಮಾ(ನಾಯಕ), ಜಸ್ಪ್ರೀತ್ ಬುಮ್ರಾ(ಉಪನಾಯಕ), ಯಶಸ್ವಿ ಜೈಸ್ವಾಲ್, ಶುಭ್‌ಮನ್ ಗಿಲ್, ಕೆ ಎಲ್ ರಾಹುಲ್*, ರಜತ್ ಪಾಟೀದಾರ್, ಸರ್ಫರಾಜ್ ಖಾನ್, ಧೃವ್ ಜುರೆಲ್(ವಿಕೆಟ್ ಕೀಪರ್), ಕೆ ಎಸ್ ಭರತ್(ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ*, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮುಕೇಶ್ ಕುಮಾರ್, ಆಕಾಶ್ ದೀಪ್.
