ಟಿ20 ವಿಶ್ವಕಪ್ ಟೂರ್ನಿಗಾಗಿ ಟೀಂ ಇಂಡಿಯಾ ಆಯ್ಕೆಗೆ ಕಸರತ್ತು ಬಿಸಿಸಿಐ ಪ್ರಕಟಣೆಗಾಗಿ ಅಭಿಮಾನಿಗಳು ಮಾತ್ರವಲ್ಲ ಯುವ ಕ್ರಿಕೆಟಿಗರ ಕಾಯುವಿಕೆ ಟ್ವಿಟರ್ ಸೇರಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ಮೆಮ್ಸ್

ನವದೆಹಲಿ(ಸೆ.08): ಟಿ20 ವಿಶ್ವಕಪ್ ಟೂರ್ನಿಗೆ ತಯಾರಿ ಆರಂಭಗೊಂಡಿದೆ. ಅಕ್ಟೋಬರ್ 17 ರಿಂದ ಟೂರ್ನಿ ಯುಎಇನಲ್ಲಿ ಟೂರ್ನಿ ಆರಂಭಗೊಳ್ಳುತ್ತಿದೆ. ಪಾಕಿಸ್ತಾನ ಸೇರಿದಂತೆ ಹಲವು ಮಂಡಳಿ ಈಗಾಗಲೇ ವಿಶ್ವಕಪ್ ಟೂರ್ನಿಗಾಗಿ ತಂಡ ಪ್ರಕಟಿಸಿದೆ. ಇಂದು(ಸೆ.08) ಬಿಸಿಸಿಐ ಚುಟುಕು ವಿಶ್ವ ಸಮರಕ್ಕೆ ತಂಡ ಪ್ರಕಟಿಸಲಿದೆ. ತಂಡದಲ್ಲಿ ಯಾರು ಸ್ಥಾನ ಪಡೆಯಲಿದ್ದಾರೆ ಅನ್ನೋ ಕುತೂಹಲ ಹೆಚ್ಚಾಗಿದೆ. ಇತ್ತ ಬಿಸಿಸಿಐ ಆಯ್ಕೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮೆಮ್ಸ್ ಹರಿದಾಡುತ್ತಿದೆ. 

ಟಿ20 ವಿಶ್ವಕಪ್‌ಗಿಂದು ಭಾರತ ತಂಡ ಪ್ರಕಟ..! ಯಾರಿಗೆಲ್ಲಾ ಸಿಗಬಹುದು ಚಾನ್ಸ್?

ಟೀಂ ಇಂಡಿಯಾದಲ್ಲಿ ಯುವ ಕ್ರಿಕೆಟಿಗರ ದಂಡೇ ಇದೆ. ಹೀಗಾಗಿ ಬಿಸಿಸಿಐಗೆ ಆಯ್ಕೆ ಅತ್ಯಂತ ಸವಾಲಾಗಿದೆ. ಏಕಕಾಲದಲ್ಲಿ ಒಂದು ತಂಡ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಹಾಗೂ ಮತ್ತೊಂದು ತಂಡ ಶ್ರೀಲಂಕಾದಲ್ಲಿ ನಿಗದಿತ ಓವರ್ ಕ್ರಿಕೆಟ್ ಆಡಿದ ಹೆಗ್ಗಳಿಕೆಗೂ ಟೀಂ ಇಂಡಿಯಾ ಪಾತ್ರವಾಗಿದೆ. ಹೀಗಾಗಿ ಇಂದು ಯಾರು ಸ್ಥಾನ ಪಡಯಲಿದ್ದಾರೆ ಅನ್ನೋ ಕುರಿತ ಮೆಮೆ ಟ್ವಿಟರ್‌ನಲ್ಲಿ ಸಂಚಲ ಸೃಷ್ಟಿಸಿದೆ.

Scroll to load tweet…

ಬಿಸಿಸಿಐ ಮೂಲಗಳ ಪ್ರಕಾರ ಈಗಾಗಲೇ 15 ಸದಸ್ಯರ ತಂಡವನ್ನು ಅಂತಿಮಗೊಳಿಸಲಾಗಿದೆ. ಕೇವಲ ಪ್ರಕಣೆ ಮಾತ್ರ ಬಾಕಿ. ಇದಕ್ಕಾಗಿ ಅಭಿಮಾನಿಗಳು ಹಾಗೂ ಕ್ರಿಕೆಟಿಗರು ಕಾದು ಕಾದು ಸುತ್ತಾದ ಮೆಮ್ಸ್ ಕೂಡ ವೈರಲ್ ಆಗಿದೆ

Scroll to load tweet…
Scroll to load tweet…
Scroll to load tweet…