Asianet Suvarna News Asianet Suvarna News

ಭಾವುಕ ಪತ್ರದೊಂದಿಗೆ ನಿವೃತ್ತಿ ಘೋಷಿಸಿದ Robin Uthappa, ವಿದೇಶಿ ಲೀಗ್‌ನತ್ತ ಚಿತ್ತ!

ಟೀಂ ಇಂಡಿಯಾ ಕ್ರಿಕೆಟಿಗ, ಕನ್ನಡಿಗ ರಾಬಿನ್ ಉತ್ತಪ್ಪ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.

Team India and Karnataka Player Robin Uthappa retires from all form of cricket shares emotional letter ckm
Author
First Published Sep 14, 2022, 7:58 PM IST

ಬೆಂಗಳೂರು(ಸೆ.14):  ಟೀಂ ಇಂಡಿಯಾ ಕ್ರಿಕೆಟಿಗ, ಕನ್ನಡಿಗ ರಾಬಿನ್ ಉತ್ತಪ್ಪ ಎಲ್ಲಾ ಮಾದರಿ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. 2006ರಲ್ಲಿ ಅಂತಾರಾಷ್ಟ್ರೀಯ ಪಂದ್ಯಕ್ಕೆ ಪದಾರ್ಪಣೆ ಮಾಡಿದ ಕೊಡಗಿನ ವೀರ ರಾಬಿನ್ ಉತ್ತಪ್ಪ, ಸ್ಫೋಟಕ ಬ್ಯಾಟ್ಸ್‌ಮನ್ ಆಗಿ ವಿಕೆಟ್ ಕೀಪರ್ ಆಗಿ ಟೀಂ ಇಂಡಿಯಾದಲ್ಲಿ ಮಿಂಚಿದ್ದರು. 2007ರ ಟಿ20 ವಿಶ್ವಕಪ್ ಚಾಂಪಿಯನ್ ತಂಡದ ಭಾಗವಾಗಿದ್ದ ರಾಬಿನ್ ಉತ್ತಪ್ಪ, ಭಾರತದ ಹಲವು ಐತಿಹಾಸಿಕ ಗೆಲುವುಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. 2015ರ ಬಳಿಕ ಟೀಂ ಇಂಡಿಯಾದಲ್ಲಿ ಅವಕಾಶ ವಂಚಿತರಾಗಿದ್ದ ರಾಬಿನ್ ಉತ್ತಪ್ಪ, ಐಪಿಎಲ್ ಹಾಗೂ ರಣಜಿ ಕ್ರಿಕೆಟ್‌ನಲ್ಲಿ ಸಕ್ರಿಯರಾಗಿದ್ದರು.  ಎಲ್ಲಾ ಮಾದರಿ ಕ್ರಿಕೆಟ್‌ನಿಂದ ವಿದಾಯ ಘೋಷಿಸಿದ ರಾಬಿನ್ ಉತ್ತಪ್ಪ, ವಿದೇಶಿ ಲೀಗ್ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈ ಕುರಿತು ಸ್ವತ ರಾಬಿನ್ ಉತ್ತಪ್ಪ ಹೇಳಿಕೊಂಡಿದ್ದಾರೆ. 

ಕರ್ನಾಟಕ ಪರ ದೇಸಿ ಕ್ರಿಕೆಟ್ ಆಡುತ್ತಿದ್ದ ರಾಬಿನ್ ಉತ್ತಪ್ಪ(Robin Uthappa) ಅವಕಾಶಗಳ ಕೊರತೆಯಿಂದ ಕೇರಳಕ್ಕೆ ವಲಸೆ ಹೋಗಿದ್ದರು. ಕರ್ನಾಟಕ(Karnataka) ಪರ ರಣಜಿ ಸೇರಿದಂತೆ ದೇಸಿ ಕ್ರಿಕೆಟ್ ಆಡುತ್ತಿರುವ ರಾಬಿನ್ ಉತ್ತಪ್ಪ, ಇದೀಗ ಕೇರಳ ಕ್ರಿಕೆಟ್(Kerala Cricket) ಸಂಸ್ಥೆಯಿಂದ NOC(ಕ್ಲೀಯರೆನ್ಸ್) ಪ್ರಮಾಣ ಪತ್ರ ಪಡೆದುಕೊಂಡಿದ್ದಾರೆ. ವಿದೇಶಿ ಲೀಗ್ ಟೂರ್ನಿಗಳಲ್ಲಿ ಪಾಲ್ಗೊಳ್ಳಲು ಬಯಸಿರುವ ರಾಬಿನ್ ಉತ್ತಪ್ಪ, ಬಿಸಿಸಿಐನಿಂದ NOCಗೆ ಮನವಿ ಮಾಡಲಿದ್ದಾರೆ.

ರಾಬಿನ್ ಉತ್ತಪ್ಪ ಕುಟುಂಬಕ್ಕೆ ಹೊಸ ಅತಿಥಿ ಆಗಮನ, ಸಂತಸ ಹಂಚಿಕೊಂಡ ಅನುಭವಿ ಕ್ರಿಕೆಟಿಗ

ಈ ಕುರಿತು ಟ್ವೀಟ್ ಮಾಡಿ ಭಾವುಕ ಪತ್ರವನ್ನು ರಾಬಿನ್ ಉತ್ತಪ್ಪ ಹಂಚಿಕೊಂಡಿದ್ದಾರೆ. ಟೀಂ ಇಂಡಿಯಾ ಹಾಗೂ ಕರ್ನಾಟಕ ರಾಜ್ಯ ತಂಡ ಪ್ರತಿನಿಧಿಸಿರುವುದು ನನಗೆ ಅತ್ಯಂತ ಹೆಮ್ಮೆಯ ಹಾಗೂ ಗೌರವ ತಂದಿದೆ. ಪ್ರಸಿದ್ಧ ಮಾತಿನಂತೆ ಎಲ್ಲಾ ಉತ್ತಮ ವಿಚಾರಗಳು ಕೊನೆಗೊಳ್ಳಬೇಕು. ಕೃತಜ್ಞತೆ ಹಾಗೂ ಪ್ರೀತಿಯಿಂದ ಭಾರತೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದುತ್ತಿದ್ದೇನೆ ಎಂದು ರಾಬಿನ್ ಉತ್ತಪ್ಪ ಟ್ವೀಟ್ ಮಾಡಿದ್ದಾರೆ. ಇದೇ ಟ್ವೀಟ್‍ನಲ್ಲಿ ವಿದಾಯದ ಪತ್ಕವನ್ನು ಹಂಚಿಕೊಂಡಿದ್ದಾರೆ.

 

 

2007ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಗೆುವಿನಲ್ಲಿ ರಾಬಿನ್ ಉತ್ತಪ್ಪ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಏಕದಿನ ವಿಶ್ವಕಪ್ ಟೂರ್ನಿ  ಆಡಿದ ಉತ್ತಪ್ಪ, 2011ರಿಂದ ಟೀಂ ಇಂಡಿಯಾದಲ್ಲಿ ಅವಕಾಶ ಕಳೆದುಕೊಂಡರು. ಫಿಟ್ನೆಸ್ ಸಮಸ್ಯೆ, ಇಂಜುರಿ ಹಾಗೂ ಫಾರ್ಮ್ ಸಮಸ್ಯೆಯಿಂದ ಅವಕಾಶವಂಚಿತರಾದ ರಾಬಿನ್ ಉತ್ತಪ್ಪ, ರಣಜಿ ಹಾಗೂ ಐಪಿಎಲ್ ಟೂರ್ನಿಯಲ್ಲಿ ಅತ್ತುತ್ತಮ ಪ್ರದರ್ಶನದ ಮೂಲಕ ರಾಬಿನ್ ಉತ್ತಪ್ಪ ಮತ್ತೆ ಟೀಂ ಇಂಡಿಯಾ ಪ್ರವೇಶ ಪಡೆದರು. 36 ವರ್ಷದ ರಾಬಿನ್ ಉತ್ತಪ್ಪ, 2015ರಲ್ಲಿ ಜಿಂಬಾಬ್ವೆ ವಿರುದ್ಧ ಕೊನೆಯ ಬಾರಿಗೆ ಟಿ20 ಹಾಗೂ ಏಕದಿನ ಪಂದ್ಯ ಆಡಿದ್ದರು. ಬಳಿಕ ಟೀಂ ಇಂಡಿಯಾದಿಂದ ದೂರ ಉಳಿದಿದ್ದರು.

ಬಾಲ್ಕನಿಯಿಂದ ಜಿಗಿದು ಆತ್ಮಹತ್ಯೆಗೆ ಯೋಚಿಸಿದ್ದರಂತೆ ರಾಬಿನ್ ಉತ್ತಪ್ಪ..!

ಐಪಿಎಲ್ ಟೂರ್ನಿಯಲ್ಲಿ ರಾಬಿನ್ ಉತ್ತಪ್ಪ ಎರಡು ಚಾಂಪಿಯನ್  ತಂಡ ಭಾಗವಾಗಿದ್ದರು.  2014ರಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಹಾಗೂ 2021ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ ಟ್ರೋಫಿ ಮುಡಿಗೇರಿಸಿಕೊಳ್ಳಲು ರಾಬಿನ್ ಉತ್ತಪ್ಪ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಟೀಂ ಇಂಡಿಯಾ ಪರ 46 ಏಕದಿನ ಹಾಗೂ 13 ಟಿ20 ಪಂದ್ಯಗಳನ್ನು ಆಡಿದ್ದಾರೆ. 

Team India and Karnataka Player Robin Uthappa retires from all form of cricket shares emotional letter ckm

ಐಪಿಎಲ್‌ನ ಎಲ್ಲಾ 15 ಆವೃತ್ತಿಗಳನ್ನು ಉತ್ತಪ್ಪ ಆಡಿದ್ದಾರೆ. ಕೋಲ್ಕತಾ ನೈಟ್ ರೈಡರ್ಸ್, ಮುಂಬೈ ಇಂಡಿಯನ್ಸ್, ಪುಣೆ ವಾರಿಯರ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ರಾಜಸ್ಥಾನ ರಾಯಲ್ಸ್ ಸೇರಿ 6 ಐಪಿಎಲ್ ತಂಡದ ಪರ ಆಢಿದ್ದಾರೆ. 205 ಐಪಿಎಲ್ ಪಂದ್ಯದಲ್ಲಿ 4,952 ರನ್ ಸಿಡಿಸಿದ್ದಾರೆ. 

Follow Us:
Download App:
  • android
  • ios