T20 World Cup ನಾನ್ ಸ್ಟ್ರೈಕರ್ಸ್ ರನೌಟ್ ಬಗ್ಗೆ ದಿಟ್ಟ ನಿಲುವು ಪ್ರಕಟಿಸಿದ ಹಾರ್ದಿಕ್ ಪಾಂಡ್ಯ
ನಾನ್ ಸ್ಟ್ರೈಕರ್ ರನೌಟ್ ಬಗ್ಗೆ ಮೊದಲ ಬಾರಿಗೆ ತುಟಿಬಿಚ್ಚಿದ ಹಾರ್ದಿಕ್ ಪಾಂಡ್ಯ
ದೀಪ್ತಿ ಶರ್ಮಾ ಇಂಗ್ಲೆಂಡ್ ವಿರುದ್ದ ಮಾಡಿದ ನಾನ್ ಸ್ಟ್ರೈಕರ್ ರನೌಟ್
ಇಂಗ್ಲೆಂಡ್ ವಿರುದ್ದ 3-0 ಅಂತರದಲ್ಲಿ ಏಕದಿನ ಸರಣಿ ಕ್ಲೀನ್ ಸ್ವೀಪ್ ಮಾಡಿದ್ದ ಭಾರತ
ಮೆಲ್ಬರ್ನ್(ಅ.25): ಕಳೆದ ಸೆಪ್ಟೆಂಬರ್ 24, 2022ರಂದು ಭಾರತ ಮಹಿಳಾ ಕ್ರಿಕೆಟ್ ತಂಡದ ಆಲ್ರೌಂಡರ್ ದೀಪ್ತಿ ಶರ್ಮಾ, ನಾನ್ ಸ್ಟ್ರೈಕರ್‌ನಲ್ಲಿದ್ದ ಇಂಗ್ಲೆಂಡ್‌ನ ಚಾರ್ಲಿ ಡೀನ್ ಅವರನ್ನು ರನೌಟ್ ಮಾಡುವ ಮೂಲಕ ಭಾರತ ತಂಡವು 3-0 ಅಂತರದಲ್ಲಿ ಐತಿಹಾಸಿಕ ಏಕದಿನ ಸರಣಿ ಜಯಿಸುವಲ್ಲಿ ಯಶಸ್ವಿಯಾಗಿತ್ತು. ಲಾರ್ಡ್ಸ್ ಮೈದಾನದಲ್ಲಿ ನಡೆದ ಕೊನೆಯ ಪಂದ್ಯದಲ್ಲಿ ನಾನ್ ಸ್ಟ್ರೈಕರ್ ರನೌಟ್ ಚರ್ಚೆಯ ಕೇಂದ್ರ ಬಿಂದು ಎನಿಸಿಕೊಂಡಿತ್ತು.
ಪಂದ್ಯ ಮುಕ್ತಾಯದ ಬಳಿಕ ಪ್ರಶಸ್ತಿ ಪ್ರಧಾನ ಸಮಾರಂಭದ ವೇಳೆ, ನಿರೂಪಕರು ನಾಯಕಿ ಹರ್ಮನ್‌ಪ್ರೀತ್ ಕೌರ್‌ಗೆ ದೀಪ್ತಿ ಶರ್ಮಾ ಅವರು ರನೌಟ್ ಮಾಡಿದ ರೀತಿಯನ್ನು ಕೇಳುವ ಮೂಲಕ ಮುಜುಗರಕ್ಕೆ ಸಿಲುಕಿಸುವ ಯತ್ನ ನಡೆಸಿದ್ದರು. ಇದಕ್ಕೆ ಖಡಕ್ ಆಗಿ ಉತ್ತರಿಸಿದ ಹರ್ಮನ್‌ಪ್ರೀತ್ ಕೌರ್, ನಿಜ ಹೇಳಬೇಕೆಂದರೆ, ನೀವು ನನ್ನನ್ನು ಮೊದಲ 9 ವಿಕೆಟ್ ಕಬಳಿಸಿದ ಬಗ್ಗೆ ಕೇಳುತ್ತೀರಿ ಅಂದುಕೊಂಡಿದ್ದೆ. ಆ 9 ವಿಕೆಟ್ ಕಬಳಿಸಿದ್ದು ಸುಲಭವೇನಲ್ಲ ಎಂದು ಹರ್ಮನ್‌ಪ್ರೀತ್ ಕೌರ್ ಹೇಳಿದ್ದರು.
ದೀಪ್ತಿ ಶರ್ಮಾ ಮಾಡಿದ ರನೌಟ್ ಒಂದು ತಿಂಗಳು ಕಳೆದರೂ ಈಗಲೂ ಆಗಾಗ ಚರ್ಚೆಗೆ ಬರುತ್ತಿದೆ. ಈ ಕುರಿತಂತೆ ಕ್ರಿಕೆಟ್ ಪಂಡಿತರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಇದೀಗ ಟೀಂ ಇಂಡಿಯಾ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಮೊದಲ ಬಾರಿಗೆ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ.
T20 World Cup ನನ್ನನ್ನು ಕಾಪಾಡಿದ್ದಕ್ಕೆ ಧನ್ಯವಾದಗಳು; ಡಿಕೆ, ಅಶ್ವಿನ್‌ಗೆ ಹೀಗಂದಿದ್ದೇಕೆ..?
ನಾನ್ ಸ್ಟ್ರೈಕರ್‌ನಲ್ಲಿನ ರನೌಟ್ ಬಗ್ಗೆ ಮತ್ತೆ ಮತ್ತೆ ಮಾತನಾಡುವುದನ್ನು ಬಿಡುವುದು ಒಳ್ಳೆಯದ್ದು. ಇದು ರೂಲ್‌ನಲ್ಲಿದೆ, ಅದನ್ನು ಅವರು ಮಾಡಿದ್ದಾರೆ ಅಷ್ಟೆ. ಇದನ್ನು ಕ್ರೀಡಾ ಸ್ಪೂರ್ತಿ ಉಲ್ಲಂಘನೆ ಎನ್ನುವುದು ಸರಿಯಲ್ಲ. ವೈಯುಕ್ತಿಕವಾಗಿ ಹೇಳಬೇಕೆಂದರೇ, ಅದು ತಪ್ಪು ಎನಿಸುವುದಿಲ್ಲ. ಒಂದು ವೇಳೆ ನಾನು ಕ್ರೀಸ್‌ನಿಂದ ಹೊರಹೋಗಿದ್ದರೆ, ಯಾರಾದರೂ ನನ್ನನ್ನು ರನೌಟ್ ಮಾಡಿದರೂ ಅದನ್ನು ತಪ್ಪಾಗಿ ಭಾವಿಸುವುದಿಲ್ಲ. ಅದು ನನ್ನ ತಪ್ಪು ಎಂದುಕೊಳ್ಳುತ್ತೇನೆ ಎಂದು ಹಾರ್ದಿಕ್ ಪಾಂಡ್ಯ ಎಂದಿದ್ದಾರೆ.
ಪಾಕ್ ಎದುರು ಮಿಂಚಿದ ಹಾರ್ದಿಕ್ ಪಾಂಡ್ಯ: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಆಡಿದ ಮೊದಲ ಪಂದ್ಯದಲ್ಲಿ ರೋಚಕ ಗೆಲುವು ಸಾಧಿಸುವ ಮೂಲಕ ಶುಭಾರಂಭ ಮಾಡಿದೆ. ವಿರಾಟ್ ಕೊಹ್ಲಿ ಆಕರ್ಷಕ 82 ರನ್ ಬಾರಿಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಪಾಕಿಸ್ತಾನ ನೀಡಿದ್ದ 160 ರನ್‌ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಟೀಂ ಇಂಡಿಯಾ 31 ರನ್ ಗಳಿಸುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ 5ನೇ ವಿಕೆಟ್‌ಗೆ ಹಾರ್ದಿಕ್ ಪಾಂಡ್ಯ ಹಾಗೂ ವಿರಾಟ್ ಕೊಹ್ಲಿ ಶತಕದ ಜತೆಯಾಟವಾಡುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್‌ನಲ್ಲಿ 40 ರನ್ ಬಾರಿಸಿದರೆ, ಬೌಲಿಂಗ್‌ನಲ್ಲಿ ಪ್ರಮುಖ 3 ವಿಕೆಟ್ ಕಬಳಿಸಿ, ಪಾಕ್ ಬ್ಯಾಟಿಂಗ್ ಬೆನ್ನೆಲುಬನ್ನೇ ಮುರಿದರು.