ಮೊದಲ ಟಿ20 ಪಂದ್ಯದಲ್ಲಿ ಲಂಕಾ ಮಣಿಸಿದ ಟೀಂ ಇಂಡಿಯಾಭಾರತದ ದಾಳಿಗೆ ಸೋಲಿಗೆ ಶರಣಾದ ಶ್ರೀಲಂಕಾಸರಣಿಯಲ್ಲಿ ಟೀಂ ಇಂಡಯಾಗೆ 1-0 ಮುನ್ನಡೆ 

ಕೊಲೊಂಬೊ(ಜು.25): ಶ್ರೀಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ಟೀಂ ಇಂಡಿಯಾ ಶುಭಾರಂಭ ಮಾಡಿದೆ. ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಮಿಂಚಿನ ಪ್ರದರ್ಶನ ನೀಡೋ ಮೂಲಕ 38 ರನ್ ಗೆಲುವು ದಾಖಲಿಸಿದೆ. ಈ ಮೂಲಕ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಟೀಂ ಇಂಡಿಯಾ ನೀಡಿದ 165 ರನ್ ಟಾರ್ಗೆಟ್ ಶ್ರೀಲಂಕಾ ತಂಡಕ್ಕೆ ಆರಂಭದಲ್ಲೇ ಸವಾಲು ಒಡ್ಡಿತು. ಇದರ ಜೊತೆಗೆ ಲಂಕಾಗೆ ಉತ್ತಮ ಆರಂಭ ಸಿಗಲಿಲ್ಲ. ಮಿನೋದ್ ಬಾನುಕಾ 10 ರನ್ ಸಿಡಿಸಿ ಔಟಾದರು. ಈ ಮೂಲಕ 23 ರನ್‌ಗೆ ಶ್ರೀಲಂಕಾ ಮೊದಲ ವಿಕೆಟ್ ಕಳೆದುಕೊಂಡಿತು. 

ಧನಂಜಯ ಡಿಸಿಲ್ವ ಕೇವಲ 9 ರನ್ ಸಿಡಿಸಿ ನಿರ್ಗಮಿಸಿದರು. ಆದರೆ ಆವಿಷ್ಕಾ ಫರ್ನಾಂಡೋ ಹಾಗೂ ಚಾರಿತ್ ಅಸಲಂಕಾ ಹೋರಾಟದಿಂದ ಶ್ರೀಲಂಕಾ ಚೇತರಿಸಿಕೊಂಡಿತು. 26 ರನ್ ಸಿಡಿಸಿದ ಫರ್ನಾಂಡೋ ವಿಕೆಟ್ ಪತನ ಲಂಕಾ ತಂಡದ ಒತ್ತಡ ಹೆಚ್ಚಿಸಿತು. ಇತ್ತ ಅಶನ್ ಬಂಡಾರಾ 9ರನ್ ಸಿಡಿಸಿ ನಿರ್ಗಮಿಸಿದರು.

ದಿಟ್ಟ ಹೋರಾಟ ನೀಡಿದ ಚರಿತ್ ಅಸಲಂಕಾ 44 ರನ್ ಕಾಣಿಕೆ ನೀಡಿದರು. ಅಸಲಂಕ ಬೆನ್ನಲ್ಲೇ ವಾವಿಂಡ್ ಹಸರಂಗ ವಿಕೆಟ್ ಪತನಗೊಂಡಿತು. ನಾಯಕ ದಸೂನ್ ಶನಕ ಹಾಗೂ ಚಾಮಿಕ ಕರುಣಾರತ್ನೆ ಕಠಿಣ ಹೋರಾಟ ನೀಡಿದರು. ಚಾಮಿಕ 3 ರನ್ ಸಿಡಿಸಿ ಔಟಾದರು.

ಆಸರೆಯಾಗಿದ್ದ ದಸೂನ್ ಶನಕ 16 ರನ್ ಸಿಡಿಸಿ ನಿರ್ಗಮಿಸಿದರು. 18.3 ಓವರ್‌ಗಳಲ್ಲಿ ಶ್ರೀಲಂಕಾ ಎಲ್ಲಾ ವಿಕೆಟ್ ಕಳದುಕೊಂಡು 126 ರನ್‌ಗಳಿಗೆ ಆಲೌಟ್ ಆಯಿತು. ಇದರೊಂದಿಗೆ ಟೀಂ ಇಂಡಿಯಾ 38 ರನ್ ಗೆಲುವು ಕಂಡಿತು. ಭುವನೇಶ್ವರ್ ಕುಮಾರ್ 4 ವಿಕೆಟ್ ಕಬಳಿಸಿ ಮಿಂಚಿದರು.