Ranji Trophy Schedule: ಒಂದೇ ಗುಂಪಲ್ಲಿ ಕರ್ನಾ​ಟಕ, ತಮಿಳುನಾ​ಡು

* 2023-24ನೇ ಸಾಲಿನ ರಣಜಿ ಟ್ರೋಫಿ ಟೂರ್ನಿ ವೇಳಾಪಟ್ಟಿ ಪ್ರಕಟ
* ದಕ್ಷಿಣ ಭಾರತದ ಕರ್ನಾಟಕ, ತಮಿಳುನಾಡು ಒಂದೇ ಗುಂಪಿನಲ್ಲಿ ಸ್ಥಾನ
* ನಾಕೌಟ್‌ ಪಂದ್ಯ​ಗಳು ಫೆಬ್ರವರಿ 23ರಿಂದ ಮಾರ್ಚ್‌ 14ರ ವರೆಗೆ ನಡೆ​ಯಲಿದೆ 

Tamil Nadu Karnataka drawn in same group for Ranji Trophy 2023 24 kvn

ನವ​ದೆ​ಹ​ಲಿ(ಜೂ.19): ಮುಂದಿನ ಆವೃ​ತ್ತಿಯ ರಣಜಿ ಟ್ರೋಫಿ 2024ರ ಜನ​ವ​ರಿ 5ರಿಂದ ಆರಂಭ​ಗೊ​ಳ್ಳ​ಲಿದ್ದು, 8 ಬಾರಿ ಚಾಂಪಿ​ಯನ್‌ ಕರ್ನಾ​ಟಕ ಹಾಗೂ ತಮಿ​ಳು​ನಾಡು ತಂಡ​ಗಳು ಒಂದೇ ಗುಂಪಿ​ನಲ್ಲಿ ಸ್ಥಾನ ಪಡೆ​ದಿವೆ. ಭಾನು​ವಾರ ಬಿಸಿ​ಸಿಐ ರಣಜಿ ಟ್ರೋಫಿಯ ವೇಳಾ​ಪಟ್ಟಿ ಪ್ರಕ​ಟಿ​ಸಿತು. ಗುಂಪು ಹಂತದ ಪಂದ್ಯ​ಗಳು ಫೆಬ್ರವರಿ 19ರ ವರೆಗೆ ನಡೆ​ಯ​ಲಿದ್ದು, ಬಳಿಕ ನಾಕೌಟ್‌ ಪಂದ್ಯ​ಗಳು ಫೆಬ್ರವರಿ 23ರಿಂದ ಮಾರ್ಚ್‌ 14ರ ವರೆಗೆ ನಡೆ​ಯಲಿದೆ ಎಂದು ತಿಳಿ​ಸಿದೆ. 

ಕರ್ನಾ​ಟಕ ತಂಡ ಎಲೈಟ್‌ ‘ಸಿ’ ಗುಂಪಿ​ನ​ಲ್ಲಿದ್ದು, ಪಂಜಾಬ್‌, ತಮಿ​ಳು​ನಾಡು, ರೈಲ್ವೇಸ್‌, ಗೋವಾ, ಗುಜ​ರಾತ್‌, ತ್ರಿಪುರಾ ಹಾಗೂ ಚಂಡೀ​ಗಢ ತಂಡ​ಗಳೂ ಇದೇ ಗುಂಪಿ​ನಲ್ಲಿವೆ. ಟೂರ್ನಿ​ಯನ್ನು ತಲಾ 8 ತಂಡ​ಗಳ 4 ಎಲೈಟ್‌ ಗುಂಪು​ಗ​ಳ​ನ್ನಾಗಿ ವಿಂಗ​ಡಿ​ಸ​ಲಾ​ಗಿದ್ದು, ಅಗ್ರ 2 ತಂಡ​ಗಳು ನಾಕೌಟ್‌ ಪ್ರವೇ​ಶಿ​ಸ​ಲಿವೆ. ಕರ್ನಾ​ಟಕ 2014-15ರಲ್ಲಿ ಕೊನೆ ಬಾರಿ ಪ್ರಶಸ್ತಿ ಗೆದ್ದಿದ್ದು, ಕಳೆದ ವರ್ಷ ಸೌರಾಷ್ಟ್ರ ಚಾಂಪಿ​ಯನ್‌ ಆಗಿ​ತ್ತು.

ಕಳೆದ ಆವೃತ್ತಿಯ ರಣಜಿ ಟ್ರೋಫಿ ಟೂರ್ನಿಯಲ್ಲಿ ಕರ್ನಾಟಕ ತಂಡವು ಸೆಮೀಸ್‌ ಪ್ರವೇಶಿಸಿತ್ತಾದರೂ, ಫೈನಲ್‌ಗೇರಲು ವಿಫಲವಾಗಿತ್ತು. ಇನ್ನು ಕಳೆದ ಆವೃತ್ತಿಯಲ್ಲಿ ತಂಡಗಳು ತೋರಿದ ಪ್ರದರ್ಶನದ ಆಧಾರದಲ್ಲಿ ತಲಾ 8 ತಂಡ​ಗಳ 4 ಎಲೈಟ್‌ ಗುಂಪು​ಗ​ಳ​ನ್ನಾಗಿ ವಿಂಗ​ಡಿ​ಸ​ಲಾ​ಗಿದೆ. ಇನ್ನು ಹಾಲಿ ಚಾಂಪಿಯನ್‌ ಸೌರಾಷ್ಟ್ರ ಹಾಗೂ ಮಹಾರಾಷ್ಟ್ರ ತಂಡಗಳು ಈ ಬಾರಿ ಮತ್ತೊಮ್ಮೆ ಒಂದೇ ಗುಂಪಿನಲ್ಲಿ ಸ್ಥಾನ ಪಡೆದಿವೆ.

ಐರ್ಲೆಂಡ್‌ ಟಿ20 ಸರ​ಣಿ: ಭಾರತ ತಂಡಕ್ಕೆ ಜಸ್ಪ್ರೀತ್ ಬುಮ್ರಾ? 

ರಣಜಿ ಟ್ರೋಫಿ ವೇಳಾಪಟ್ಟಿ:

ಎಲೈಟ್‌ ಲೀಗ್ ಹಂತ: ಜನವರಿ 05ರಿಂದ ಫೆಬ್ರವರಿ 19, 2024
ಪ್ಲೇಟ್ ಲೀಗ್ ಸ್ಟೇಜ್‌: ಜನವರಿ 05ರಿಂದ ಫೆಬ್ರವರಿ 05, 2024
ಎಲೈಟ್ ನಾಕೌಟ್‌ ಹಂತ: ಫೆಬ್ರವರಿ 23ರಿಂದ ಮಾರ್ಚ್ 14, 2024

ಗುಂಪುಗಳ ವಿವರ

ಎಲೈಟ್ ಗ್ರೂಪ್ 'ಎ': ಸೌರಾಷ್ಟ್ರ, ಜಾರ್ಖಂಡ್, ಮಹಾರಾಷ್ಟ್ರ, ರಾಜಸ್ಥಾನ, ವಿದರ್ಭ, ಹರ್ಯಾಣ, ಸರ್ವೀಸಸ್, ಮಣಿಪುರ

ಎಲೈಟ್ ಗ್ರೂಪ್ 'ಬಿ': ಬೆಂಗಾಲ್, ಆಂಧ್ರ, ಮುಂಬೈ, ಕೇರಳ, ಚತ್ತೀಸ್‌ಘಡ, ಉತ್ತರಪ್ರದೇಶ, ಅಸ್ಸಾಂ, ಬಿಹಾರ.

ಎಲೈಟ್ ಗ್ರೂಪ್ 'ಸಿ': ಕರ್ನಾಟಕ, ಪಂಜಾಬ್, ರೈಲ್ವೇಸ್, ತಮಿಳುನಾಡು, ಗೋವಾ, ಗುಜರಾತ್, ತ್ರಿಪುರ, ಚಂಢೀಗಢ

ಎಲೈಟ್ ಗ್ರೂಪ್ 'ಡಿ': ಮಧ್ಯಪ್ರದೇಶ, ಉತ್ತರಾಖಂಡ, ಹಿಮಾಚಲ ಪ್ರದೇಶ, ಬರೋಡ, ಡೆಲ್ಲಿ, ಒಡಿಶಾ, ಪಾಂಡಿಚೆರಿ, ಜಮ್ಮು ಮತ್ತು ಕಾಶ್ಮೀರ.

ಪ್ಲೇಟ್ ಗ್ರೂಪ್: ನಾಗಾಲ್ಯಾಂಡ್, ಹೈದರಾಬಾದ್, ಮೇಘಾಲಯ, ಸಿಕ್ಕಿಂ, ಮಿಝೋರಾಂ, ಅರುಣಾಚಲ ಪ್ರದೇಶ.

ಇನ್ನು ಇದೇ ವೇಳೆ ಸಯ್ಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿ ಹಾಗೂ ವಿಜಯ್ ಹಜಾರೆ ಏಕದಿನ ಟೂರ್ನಿಗೂ ವೇಳಾಪಟ್ಟಿ ಪ್ರಕಟವಾಗಿದೆ. ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯ ಲೀಗ್ ಹಂತದ ಪಂದ್ಯಗಳು ಅಕ್ಟೋಬರ್ 16ರಿಂದ 27ರ ವರೆಗೆ ನಡೆಯಲಿದೆ. ಈ ಪಂದ್ಯಾವಳಿಯ ಲೀಗ್ ಹಂತದ ಪಂದ್ಯಗಳು ಮೊಹಾಲಿ, ಮುಂಬೈ, ರಾಂಚಿ, ಜೈಪುರ ಹಾಗೂ ಡೆಹ್ರಾಡೂನ್‌ನಲ್ಲಿ ನಡೆಯಲಿವೆ. ಇನ್ನು ನಾಕೌಟ್ ಪಂದ್ಯಗಳಿಗೆ ಮೊಹಾಲಿ ಆತಿಥ್ಯ ವಹಿಸಲಿದ್ದು, ಅಕ್ಟೋಬರ್ 31ರಿಂದ ಆರಂಭವಾಗಲಿರುವ ನಾಕೌಟ್ ಪಂದ್ಯಗಳು ನವೆಂಬರ್ 06ರಂದು ಫೈನಲ್‌ ಪಂದ್ಯ ಜರುಗಲಿದೆ. ಸಯ್ಯದ್‌ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಕರ್ನಾಟಕ ತಂಡವು 'ಇ' ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಇದೇ ಗುಂಪಿನಲ್ಲಿ ಡೆಲ್ಲಿ, ತಮಿಳುನಾಡು, ಉತ್ತರಪ್ರದೇಶ, ಮಧ್ಯಪ್ರದೇಶ, ತ್ರಿಪುರ ಹಾಗೂ ನಾಗಾಲ್ಯಾಂಡ್ ತಂಡಗಳು ಸ್ಥಾನ ಪಡೆದಿವೆ.

ಇನ್ನು ವಿಜಯ್ ಹಜಾರೆ ಏಕದಿನ ಸರಣಿಯ ಲೀಗ್ ಹಂತದ ಪಂದ್ಯಗಳು ನವೆಂಬರ್ 23ರಿಂದ ಡಿಸೆಂಬರ್ 05ರ ವರೆಗೆ ನಡೆಯಲಿದ್ದು, ಲೀಗ್ ಹಂತದ ಪಂದ್ಯಗಳು ತಿರುವನಂತಪುರಂ, ಬೆಂಗಳೂರು, ಜೈಪುರ, ಚಂಢೀಗಢ ಹಾಗೂ ಅಹಮದಾಬಾದ್‌ನಲ್ಲಿ ನಡೆಯಲಿವೆ. ಇನ್ನು ನಾಕೌಟ್ ಪಂದ್ಯಗಳು ಡಿಸೆಂಬರ್ 09ರಿಂದ 16ರವರೆಗೆ ರಾಜ್‌ಕೋಟ್‌ನಲ್ಲಿ ನಡೆಯಲಿವೆ. ಇನ್ನು ವಿಜಯ್ ಹಜಾರೆ ಟೂರ್ನಿಯಲ್ಲಿ ಕರ್ನಾಟಕ ತಂಡವು 'ಸಿ' ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಇದೇ ಗುಂಪಿನಲ್ಲಿ ಜಮ್ಮು ಮತ್ತು ಕಾಶ್ಮೀರ, ಚಂಢೀಗಢ, ಹರ್ಯಾಣ, ಡೆಲ್ಲಿ, ಉತ್ತರಖಂಡ, ಬಿಹಾರ, ಮಿಝೋರಾಂ ತಂಡಗಳು ಸ್ಥಾನ ಪಡೆದಿವೆ.

Latest Videos
Follow Us:
Download App:
  • android
  • ios