ರಾಜಸ್ಥಾನದಲ್ಲಿ ಆಯೋಜಿಸಿದ್ದ ಕ್ರಿಕೆಟ್ ಟೂರ್ನಮೆಂಟ್ ತಾಲಿಬಾನ್ ಟ್ರಿಗರ್ಸ್ ಹೆಸರಿನ ತಂಡ ನೋಂದಣಿ ಆಕ್ರೋಶದ ಬೆನ್ನಲ್ಲೇ ತಂಡದ ಮೇಲೆ ನಿಷೇಧ ಹೇರಿದ ಆಯೋಜಕರು

ಜೈಸಾಲ್ಮೆರ್(ಆ.23): ತಾಲಿಬಾನ್ ಉಗ್ರ ಸಂಘಟನೆ ಹೆಸರು ವಿಶ್ವದೆಲ್ಲಡೆ ಕೇಳಿಬರುತ್ತಿದೆ. ಆಫ್ಘಾನಿಸ್ತಾನ ಆಕ್ರಮಿಸಿಕೊಂಡು ತನ್ನ ಕಪಿಮುಷ್ಠಿಯಲ್ಲಿಟ್ಟುಕೊಂಡಿರುವ ತಾಲಿಬಾನ್ ಉಗ್ರರು, ನರಮೇಧವನ್ನೇ ನಡೆಸುತ್ತಿದ್ದಾರೆ. ಸಿಕ್ಕ ಸಿಕ್ಕವರಿಗೆ ಗುಂಡು ಹೊಡೆಯುತ್ತಾ ಕೌರ್ಯ ಮೆರೆಯುತ್ತಿದ್ದಾರೆ. ತಾಲಿಬಾನ್ ಹೆಸರು ಕೇಳಿದರೆ ಸಾಕು, ಆಕ್ರೋಶ ಉಕ್ಕಿ ಬರುತ್ತದೆ. ಪರಿಸ್ಥಿತಿ ಈ ರೀತಿ ಇರುವ ಸಂದರ್ಭದಲ್ಲಿ ತಾಲಿಬಾನ್ ಟ್ರಿಗರ್ಸ್ ಅನ್ನೋ ಕ್ರಿಕೆಟ್ ತಂಡ ಭಾರತೀಯರ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.

'ಗುಂಡಿಟ್ಟು ಮಹಿಳೆಯರ ಕೊಂದು ಶವದೊಂದಿಗೆ ತಾಲೀಬಾನಿಗಳ ಸೆಕ್ಸ್'

ರಾಜಸ್ಥಾನ ಜೈಸಾಲ್ಮೇರ್ ಜಿಲ್ಲೆಯ ಬನಿಯಾನ ಗ್ರಾಮದಲ್ಲಿ ಸ್ಥಳೀಯ ಕ್ರಿಕೆಟ್ ಟೂರ್ನಮೆಂಟ್ ಆಯೋಜಿಸಲಾಗಿತ್ತು. ಈ ಟೂರ್ನಮೆಂಟ್‌ಗೆ ಹಲವು ತಂಡಗಳು ಹೆಸರು ನೊಂದಣಿ ಮಾಡಿಕೊಂಡಿದೆ. ಪಂದ್ಯ ಆರಂಭಗೊಂಡ ಆಯೋಜಕರಿಗೆ ಅಚ್ಚರಿ ಕಾದಿತ್ತು. ಒಂದು ತಂಡದ ಹೆಸರು ತಾಲಿಬಾನ್ ಟ್ರಿಗರ್ಸ್ ಎಂದು ನೊಂದಣಿ ಮಾಡಲಾಗಿದೆ.

ಅಷ್ಟರಲ್ಲಿ ಟೂರ್ನಮೆಂಟ್‌ನಲ್ಲಿ ಪಾಲ್ಗೊಳ್ಳುತ್ತಿರುವ ತಂಡಗಳ ಹೆಸರು ರಾಜಸ್ಥಾನದಲ್ಲಿ ವೈರಲ್ ಆಗಿದೆ. ಅಷ್ಟರಲ್ಲೇ ಆಯೋಜಕರು ತಂಡವನ್ನು ನಿಷೇಧಿಸಿದ್ದಾರೆ. ತಾಲಿಬಾನ್ ಟ್ರಿಗರ್ಸ್ ತಂಡಕ್ಕೆ ಒಂದು ಪಂದ್ಯ ಆಡಲು ಅವಕಾಶ ನೀಡಿಲ್ಲ. ಇತ್ತ ಮಾಧ್ಯಮದಲ್ಲಿ ತಾಲಿಬಾನ್ ಟ್ರಿಗರ್ಸ್ ಹೆಸರಿನ ಚರ್ಚೆ ಆರಂಭಗೊಂಡಿದೆ.

ಅಪ್ಘಾನ್‌ನಲ್ಲಿ ಬೇರಾವ ದೇಶವೂ ಭಾರತ ಸರ್ಕಾರದ ಹಾಗೆ ತನ್ನ ನಾಗರಿಕರ ರಕ್ಷಣೆ ಮಾಡುತ್ತಿಲ್ಲ

ಪಂದ್ಯ ಆಯೋಜಕರು ಈ ಕುರಿತು ಸ್ಪಷ್ಟನೆ ನೀಡಿದ್ದಾರೆ. ಅಜಾಗರೂಕತೆಯಿಂದ ಈ ಹೆಸರು ನೊಂದಾಯಿಸಲಾಗಿದೆ. ನಮ್ಮ ಗಮನಕ್ಕೆ ಬಂದ ತಕ್ಷಣ ತಂಡದ ಮೇಲೆ ನಿಷೇಧ ಹೇರಲಾಗಿದೆ. ನಾವು ಆಯೋಜಿಸುವ ಯಾವುದೇ ಟೂರ್ನಮೆಂಟ‌ಗೆ ಅವಕಾಶ ನೀಡುವುದಿಲ್ಲ. ಅಜಾಗರೂಕತೆಯಿಂದ ಆದ ನೊಂದಣಿಗೆ ಆಯೋಜಕರ ಪರವಾಗಿ ಹಾಗೂ ಗ್ರಾಮಸ್ಥರ ಪರವಾಗಿ ಕ್ಷಮೆ ಇರಲಿ ಎಂದು ಆಯೋಜಕರು ಹೇಳಿದ್ದಾರೆ.

ತಾಲಿಬಾನ್ ಟ್ರಿಗರ್ಸ್ ತಂಡದ ಹೆಸರು ಭಾರಿ ಸಂಚಲ ಮೂಡಿಸಲು ಮತ್ತೊಂದು ಕಾರಣವಿದೆ. ಕ್ರಿಕೆಟ್ ಆಯೋಜಿಸಿದ್ದ ಗ್ರಾಮ, ಪೋಖ್ರಾನ್‌ಗಿಂತ 36 ಕಿ.ಮೀ ದೂರದಲ್ಲಿದೆ. ಪೋಖ್ರಾನ್ ಭಾರತ ಹಾಗೂ ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿಗೆ ಸಮೀಪವಾಗಿದೆ. ಅಲ್ಪಸಂಖ್ಯಾತ ಸಮುದಾಯ ಜನಸಂಖ್ಯೆ ಇಲ್ಲಿ ಹೆಚ್ಚಿದೆ.